
ಕೆ. ರಮೇಶ್ ಕಾಮತ್ ನಿರ್ದೇಶನದ ಅಪ್ಸರಧಾರ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮಕ್ಕಳ ಚಲನಚಿತ್ರ ಎಂಬ ಪ್ರಮಾಣ ಪತ್ರ ನೀಡಿದೆ. ಯಶಸ್ಸಿಗೆ ಶಾರ್ಟ್‌ಕಟ್ ಇಲ್ಲ, ವಿದ್ಯಾಭ್ಯಾಸ ಪಡೆಯುವ ಹಕ್ಕಿಗೆ ಲಿಂಗಬೇಧ ಇಲ್ಲ ಎಂಬ ಸಂದೇಶ ಸಾರುವ ಈ ಚಿತ್ರವನ್ನು ಅಕ್ಟೋಬರ್ 27 ರ ಭಾನುವಾರ ಅನಂತನಾಗ್ ಲೋಕಾರ್ಪಣೆ ಮಾಡಲಿದ್ದಾರೆ.
ಆಪರೇಶನ್ ಅಲಮೇಲಮ್ಮ ನಟನಿಗೆ ಕಂಕಣ ಭಾಗ್ಯ, ನ. 10 ಕ್ಕೆ ವಿವಾಹ
ಪ್ರೀಮಿಯರ್ ಪ್ರದರ್ಶನ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿದೆ. ಕೊಂಕಣಿಯಲ್ಲಿ ಇದುವರೆಗೆ 6 ಸಿನಿಮಾಗಳು ನಿರ್ಮಾಣವಾಗಿವೆ. ಅವುಗಳ ಪೈಕಿ ಮೂರು ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದವರು ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್ ಪದವೀಧರ ಕೆ. ರಮೇಶ್ ಕಾಮತ್. ಸಾರಸ್ವತ ಕೊಂಕಣಿ ಭಾಷೆಯ ಮೇಲಿನ ಅಭಿಮಾನದಿಂದ ಅವರು ಮೂರು ಸಿನಿಮಾಗಳನ್ನು ಕೊಂಕಣಿ ಭಾಷೆಗೆ ಕೊಟ್ಟಿದ್ದಾರೆ.
ಉತ್ತರ ಕನ್ನಡದ ಶಿರಸಿ, ಯಾಣ, ಈಜಿಪ್ಟ್‌ನ ಪಿರಮಿಡ, ಸ್ಪಿಂಕ್ಸ್ ಮುಂದೆಯೂ ಅಪ್ಸರಧಾರ ಚಿತ್ರೀಕರಣಗೊಂಡಿದೆ. ಈಜಿಪ್ಟ್ ದೃಶ್ಯಗಳನ್ನು ಥ್ರೀಡಿ ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾಗಿದೆ. ಬಾಲ ಕಲಾವಿದರಾದ ಸಾರ್ಥಕ್ ಶೆಣೈ ಮತ್ತು ಸ್ವಾತಿ ಭಟ್ ಮುಖ್ಯ ಪಾತ್ರವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.