6-5=2 ಟೀಮ್‌ನ ಲವ್‌ಸ್ಟೋರಿ ದಿಯಾ; ಥೇಟರ್‌ಗಳೆಲ್ಲಾ ಪ್ರೇಮಮಯ!

By Suvarna NewsFirst Published Jan 31, 2020, 3:56 PM IST
Highlights

ದೆವ್ವ ನಂಬಿದ್ರೆ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎಂದು ತೋರಿಸಿ ಕೊಟ್ಟವರು. ಹೆದರಿಸುತ್ತಲೇ ಥಿಯೇಟರ್‌ ತುಂಬಿಸಿದ ತಂಡ. ಆ ಹಾರರ್‌ ತಂಡ ಮತ್ತೆ ಬಂದಿದೆ. ಆ ತಂಡ ಬೇರಾರ‍ಯರೂ ಅಲ್ಲ, ‘6-5=2’ ಚಿತ್ರತಂಡ. ಈಗ ಅದೇ ತಂಡ ಸೇರಿಕೊಂಡು ಮತ್ತೊಂದು ಸಿನಿಮಾ ಮಾಡಿ, ಚಿತ್ರೀಕರಣ ಕೂಡ ಮುಗಿಸಿ ಫೆ.7ಕ್ಕೆ ತೆರೆ ಮೇಲೆ ತರುವುದಕ್ಕೆ ಹೊರಟಿದೆ. ಪಕ್ಕಾ ಪ್ರೇಮ ಕತೆಯ ಸಿನಿಮಾ. ಚಿತ್ರದ ಹೆಸರು ‘ದಿಯಾ’.
 

ಅಶೋಕ್‌ ಕೆ ಎಸ್‌ ನಿರ್ದೇಶನ. ಕೃಷ್ಣ ಚೈತನ್ಯ ನಿರ್ಮಾಣ. ದೀಕ್ಷಿತ್‌, ಪೃಥ್ವಿ ಅಂಬಾರ್‌, ಪವಿತ್ರಾ ಲೋಕೇಶ್‌, ಖುಷಿ ಚಿತ್ರದ ಮುಖ್ಯ ಪಾತ್ರಧಾರಿಗಳು. ಬದುಕಿನ ನೆನಪುಗಳ ಹೆಜ್ಜೆಗಳಂತೆ ಸಾಗುವ ಈ ಕತೆ, ಹೀಗೆ ನಾಲ್ಕಾರು ಪಾತ್ರಗಳನ್ನೇ ನಂಬಿಕೊಂಡು ಸಾಗುತ್ತದೆ.

ಚಿತ್ರ ವಿಮರ್ಶೆ: ಶ್ರೀ ಭರತ ಬಾಹುಬಲಿ

ಚಿತ್ರ ಬಿಡುಗಡೆ ಸಂದರ್ಭದಲ್ಲಿ ತಂಡ ಮಾಧ್ಯಮಗಳ ಮುಂದೆ ಬಂತು. ನಿರ್ಮಾಪಕ ಕೃಷ್ಣ ಚೈತನ್ಯ ಅವರಿಗೆ ತಡವಾದರೂ ಒಂದು ಒಳ್ಳೆಯ ಸಿನಿಮಾ ಮಾಡಿದ ತೃಪ್ತಿ ಅವರದ್ದು. ‘6-5=2 ಚಿತ್ರ ಆದ ಮೇಲೆ ಕರ್ವ ಚಿತ್ರ ನಿರ್ಮಿಸಿದೆ. ಈಗ ಒಂದು ಪ್ರೇಮಕತೆಯನ್ನೇ ಪ್ರಧಾನವಾಗಿಟ್ಟುಕೊಂಡ ಸಿನಿಮಾ ಮಾಡಿ ನಿಮ್ಮ ಮುಂದಿಟ್ಟಿದ್ದೇವೆ. ಇದು ಇಡೀ ತಂಡದ ಸಿನಿಮಾ. ನಟನೆಗೆ ಮಹತ್ವ ಇರುವ ಕತೆಯಾಗಿದ್ದು, ನನ್ನ ಸಂಸ್ಥೆಯಲ್ಲಿ ಒಂದು ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ’ ಎಂದರು ಕೃಷ್ಣ ಚೈತನ್ಯ.

ಚಿತ್ರ ವಿಮರ್ಶೆ: ಇಂಡಿಯಾ ವರ್ಸಸ್‌ ಇಂಗ್ಲೆಂಡ್‌

ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ವಿತರಣೆ ಮಾಡುತ್ತಿದೆ. ಕಾರ್ತಿಕ್‌ ಗೌಡ ಫೆ.7ರಂದು ಚಿತ್ರವನ್ನು 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ.

ಚಿತ್ರದ ನಾಯಕ ದೀಕ್ಷಿತ್‌ ಅವರಿಗೆ ಇಲ್ಲಿ ವಿಶೇಷವಾದ ಪಾತ್ರ ಇದೆಯಂತೆ. ‘ತುಂಬಾ ಒಳ್ಳೆಯ ಹುಡುಗ. ಕಾಲೇಜಿನಿಂದ ಕೆಲಸದ ತನಕ ನನ್ನ ಪಾತ್ರ ಸಾಗುತ್ತದೆ. ಹೀಗಾಗಿ ಸಾಕಷ್ಟುಏರಿಳಿತಗಳನ್ನು ಪಾತ್ರ ಒಳಗೊಂಡಿದೆ. ಕತೆಯ ಟ್ರಾವಲ್‌ ಆಗುವುದೇ ವಿಶೇಷವಾಗಿದೆ’ ಎಂಬುದು ದೀಕ್ಷಿತ್‌ ಮಾತು. ಇನ್ನೂ ಚಿತ್ರದ ನಾಯಕಿ ಖುಷಿ ಅವರದ್ದು ಇಲ್ಲಿ ದಿಯಾ ಎನ್ನುವ ಪಾತ್ರ.

ಚಿತ್ರ ವಿಮರ್ಶೆ: ನಾನು ಮತ್ತು ಗುಂಡ

ನಿರ್ದೇಶಕ ಅಶೋಕ ಕೆ ಎಸ್‌ ಅವರು ‘6-5=2’ ಚಿತ್ರದ ಹ್ಯಾಂಗೋವರ್‌ನಿಂದ ಆಚೆ ಬಂದು ಈ ಚಿತ್ರ ಮಾಡಿದ್ದಾರೆ. ಚಿತ್ರಕಥೆಗೆ ಹೆಚ್ಚು ಸಮಯ ಕೊಟ್ಟಿದ್ದು, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಸಾಕಷ್ಟುಬ್ಯುಸಿಯಾಗಿದ್ದು, ಹೀಗೆ ಸಾಕಷ್ಟುಕಾರಣಗಳಿಂದ ಸಿನಿಮಾ ತಡವಾದರೂ ಒಳ್ಳೆಯ ರೀತಿಯಲ್ಲಿ ಬಂದಿದೆ. ತುಂಬಾ ಮೆಲೋಡಿಯಾಗಿ ಸಾಗುವ ಪ್ರೇಮ ಕತೆ ಎಂಬುದು ನಿರ್ದೇಶಕರ ನಂಬಿಕೆ. ಪೃಥ್ವಿ ಅಂಬಾರ್‌ ತುಳು ಚಿತ್ರಗಳಲ್ಲಿ ಗುರುತಿಸಿಕೊಂಡವರು. ತಮಿಳಿನ ವಿಜಯ್‌ ಸೇತುಪತಿ ಅವರ ‘99’ ಚಿತ್ರದ ಫ್ಲೇವರ್‌ನಂತೆ ಈ ಸಿನಿಮಾ ಸಾಗುತ್ತದೆ ಎಂಬುದು ವಿತರಕ ಕಾರ್ತಿಕ್‌ ಗೌಡ ಮಾತು.

click me!