ಸಿಂಧು ಲೋಕನಾಥ್ ದೆವ್ವವಾಗಿ ರಮ್ಯಾ ಮೈಯೊಳಗೆ ಹೋಗ್ತಾರಂತೆ!

By Suvarna NewsFirst Published Jan 31, 2020, 4:32 PM IST
Highlights

'ಲವ್ ಇನ್ ಮಂಡ್ಯ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದ ನಟಿ. ಇದೀಗ 'ಕಾಣದಂತೆ ಮಾಯವಾದನು..' ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಖ್ಯಾತ ನಿರೂಪಕ ಗೌರೀಶ್ ಅಕ್ಕಿ ಸಂದರ್ಶನದಲ್ಲಿ ಇವರು ದೆವ್ವ, ಭೂತದ ಬಗ್ಗೆ ಮಾತನಾಡಿದ್ದಾರೆ. ಏಕೆ?
 

ಈ ಭೂಮಿ ಮೇಲೆ ದೆವ್ವ, ಭೂತಗಳು ಇದಾವೋ, ಇಲ್ಲವೋ ಗೊತ್ತಿಲ್ಲ. ಆದರೆ ಅವುಗಳ ಕುರಿತ ಕುತೂಹಲ ಮಾತ್ರ ಎಂದಿಗೂ ಕಡಿಮೆಯಾಗಿಲ್ಲ. ನಮ್ಮ ಬಾಲ್ಯದ ದಿನಗಳಿಂದ ಹಿಡಿದು,ಈವರೆಗೂ ದೆವ್ವದ ಕಥೆಗಳನ್ನು ಕೇಳುತ್ತಲೇ ಬೆಳೆದಿದ್ದೇವೆ. ಪ್ರತಿಯೊಬ್ಬರ ಜೀವನದಲ್ಲೂ ದೆವ್ವದ ಕುರಿತು ಹೇಳಲು ಸಾಕಷ್ಟು ಕಥೆಗಳಿರುತ್ತವೆ. ಇನ್ನು ದೆವ್ವಗಳ ಕಥೆಯಿರುವ ಸಾಕಷ್ಟು ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಹಲವು ಸದ್ದು ಮಾಡಿವೆ. ಭಯ ಹುಟ್ಟಿಸುವ, ಕಾಮಿಡಿ ಕಚಗುಳಿ ಇಡುವ, ಮಕ್ಕಳಿಗೆ ಇಷ್ಟವಾಗುವ ದೆವ್ವಗಳು ಹೀಗೆ... ಎಲ್ಲಾ ರೀತಿಯ ದೆವ್ವಗಳನ್ನು ಸಿನಿಮಾಗಳಲ್ಲಿ ತೋರಿಸಲಾಗಿವೆ. ಕೆಲವು ದೆವ್ವಗಳು ಮನಸ್ಸಿಗೆ ಮುದ ನೀಡಿದ್ದು, ಮತ್ತೆ ಕೆಲವು, ಭಯ ಹುಟ್ಟಿಸಿದ್ದು ಸುಳ್ಳಲ್ಲ. ಇದೇ ರೀತಿ ದೆವ್ವದ ಕತೆ ಇರುವ ಮತ್ತೊಂದು ಚಿತ್ರ ಚಂದನವನದಲ್ಲಿ ಬಿಡುಗಡೆಯಾಗಿದೆ. ಅದುವೇ 'ಕಾಣದಂತೆ ಮಾಯವಾದನು'.  ಈ ಚಿತ್ರ ತಂಡ ಗೌರಿಶ್ ಅಕ್ಕಿ ಸ್ಟುಡಿಯೋಗೆ ನೀಡಿದ ಸಂದರ್ಶನದಲ್ಲಿ ದೆವ್ವದ ಕುರಿತು ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿವೆ.

ರಾಜಸ್ಥಾನದಲ್ಲಿ ಸಿಂಧು ಲೋಕನಾಥ್; ಒಬ್ಬಂಟಿಯಾಗಿ ಓಡಾಡುತ್ತಿರುವ ಫೋಟೋಗಳಿವು!

ಸಿಂಧು ಲೋಕನಾಥ್ ದೆವ್ವ ಆದರೆ...!

ದೆವ್ವವಾದರೆ ರಕ್ಷಿತಾ, ರಮ್ಯಾ ಹಾಗೂ ರಚಿತಾ ರಾಮ್...  ಯಾರ ಮೈಯೊಳಗೆ ಸೇರಲು ಇಷ್ಟಪಡುತ್ತೀರಾ ಎಂಬ ಅಕ್ಕಿ ಪ್ರಶ್ನೆಗೆ ಉತ್ತರಿಸಿದ ಸಿಂಧು, ಮೋಹಕ ತಾರೆ ರಮ್ಯಾ ಮೈಯೊಳಗಡೆ ಸೇರಲು ಇಷ್ಟಪಡುತ್ತೇನೆ ಎಂದರು. ಅವರು ಸ್ಯಾಂಡಲ್‌ವುಡ್ ಕ್ವೀನ್ ಆಗಿದ್ದು, ಅವರ ಮೈ ಸೇರಿಕೊಂಡರೆ ಆ ಫೀಲನ್ನು ಎಂಜಾಯ್ ಮಾಡಬಹುದು, ಎಂದು ಉತ್ತರಿಸಿದರು. 

ರಾಜಸ್ಥಾನದಲ್ಲಿ ಸೋಲೋ ಟ್ರಿಪ್‌ ಮಾಡಿ ಬಂದಿದ್ದಾರೆ ಸಿಂಧೂ ಲೋಕನಾಥ್‌

ದೆವ್ವವಾಗಿ ಸೂರಿ ಮೈಯೋಳಗಡೆ ಸೇರಲು ಇಷ್ಟಪಡ್ತಾರೆ ವಿಕಾಸ್...

'ಜಯಮ್ಮನ ಮಗ' ಚಿತ್ರದ ನಿರ್ದೇಶಕ ವಿಕಾಸ್, 'ಕಾಣದಂತೆ ಮಾಯವದನು' ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂದರ್ಶನದ ವೇಳೆ ವಿಕಾಸ್‌ಗೆ ನೀವು ದೆವ್ವವಾದರೆ ಯಾರ ಮೈಯೊಳಗಡೆ ಸೇರುತ್ತೀರಿ ಎಂದು ನಿರೂಪಕರು ಪಶ್ನೆಯೊಂದಿಗೆ ನಿರ್ದೇಶಕರಾದ ಸೂರಿ, ಯೋಗರಾಜ್ ಭಟ್ ಹಾಗೂ ಗುರುಪ್ರಸಾದ್ ಮೂವರನ್ನೂ ಆಯ್ಕೆಯಾಗಿ ನೀಡಿದ್ದರು. ವಿಕಾಸ್ ಈ ಮೂವರಲ್ಲಿ ಅಯ್ಡುಕೊಂಡಿದ್ದು ಮಾತ್ರ ನಿರ್ದೇಶಕ ಸೂರಿಯನ್ನು. ಸೂರಿ ಕಂಡರೆ ಎಲ್ಲರಿಗೂ ಸ್ವಲ್ಪ ಭಯ. ಹಾಗಾಗಿ ನನ್ನೆಲ್ಲಾ ಆಸೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು ಎಂದು ನಿರ್ದೇಶಕರ ಕಾಲೆಳೆದರು. 

ಈ ಸಂದರ್ಶನ ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಲಭ್ಯವಿದ್ದು, ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ. https://youtu.be/1bxVqNcBI3A

- ಪ್ರವೀಣ್ ಮೈನಾಳೆ, ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ

 

 

click me!