'ಡಿವೋರ್ಸ್‌ ಬಗ್ಗೆ ಗೊತ್ತೇ ಇಲ್ಲ' ಎಂದ Actor Ajay Rao; ಅನುಶ್ರೀ ಚಾನೆಲ್‌ಗೆ ನೀಡಿದ್ದ ಈ ದಂಪತಿಯ ಇಂಟರ್‌ವ್ಯೂ ಡಿಲಿಟ್!

Published : Aug 16, 2025, 04:20 PM IST
actor ajay rao reaction on divorce news wife sapna

ಸಾರಾಂಶ

Actor Ajay Rao And Sapna Divorce: ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್ ಹಾಗೂ ಸಪ್ನಾ ಅವರು ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಪತ್ನಿಯೇ ಕೌಟುಂಬಿಕ ಹಿಂಸೆ ಎಂದು ಕೋರ್ಟ್‌ ಮೆಟ್ಟಿಲೇರಿದ್ದಾರಂತೆ. 

ನಟ ಅಜಯ್‌ ರಾವ್‌ ಪತ್ನಿ ಸಪ್ನಾ ರಾವ್‌ ಅವರು ( Actor Ajay Rao wife Sapna Divorce ) ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾರೆ. ಕೌಟುಂಬಿಕ ದೌರ್ಜನ್ಯದ ಆರೋಪ ಹೇಳಿ, ಅಜಯ್‌ ರಾವ್‌ ಅವರ ವಿರುದ್ಧ ಸಪ್ನಾ ಕೋರ್ಟ್‌ ಮೆಟ್ಟಿಲೇರಿದ್ದರು ಎನ್ನಲಾಗಿದೆ.

ಅನ್‌ಫಾಲೋ ಮಾಡ್ಕೊಂಡ ದಂಪತಿ!

ಸಪ್ನಾ ರಾವ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪತಿ ಜೊತೆಗಿರುವ ಎಲ್ಲ ಫೋಟೋಗಳನ್ನು ಕೂಡ ಡಿಲಿಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಜಯ್‌ ರಾವ್‌ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಅಜಯ್‌ ರಾವ್‌ ಕೂಡ ಪತ್ನಿಯ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಅನ್‌ಫಾಲೋ ಮಾಡಿದ್ದಾರೆ.

ಹೆಸರು ಬದಲಾಯಿಸಿಕೊಂಡ ಸಪ್ನಾ!

ಡಿವೋರ್ಸ್‌ ವಿಚಾರವಾಗಿ ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿರೋ ಅಜಯ್‌ ರಾವ್‌, “ನನಗೆ ಈ ಬಗ್ಗೆ ಗೊತ್ತಿಲ್ಲ, ಪತ್ನಿ ಜೊತೆ ಮಾತನಾಡಿ ಹೇಳ್ತೀನಿ” ಎಂದಿದ್ದಾರೆ. ಅಜಯ್‌ ರಾವ್‌ ಹಾಗೂ ಸ್ವಪ್ನಾ ರಾವ್‌ ಅವರು ಈಗ ಮೊಬೈಲ್‌ ಸ್ವಿಚ್‌ಆಫ್‌ ಮಾಡಿದ್ದಾರೆ. ಸದ್ಯ ಈ ವಿಷಯದ ಬಗ್ಗೆ ಅಜಯ್‌, ಸಪ್ನಾ ಅವರಾಗಲೀ ಸರಿಯಾಗಿ ಸ್ಪಷ್ಟನೆ ಕೊಡುತ್ತಿಲ್ಲ, ಇನ್ನು ಸೋಶಿಯಲ್‌ ಮೀಡಿಯಾದಲ್ಲಿಯೂ ಅನ್‌ಫಾಲೋ ಮಾಡಿದ್ದು, ಸಪ್ನಾ ಅವರು ತಮ್ಮ ಹೆಸರಿನ ಮುಂದಿದ್ದ ಅಜಯ್‌ ರಾವ್‌ ಹೆಸರನ್ನು ಕಿತ್ತು ಹಾಕಿ ಸಪ್ನಾ ಎಚ್‌ ಎನ್‌ ಎಂದು ಕೂಡ ಸೇರಿಸಿಕೊಂಡಿರೋದು ಆಶ್ಚರ್ಯ ತರಿಸಿದೆ.

ಜ್ಯೋತಿಷ್ಯದಂತೆ ಆಯ್ತಾ?

ನಾಲ್ಕು ತಿಂಗಳ ಹಿಂದಷ್ಟೇ ನೀಡಿದ ಸಂದರ್ಶನದಲ್ಲಿ “ತನಗೆ ಜ್ಯೋತಿಷ್ಯ ಗೊತ್ತು, ಆದರೆ ಜಾಸ್ತಿ ಫಾಲೋ ಮಾಡೋದಿಲ್ಲ. ಜ್ಯೋತಿಷ್ಯಕ್ಕೂ ಮೀರಿದ ಜೀವನವಿದೆ” ಎಂದು ಅವರು ಹೇಳಿದ್ದರು. “ತಪ್ಪಾದ ಮುಹೂರ್ತದಲ್ಲಿ ಮದುವೆಯಾದೆವು, ಜ್ಯೋತಿಷಿ ಹೇಳುವಂತೆ ನಾವು ಮದುವೆಯಾಗಿ ಒಂದು ವರ್ಷಕ್ಕೆ ಡಿವೋರ್ಸ್‌ ಆಗಬೇಕಿತ್ತು, ನಾವು ಮದುವೆಯಾಗಿ ಹತ್ತು ವರ್ಷ ಆಗಿದೆ, ಇಬ್ಬರೂ ಚೆನ್ನಾಗಿದ್ದೇವೆ” ಎಂದು ಸಂದರ್ಶನದಲ್ಲಿ ಹೇಳಿದ್ದರು. ಯಾರ ಕಣ್ಣು ಬಿತ್ತೋ ಏನೋ ಈ ಜೋಡಿ ಈಗ ಕೋರ್ಟ್‌ ಮೆಟ್ಟಿಲೇರಿದೆ.

ಅನುಶ್ರೀಗೆ ನೀಡಿದ್ದ ಇಂಟರ್‌ವ್ಯೂ ಡಿಲಿಟ್!‌

ಅಜಯ್‌ ಹಾಗೂ ಸಪ್ನಾ ರಾವಾ ವರು ಕೆಲವೇ ತಿಂಗಳುಗಳ ಹಿಂದೆ ಅನುಶ್ರೀ ಯುಟ್ಯೂಬ್‌ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಆ ಸಂದರ್ಶನ ಕೂಡ ಈಗ ಡಿಲಿಟ್‌ ಆಗಿರೋದು ಆಶ್ಚರ್ಯ ಮೂಡಿಸಿದೆ. ಅಜಯ್‌ ದಂಪತಿಯೇ ಹೇಳಿ ಈ ಇಂಟರ್‌ವ್ಯೂ ಡಿಲಿಟ್‌ ಮಾಡಿಸಿರುವ ಸಾಧ್ಯತೆ ಜಾಸ್ತಿ ಇದೆ.

ಗೃಹ ಪ್ರವೇಶ

ಕಳೆದ ವರ್ಷ ಅಜಯ್‌ ರಾವ್‌ ಅವರು ಹೊಸ ಮನೆಗೆ ಕಾಲಿಟ್ಟಿದ್ದರು. ಗೃಹ ಪ್ರವೇಶ ಆಗಿ ಒಂದು ವರ್ಷ ಕೂಡ ಕಳೆದಿಲ್ಲ. ಅಜಯ್‌ ರಾವ್‌ ಅವರೇ ಹೇಳಿಕೊಂಡಂತೆ, ಸಾಕಷ್ಟು ವರ್ಷಗಳ ಕಾಲ ಹೀರೋ ಆಗಿ ದುಡಿದರೂ ಕೂಡ ಸ್ವಂತ ಮನೆ ಮಾಡಲು ಆಗಿರಲಿಲ್ಲ. ಮದುವೆ ಕೂಡ ಸಿಂಪಲ್‌ ಆಗಿದ್ದು, ಗ್ರ್ಯಾಂಡ್‌ ಆಗಿ ಗೃಹ ಪ್ರವೇಶ ಮಾಡಿದ್ದರು. ಸಾಕಷ್ಟು ತಾರೆಯರು ಈ ಕಾರ್ಯಕ್ರಮಕ್ಕೆ ಹೋಗಿ ಈ ದಂಪತಿಗೆ ಶುಭ ಹಾರೈಸಿದ್ದರು.

ಅಜಯ್‌ ರಾವ್‌ ಅವರು ಇತ್ತೀಚೆಗೆ ʼಯುದ್ಧಕಾಂಡʼ ಸಿನಿಮಾದಲ್ಲಿ ನಟಿಸಿದ್ದಲ್ಲದೆ, ನಿರ್ಮಾಣ ಕೂಡ ಮಾಡಿದ್ದರು. ಈ ಚಿತ್ರಕ್ಕೋಸ್ಕರ ಅವರು ಸಾಲ ಕೂಡ ಮಾಡಿದ್ದರು, ʼಕೃಷ್ಣ ಲೀಲಾʼ, ʼಎಕ್ಸ್‌ಕ್ಯೂಸ್‌ ಮೀʼ, ʼಕೃಷ್ಣ ರುಕ್ಕುʼ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ