
ನಟ ದುನಿಯಾ ವಿಜಯ್ ಚಿತ್ರದುರ್ಗದ ಹಿರಿಯೂರಿನಲ್ಲಿ ಉದ್ಯಾನವನ್ನು ಉದ್ಘಾಟಿಸಿದ್ದಾರೆ. ಎಪಿಎಂಸಿ ಅವರಣದ ಮುಖ್ಯದ್ವಾರದಲ್ಲಿರುವ ಪುತ್ಥಳಿಗೆ 'ಬಂಗಾರದ ಮನುಷ್ಯ' ಉದ್ಯಾನವೆಂದು ನಾಮಕರಣ ಮಾಡಲಾಗಿದೆ.
ಜೊಮ್ಯಾಟೋ ಬಾಯ್ ಕಾಮರಾಜ್ ಪರ ನಿಂತ ದುನಿಯಾ ವಿಜಯ್; ಅನ್ಯಾಯ ಆಗಬಾರದು!
ಡಾ.ರಾಜ್‌ಕುಮಾರ್‌ರನ್ನು ಹೋಲುವ ಬಂಡಿ ಓಡಿಸುತ್ತಿರುವ ರೈತ ಪುತ್ಥಳಿಯೊಂದು ಸುಮಾರು ವರ್ಷಗಳಿಂದ ಇತ್ತು. ಅದರ ಜೊತೆಗೆ ನಾಯಿ, ಹಾಲು ಕುಡಿಯುತ್ತಿರುವ ಹಸುವಿನ ಪುತ್ಥಳಿಯೂ ಇತ್ತು. ಬಿಸಿಲು, ಗಾಳಿ ಮಳೆಯಿಂದ ಪುತ್ಥಳಿ ಬೀಳುವ ಹಂತಕ್ಕೆ ಬಂದಿತ್ತು. ಡಾ.ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಪ್ರಸನ್ನ ಪ್ರತಿಮೆಗೆ ಹೊಸ ರೂಪ ನೀಡುವ ಮೂಲಕ ರಾಜಣ್ಣನಿಗೆ ಗೌರವ ಸಲ್ಲಿಸಿದ್ದಾರೆ.
'ಈ ಪುತ್ಥಳಿಗೆ ಮೂಲ ರೂಪ ಕೊಡಿಸಿರುವ ಪ್ರತನ್ನ ಅವರು ಡಾ.ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ರೈತರ ಬದುಕು ಬಾಡದಂತೆ ನೋಡಿಕೊಳ್ಳಬೇಕೆಂಬ ಸಂದೇಶವನ್ನೂ ಈ ಮೂಲಕ ಸಾರಿದ್ದಾರೆ,' ಎಂದು ದುನಿಯಾ ವಿಜಯ್ ಮಾತನಾಡಿದ್ದಾರೆ. ಪುತ್ಥಳಿಗೆ ಹೊಸ ರೂಪ ತಂದು ಕೊಟ್ಟ ಕಲಾವಿದ ಸಂಗಮೇಶ್ ಇಂಥ ಜನಪರ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.