ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಉತ್ತರ ಕೊಟ್ಟ ಹಿರಿಯ ನಟಿ ಮಾಧುರಿ. ಹೆಣ್ಣು ಮಕ್ಕಳಿಗೆ ಮೊದಲು ಗೌರವ ಕೊಡಿ ಎಂದ ನಟಿ....
ಅಜಗಜಾಂತರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮಾಧುರಿ ಹಿಂದಿ ಧಾರಾವಾಹಿ ಕ್ಷೇತ್ರದಲ್ಲೂ ಮಿಂಚಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಮಕ್ಕಳು ಕುಟುಂಬ ಎಂದು ಬಣ್ಣದ ಲೋಕದಿಂದ ದೂರ ಉಳಿದುಬಿಟ್ಟರು. ಅವಕಾಶ ಸಿಗದೆ ದೂರ ಉಳಿದಿದ್ದಾರೆ ಎಂದು ಕೆಲವರು ಹೇಳುತ್ತಾರೆ ಇನ್ನೂ ಕೆಲವರು ಅನುಭವಿಸಿದ ನೋವುಗಳಿಂದ ದೂರ ಇದ್ದಾರೆ ಎನ್ನುತ್ತಾರೆ. ನಟ ಕಮ್ ನಿರ್ದೇಶಕ ರಘುರಾಮ್ ನಡೆಸಿದ ಸಂದರ್ಶನದಲ್ಲಿ ಮಾಧುರಿ ತಮ್ಮ ಜೀವನದ ಬಗ್ಗೆ ಯಾರಿಗೂ ಗೊತ್ತಿರದ ವಿಚಾರಗಳನ್ನು ಹಂಚಿಕೊಂಡರು. ಆಗ ಅನೇಕರು ನೆಗೆಟಿವ್ ಕಾಮೆಂಟ್ ಮಾಡಿದ್ದರು. ನೆಗೆಟಿವ್ ಕಾಮೆಂಟ್‌ಗಳಿಗೆ ಉತ್ತರ ಕೊಟ್ಟಿದ್ದಾರೆ....
ಮಾಧುರಿ ಮತ್ತೊಂದು ಮುಖ:
ಒಂದು ವಿಡಿಯೋಗೆ ಮಾಧುರಿ ಅವರಿಗೆ ಎರಡು ಮುಖ ಇದೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದರು. 'ಯಾವ ಅರ್ಥದಲ್ಲಿ ನನ್ನ ಇನ್ನೊಂದು ಮುಖ ಅಂತ ಹೇಳಿದ್ದೀರಾ ನನಗೆ ಗೊತ್ತಿಲ್ಲ. ನನಗೆ ಇನ್ನೊಂದು ಮುಖ ಇದ್ದರೆ ಖಂಡಿತಾ ನೀವು ಎಕ್ಸ್‌ಪೋಸ್ ಮಾಡಬಹುದು. ಒಂದು ವೇಳೆ ಹಾಗೆ ಏನಾದರೂ ಇದ್ರೆ ಅದಕ್ಕೂ ಕ್ಲಾರಿಫಿಕೇಷನ್ ಕೊಡುವೆ. ನನಗೆ ಇನ್ನೊಂದು ಮುಖ ಇದ್ದಿದ್ದರೆ ಇಷ್ಟೊಂದು ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಒಬ್ಬರ ಬಳಿ ಮುಖ ಮುಚ್ಚಿಟ್ಟುಕೊಳ್ಳಬಹುದು ಸಾವಿರಾರೂ ಜನರು ಮುಂದೆ ಮಾಡಲು ಆಗಲ್ಲ' ಎಂದು ಮಾಧುರಿ ಹೇಳಿದ್ದಾರೆ.
'ನನ್ನ ಸಂದರ್ಶನವನ್ನು ಅನೇಕರು ಇಷ್ಟ ಪಟ್ಟಿದ್ದಾರೆ. ಎಲ್ಲೋ 1% ಜನ ಮಾತ್ರ ನೆಗೆಟಿವ್ ಮಾತನಾಡಿದ್ದಾರೆ. ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಅಂತಾರೆ ಅದನ್ನು ಮಾಡುತ್ತಿದ್ದಾರೆ. ಒಳ್ಳೆ ಕಾಮೆಂಟ್‌ಗಳು ನೋಡಿ ಮತ್ತೆ ಹೆಚ್ಚಿಗೆ ಕಾಣಿಸಿಕೊಳ್ಳಬೇಕು ಅನಿಸುತ್ತಿದೆ' ಎಂದ ಮಾಧುರಿ.
17 ವರ್ಷಕ್ಕೆ ಮದುವೆ, ಮಗು ಆದ್ಮೇಲೆ ಸಿನಿಮಾ; ವಿಚ್ಛೇದನದ ಬಗ್ಗೆ ನಟಿ ಅಶ್ವಿನಿ ಗೌಡ ಮಾತು
ಅಪ್ಪ ಸರ್ವಸ್ವ:
'ನಮ್ಮ ತಂದೆ ಮೇಲೆ ಭಾವನೆ ಕಡಿಮೆ ಆಗಿದೆ. ನಮ್ಮ ತಂದೆನೇ ಅಲ್ಲ ಅನ್ನೋ ರೀತಿ ನಮ್ಮನ್ನು ನೋಡಿಕೊಂಡಿದ್ದಾರೆ. ಯಾರಾದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಅನಿಸುತ್ತದೆ ಇದಕ್ಕೆ ಕಾರಣ ನನ್ನ ತಂದೆ ಎಂದು. ನಮ್ಮ ತಂದೆ ನಮ್ಮ ಜೊತೆಗಿದ್ದು ನಮ್ಮ ಸಂಸಾರವನ್ನು ನೀಟ್ ಆಗಿ ನಡೆಸಿಕೊಂಡು ನಮ್ಮನ್ನು ಚೆನ್ನಾಗಿ ಓದಿಸಿದ್ದರೆ ಯಾರ್ ಯಾರೋ ನಮ್ಮ ಕಡೆ ಬೆರಳು ಮಾಡಿ ಮಾತನಾಡುವ ಅವಶ್ಯಕತೆ ಬರುತ್ತಿರಲಿಲ್ಲ. ನನಗೆ IAS ಆಗುವ ಆಸೆ ಇತ್ತ, ಓದಿದ್ದರೆ ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಸಿನಿಮಾ ಕ್ಷೇತ್ರಕ್ಕೆ ಬಂದಿರುವುದಕ್ಕೆ ಬೇಸರವಿಲ್ಲ. ನನ್ನ ಮಗ ಒಂದು ಮಾತು ಹೇಳುತ್ತಾರೆ ಅಮ್ಮ ನೀನು ಅಧಿಕಾರಿ ಆಗಿದ್ದರೆ ಆ ಕ್ಷೇತ್ರಕ್ಕೆ ಸೀಮಿತಳಾಗುತ್ತಿದ್ದರೆ ಆದರೆ ಸಿನಿಮಾದಲ್ಲಿ ಇರುವ ಕಾರಣ ಎಷ್ಟು ಮಂದಿ ನಿನ್ನನ್ನು ಪ್ರೀತಿಸುತ್ತಾರೆ. ತಂದೆ ಸ್ಥಾನವನ್ನು ಯಾವ ಗಂಡಸು ತೆಗೆದುಕೊಂಡಿರುತ್ತಾರೆ ಅವರು ಮನೆ ಮತ್ತು ಹೆಣ್ಣು ಮಗುವನ್ನು ಕಾಪಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.
'ನನ್ನ ತಾಯಿ ಓದಿರುವುದು 3ನೇ ಕ್ಲಾಸ್. ನಮ್ಮನ್ನು ನೋಡಿಕೊಳ್ಳಬೇಕಿತ್ತು ಹಾಗೆ ನಮ್ಮ ತಂದೆ ಅವರನ್ನು ನೋಡಿಕೊಳ್ಳಬೇಕಿತ್ತು. ಮತ್ತೊಬ್ಬರ ಮನೆಯಲ್ಲಿ ಕೆಲಸ ಮಾಡುವ ಮನಸ್ಥಿತಿ ಅವರಿಗೆ ಇರಲಿಲ್ಲ ಕಾರಣ ಅವರು ಡಿಪ್ರೆಶನ್‌ಗೆ ಜಾರಿದ್ದರು. ಒಬ್ಬರಿಗೆ ಒಂದು ರೀತಿ ಸಮಸ್ಯೆ ಇರುತ್ತದೆ. ನಾನು ಸುಂದರವಾಗಿದ್ದೀನಿ ದುಡ್ಡು ಮಾಡಬೇಕು ಎಂದು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಅನಿವಾರ್ಯವಾಗಿ ದೇವರು ನನಗೆ ಈ ದಾರಿ ತೋರಿಸಿದ್ದು. ಮೂರನೇ ಕ್ಲಾಸ್‌ನಲ್ಲಿ ಇದ್ದಾಗ ಶಂಕರಾಭರಣಂ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದೆ ಆಗ 1 ಫಸ್ಟ್ ಪ್ರೈಸ್ ಬಂತು. ಡ್ಯಾನ್ಸ್ ನೋಡಿದವರು ಸಿನಿಮಾದಲ್ಲಿ ನಿಮ್ಮ ಮಗಳನ್ನು ನಟಿಸಲು ಕಳುಹಿಸುವಿರಾ ಎಂದು ನನ್ನ ತಾಯಿಯನ್ನು ಕೇಳಿದ್ದರು. ನಾನು ಚೆನ್ನಾಗಿದ್ದೀನಿ ದುಡ್ಡು ಮಾಡಬೇಕು ಅನ್ನೋ ವಿಚಾರ ಮೈಂಡ್ ಇದ್ದಿದ್ದರೆ ಸಿನಿಮಾ ಮಾಡು ಅಂತಿದ್ದರು ಆದರೆ ಅವರು ಬೇಡ ಎಂದರು' ಎಂದಿದ್ದರು ಮಾಧುರಿ.
ಮಲ್ಲೇಶ್ವರಂನಲ್ಲಿ ಬ್ರಾಹ್ಮಿನ್ ಕ್ರೌಡ್ ಜಾಸ್ತಿ; ಹೋಟೆಲ್ ಬಾಗಿಲು ಮುಚ್ಚಿದ ನಟಿ ಆಶಿತಾ
'ಹೆಣ್ಣು ಮಕ್ಕಳ ಬಗ್ಗೆ ನಿಜವಾಗಲೂ ಗೌರವ ಇರುವವರು ನಮ್ಮ ಮನೆ ಹೆಣ್ಣು ಮಕ್ಕಳು ಮಾತ್ರ ಸೇಫ್ ಆಗಿ ನೋಡಿಕೊಳ್ಳಬೇಕು ಇರುವುದಿಲ್ಲ. ಪ್ರತಿಯೊಬ್ಬ ಹೆಣ್ಣಿಗೂ ಗೌರವ ಕೊಡಬೇಕು ಅನಿಸುತ್ತದೆ. ಮನೆಯಲ್ಲಿ ನಾವು ಒಳ್ಳೆಯ ಸಂಸ್ಕಾರ ಕಲಿಸಿದ್ದೀವಿ. ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಒಳ್ಳೆಯ ಸಂಸ್ಕಾರ ಇದ್ದಿದ್ದರೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡುತ್ತಿರಲಿಲ್ಲ. ಸಿನಿಮಾದಲ್ಲಿ ನಾವು ಮಾಡಿಲ್ಲ ಅಂದ್ರೆನೇ ಮಾಡಿದ್ದೀವಿ ಎನ್ನುತ್ತಾರೆ...ಇದಕ್ಕೆಲ್ಲಾ ಸೊಪ್ಪು ಹಾಕುವುದು ನನಗೆ ಇಷ್ಟವಿಲ್. ಹೆಣ್ಣು ಮಕ್ಕಳಿಗೆ ಗೌರವ ಕೊಡಿ. ಈ ಜನ್ಮದಲ್ಲಿ ಗಂಡಾಗಿದ್ದೀರ ಆದರೆ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿ ಇದೆಲ್ಲಾ ಎದುರಿಸುತ್ತೀರಿ' ಎಂದು ಹೇಳಿದ್ದಾರೆ.