
ನೋಟಿನಲ್ಲಿ ಏನೆಲ್ಲ ಇದೆ ಅಂದರೆ..ಹದಿನಾಲ್ಕು ಭಾಷೆಯಲ್ಲಿ ಚಿತ್ರದ ಹೆಸರು, ಒಂದೊಂದು ನೋಟಿನಲ್ಲಿ ಚಿತ್ರದ ಕ್ಯಾರೆಕ್ಟರ್ ಲುಕ್ ಹಾಗೂ ಪಾತ್ರದ ಹೆಸರು, ನಿರ್ಮಾಣ, ತಾಂತ್ರಿಕ ತಂಡದ ಹೆಸರುಗಳು, ಜತೆಗೆ ಮೈಗೆ ಬಾಂಬ್ ಕಟ್ಟಿಕೊಂಡಿರುವ ಯಜ್ಞಾ ಶೆಟ್ಟಿಫೋಟೋ. ಜತೆಗೆ ‘ಬರ್ಬರತೆಯ ಭಾಗವಾಗಿರುವ ದೊಡ್ಡ ಸಮೂಹವೊಂದರ ಎದೆಯೊಳಗೆ ಪಾಪ ಪ್ರಜ್ಞೆಯ ಬೀಜಗಳನ್ನು ಬಿತ್ತುವ ಪ್ರಮಾಣ ಮಾಡುತ್ತೇವೆ’ ಎನ್ನುವ ಘೋಷವಾಕ್ಯ.
Act 1978 ಟ್ರೈಲರ್ ಬಿಡುಗಡೆ ಮಾಡಿದ ಅಪ್ಪು, ಇಲ್ಲಿ ನೋಡಿ ವಿಡಿಯೋ
ನೂರು ರುಪಾಯಿ ನೋಟನ್ನು ನಿಜವಾದ ನೋಟಿನಂತೆ ರೂಪಿಸಿ ಇಷ್ಟುಕ್ರಿಯಾಶೀಲವಾಗಿ ಚಿತ್ರದ ಪ್ರಚಾರಕ್ಕೆ ಬಳಸುತ್ತಿರುವುದು ಕನ್ನಡದ ಮಟ್ಟಿಗೆ ವಿಶೇಷ ಅನ್ನಬಹುದು. ಹಾಗೆ ಇಂಥಾ ಪ್ರಚಾರ ತಂತ್ರಗಳನ್ನು ರೂಪಿಸುವುದರಲ್ಲಿ ಕತೆಗಾರ ಟಿ ಕೆ ದಯಾನಂದ ಅವರ ಪ್ರತಿಭೆ ದೊಡ್ಡದು ಎನ್ನುವುದಕ್ಕೆ ಈ ಹಿಂದೆ ರಿಷಬ್ ಶೆಟ್ಟಿಹಾಗೂ ಹರಿಪ್ರಿಯಾ ನಟನೆಯ ‘ಬೆಲ್‌ಬಾಟಂ’ ಚಿತ್ರಕ್ಕೆ ಇವರು ರೂಪಿಸಿದ ಪೋಸ್ಟರ್‌ಗಳು, ಅದಕ್ಕೆ ಬಳಸಿದ ಸಾಲುಗಳೇ ಸಾಕ್ಷಿ. ಗೋಪಾಲ್ ಹಲ್ಲು ಪುಡಿ, ಅಟ್ಲಾಸ್ ಹಾಗೂ ಹೀರೋ ಸೈಕಲ್, ನಿರ್ಮಾ ವಾಷಿಂಗ್ ಪೌಡರ್ ಹೀಗೆ 80 ಮತ್ತು 90 ದಶಕದ ಬ್ರಾಂಡ್‌ಗಳೆಲ್ಲ ‘ಬೆಲ್ ಬಾಟಮ್’ ಚಿತ್ರದ ಪ್ರಚಾರದ ರಾಯಭಾರಿಗಳಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಯಿತು.
ಈಗ ಅದೇ ರೀತಿ ನೂರು ರುಪಾಯಿ ಖೋಟಾ ನೋಟನ್ನು ಸಿನಿಮಾ ಪ್ರಚಾರದ ವೇದಿಕೆ ಮಾಡಿದ್ದಾರೆ. ಚಿತ್ರದ ಪ್ರತಿ ಪಾತ್ರಕ್ಕೂ ಪ್ರತ್ಯೇಕವಾಗಿ ನೂರರ ನೋಟನ್ನು ರೂಪಿಸಿದ್ದು, ಸದ್ಯ ಗಮನ ಸೆಳೆಯುತ್ತಿದೆ. ‘ಬೆಲ್‌ಬಾಟಂ’ ಚಿತ್ರದ ನಂತರ ದಯಾನಂದ ಕತೆ ಬರೆದಿರುವ ಸಿನಿಮಾ ಈ ‘ಆಕ್ಟ್-1978’. ಈಗಷ್ಟೆಚಿತ್ರದ ಟ್ರೇಲರ್‌ಅನ್ನು ಪಿಆರ್‌ಕೆ ಯೂಟ್ಯೂಬ್ ಚಾನಲ್‌ನಲ್ಲಿ ನಟ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ್ದು, ಟ್ರೇಲರ್‌ನ ಕೊನೆಯಲ್ಲಿ ಬರುವ ‘ಐ ನೀಡ್ ರೆಸ್ಪೆಕ್ಟ್’ ಎನ್ನುವ ಡೈಲಾಗ್ ಪವರ್‌ಫುಲ್ಲಾಗಿ ಸೌಂಡು ಮಾಡುತ್ತಿದೆ.
ಆಕ್ಟ್ 1978 ಹಾಡು ಬಿಡುಗಡೆ ಮಾಡಿದ ಶಿವಣ್ಣ; ನವೆಂಬರ್1ರಂದು ಸಿನಿಮಾ ಬಿಡುಗಡೆ!
ನ.20ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಮೂಲಕ ಲಾಕ್‌ಡೌನ್ ನಂತರ ಚಿತ್ರಮಂದಿರಗಳಿಗೆ ಬರುತ್ತಿರುವ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿರ್ದೇಶಕರಾದ ಬಿ ಸುರೇಶ್, ರಾಘು ಶಿವಮೊಗ್ಗ, ಸಂಚಾರಿ ವಿಜಯ್, ರಂಗಭೂಮಿ ಕಲಾವಿದ ಪಿ ಡಿ ಸತೀಶ್, ಅಶ್ವಿನ್, ಶರಣ್ಯಾ ಹೀಗೆ ಸಾಕಷ್ಟುಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ‘ನೋಡಿ ನನಗೂ ನೂರು ರುಪಾಯಿ ನೋಟು ಕೊಟ್ಟಿದ್ದಾರೆ’ ಎನ್ನುವ ಸಾಲುಗಳೊಂದಿಗೆ ಚಿತ್ರದ ಪಾತ್ರದಾರಿಗಳು, ತಾಂತ್ರಿಕ ತಂಡ ತಮ್ಮ ಫೋಟೋ ಇರುವ ಹಳೆಯ ನೂರು ರುಪಾಯಿ ನೋಟನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.