ಅನಂತ್ ನಾಗ್ ಪುತ್ರಿ ಯಾಕೆ ಸಿನಿಮಾ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡುವ ಹಲವರಿಗೆ ಉತ್ತರ ಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ವರ್ಸಟೈಲ್ ನಟ ಅನಂತ್ ನಾಗ್ ಮತ್ತು ಗಾಯಿತ್ರಿ ಅವರ ಮುದ್ದಾದ ಮಗಳು ಅದಿತಿ ನಾಗ್ ಸಿನಿಮಾ ರಂಗದಲ್ಲಿ ಇರಬೇಕಿತ್ತು ಕುಟುಂಬದ ಲೆಗೆಸಿ ಮುಂದುವರೆಸಿ ಕೊಂಡು ಹೋಗಬೇಕಿತ್ತು ಎಂದು ಆಗಾಗ ಅಭಿಮಾನಿಗಳು ಚರ್ಚೆ ಮಾಡುತ್ತಾರೆ. ಪತ್ನಿ ನಟನೆಯಿಂದ ದೂರ ಉಳಿದಿರಲು ಕಾರಣವೇನು ಎಂದು ಸಾಕಷ್ಟು ಸಲ ಅನಂತ್ ಹೇಳಿದ್ದಾರೆ, ಮೊದಲ ಸಲ ಮಗಳ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.
'ನನ್ನ ಪತ್ನಿ ಅವರ ತಾಯಿ ರಂಗಭೂಮಿಯಲ್ಲಿದ್ದರು. ನಿಮ್ಮಂತೆ ನಟನೆಯಲ್ಲಿ ವಿಶೇಷವಾಗಿ ಅಭಿರುಚಿ ಇಲ್ಲ ಅದಿಕ್ಕೆ ನೀವು ನನಗೆ ಅಕ್ಟ್ ಮಾಡು ಎಂದು ಹೇಳಬಾರದು ನನಗೆ ಆಕ್ಟ್ ಮಾಡುವುದಕ್ಕೆ ಇಷ್ಟವಿಲ್ಲ. ವಯಸ್ಸಾದ ಮೇಲೆ ನಾನು ಅತ್ತೆ ತಾಯಿ ಪಾತ್ರಗಳನ್ನು ಮಾಡುವುದಕ್ಕೆ ಇಷ್ಟ ಪಡುವುದಿಲ್ಲ ಹೀಗಾಗಿ ಸಿನಿಮಾ ಮಾಡು ಎಂದು ನೀವು ಯಾವತ್ತೂ ಹೇಳಬಾರದು ಎಂದು ಕಂಡಿಷನ್ ಹಾಕಿದ್ದರು. ಜನರು ಎನು ತಿಳಿದುಕೊಳ್ಳುತ್ತಾರೆ ನಾನು ನಿನ್ನನ್ನು ನಟನೆಯಿಂದ ದೂರ ಮಾಡಿದ್ದೀನಿ ನಿಲ್ಲಿಸಿದ್ದೀನಿ ಅಂದುಕೊಳ್ಳುತ್ತಾರೆ ಅಂತ ಹೇಳಿದೆ ಆದರೆ ಆಕೆ ದೃಢ ನಿರ್ಧಾರ ಮಾಡಿದ್ದರು' ಎಂದು ಅನಂತ್ ನಾಗ್ ಮಾತನಾಡಿದ್ದಾರೆ.
'ನನ್ನ ಮಗಳು ಕಥಕ್ ನೃತ್ಯ ಕಲಿತಿದ್ದಾಳೆ ಆದರೆ ಸಿನಿಮಾ ಬಗ್ಗೆ ಅಷ್ಟು ಆಸಕ್ತಿ ಇಲ್ಲ. ಒಂದೆರಡು ಸಲ ನಿರ್ಮಾಪಕ ನಿರ್ದೇಶಕ ಸ್ನೇಹಿತರು ನನ್ನನ್ನು ಕೇಳಿದ್ದರು ಅದಿಕ್ಕೆ ಮಗಳ ಜೊತೆ ಮಾತನಾಡಿದೆ ಆಕೆ ಇಷ್ಟವಿಲ್ಲ ಎಂದು ಹೇಳಿದ್ದೀನಿ ಎಂದಳು. ನಾನು ನಟ ನಿಮ್ಮ ತಾಯಿನೂ ನಟಿ ಲೆಕ್ಕಕ್ಕೆ ಒಂದೆರಡು ಸಿನಿಮಾ ಮಾಡಬಹುದಾ ಎಂದು ಒತ್ತಾಯ ಮಾಡಿ ಕೇಳಿದಕ್ಕೆ ಕಣ್ಣೀರಾಕಿ ಬಿಟ್ಟಳು. ಇಷ್ಟವಿಲ್ಲ ಅಂದ್ರು ಒತ್ತಾಯ ಮಾಡುತ್ತಿದ್ದೀರಿ ಎಂದಳು. ಬೇಡಮ್ಮಾ ನೀನು ಕಣ್ಣೀರು ಹಾಕೋದು ಬೇಡ..ಸಿನಿಮಾ ಬೇಡ ಅಂದ್ರೆ ಬೇಡ ಬಿಡು ಎಂದೆ' ಎಂದು ಅನಂತ್ ನಾಗ್ ವೈರಲ್ ಆದ ವೀಡಿಯೋವೊಂದರಲ್ಲಿ ಹೇಳಿದ್ದಾರೆ.
undefined
ಇತ್ತೀಚಿನ ಸಂದರ್ಶನ:
'ನನ್ನ ಹೆಂಡತಿನ ಮದುವೆ ಅದಾಗ ಒಂದು ಕಂಡಿಷನ್ ಹಾಕಿದ್ದರು...ನನ್ನನ್ನು ಸಿನಿಮಾ ಕೆಲಸಕ್ಕೆ ಫೋರ್ಸ್ ಮಾಡಬಾರದು ಅನಿಸಿದ್ದರೆ ಮಾಡುತ್ತೀನಿ ಇಲ್ಲ ಅಂದ್ರೆ ಇಲ್ಲ ಹಾಗೆ ಹೇಳಿ ಸಿನಿಮಾ ಆಕ್ಟಿಂಗ್ ನಿಲ್ಲಿಸಿ ಬಿಟ್ಟರು. ಈಗ ಅವರು ಹೌಸ್‌ವೈಫ್ ಸಿನಿಮಾ ಕೆಲಸಗಳನ್ನು ನಿಲ್ಲಿಸಿಬಿಟ್ಟರು ಆದರೆ ನನ್ನ ಡೇಟ್ಸ್, ಫಿನಾನ್ಸ್ ಮತ್ತು ಟ್ಯಾಕ್ಸ್ ನೋಡಿಕೊಳ್ಳುತ್ತಾರೆ. ಆಕೆ 75% ಕೆಲಸ ಮಾಡುತ್ತಾರೆ ನಾನು ಕೇವಲ 25% ಕೆಲಸ ಮಾಡುವುದು. ನಾನು ನಟನೆ ಬಿಟ್ಟರೆ ಬೇರೆ ಏನೂ ಕೆಲಸ ಮಾಡುವುದಿಲ್ಲ' ಎಂದು ಅನಂತ್ ನಾಗ್ ಹೇಳಿದ್ದಾರೆ.
Exclusive Interview ಈವರೆಗೆ ಇಂಥಾ ಪಾತ್ರ ಮಾಡಿಲ್ಲ: ಅನಂತ್‌ನಾಗ್
ಅನಂತ್ ನಾಗ್ ಪುತ್ರಿ ಅದಿತಿ ನವೆಂಬರ್ 10, 2013ರರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹುಕಾಲದ ಗೆಳೆಯ ವಿವೇಕ್‌ರನ್ನು ಮನಸಾರೆ ಪ್ರೀತಿಸಿ ಗುರು ಹಿರಿಯರ ಆಶೀರ್ವಾದ ಪಡೆದು ಮದುವೆಯಾದರು. ವಿವೇಕ್ ಮೂಲತಃ ಪುತ್ತೂರಿನ ವಿಟ್ಲ ಸಮೀಪದ ಚಂದಾಡಿಯವರು.