ಕನ್ನಡದ ಕುರಿತು ಕೇವಲವಾಗಿ ಮಾತಾಡಿದ್ದಕ್ಕೆ ಕಮಲ್ ಹಾಸನ್‌ಗೆ 15 ಕೋಟಿ ನಷ್ಟ: ಹೇಗೆ ಅಂತೀರಾ?

Kannadaprabha News   | Kannada Prabha
Published : Jun 05, 2025, 05:53 PM IST
kamal haasan unrealized films chamayam do deewane pyar ke to athi veerapandiyan

ಸಾರಾಂಶ

ಜೂನ್‌ 6ಕ್ಕೆ ತಮಿಳಿನ ‘ಥಗ್‌ ಲೈಫ್‌’ ಸಿನಿಮಾ ಕರ್ನಾಟಕದಲ್ಲೂ ಬಿಡುಗಡೆ ಆಗಬೇಕಿತ್ತು. ಈ ಮಧ್ಯೆ ಕಮಲಹಾಸನ್ ಕನ್ನಡದ ಕುರಿತು ನೀಡಿದ ಹೇಳಿಕೆ ಕನ್ನಡಿಗರನ್ನು ಕೆರಳಿಸಿತ್ತು. ಕರ್ನಾಟಕ ಹೈಕೋರ್ಟ್ ಕೂಡ ಹೇಳಿಕೆ ವಾಪಸ್ ಪಡೆಯುವಂತೆ ಹೇಳಿತ್ತು.

ಆರ್‌.ಕೇಶವಮೂರ್ತಿ

ಬೆಂಗಳೂರು (ಜೂ.05): ವಿನಾಕಾರಣ ಕನ್ನಡದ ಕುರಿತು ಕೇವಲವಾಗಿ ಮಾತಾಡಿದ್ದಕ್ಕೆ ಕಮಲ್ ಹಾಸನ್ 15 ಕೋಟಿ ನಷ್ಟ ಅನುಭವಿಸಬೇಕಾಗಿ ಬಂದಿದೆ. ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗದೇ ಇರುವುದರಿಂದ ಕಮಲ್ ಹಾಸನ್ ಇಲ್ಲಿಯ ವಿತರಕರಿಂದ ಪಡೆದಿರುವ ಎಂಟು ಕೋಟಿ ಮುಂಗಡ ಹಣವನ್ನೂ ವಾಪಸ್ ಕೊಡಬೇಕಾಗಿ ಬಂದಿದೆ.

ಜೂನ್‌ 6ಕ್ಕೆ ತಮಿಳಿನ ‘ಥಗ್‌ ಲೈಫ್‌’ ಸಿನಿಮಾ ಕರ್ನಾಟಕದಲ್ಲೂ ಬಿಡುಗಡೆ ಆಗಬೇಕಿತ್ತು. ಈ ಮಧ್ಯೆ ಕಮಲಹಾಸನ್ ಕನ್ನಡದ ಕುರಿತು ನೀಡಿದ ಹೇಳಿಕೆ ಕನ್ನಡಿಗರನ್ನು ಕೆರಳಿಸಿತ್ತು. ಕರ್ನಾಟಕ ಹೈಕೋರ್ಟ್ ಕೂಡ ಹೇಳಿಕೆ ವಾಪಸ್ ಪಡೆಯುವಂತೆ ಹೇಳಿತ್ತು. ಅದಕ್ಕೆ ಉತ್ತರವಾಗಿ ತಾನು ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡುವುದಿಲ್ಲ ಅಂತ ಕಮಲ್ ಹೇಳಿದ್ದರು.

ಈ ಪ್ರಕರಣದ ವಿಚಾರಣೆ ಜೂನ್‌ 10ಕ್ಕೆ ನಡೆಯಲಿದ್ದು, ಜೂನ್‌ 6ಕ್ಕೆ ತೆರೆಗೆ ಬರಬೇಕಿದ್ದ ‘ಥಗ್‌ ಲೈಫ್‌’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿಲ್ಲ. ಅವರ ಈ ಹಿಂದಿನ ಚಿತ್ರ ವಿಕ್ರಮ್ ಗಳಿಕೆಯ ಲೆಕ್ಕಾಚಾರದ ಆಧಾರದಲ್ಲಿ ‘ಥಗ್‌ ಲೈಫ್‌’ ಚಿತ್ರ ಬಿಡುಗಡೆ ಆಗದೆ ಹೋದರೆ ಕರ್ನಾಟಕದಿಂದ 13-15 ಕೋಟಿ ನಷ್ಟ ಉಂಟಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

‘ಥಗ್‌ ಲೈಫ್‌’ ಚಿತ್ರದ ಕರ್ನಾಟಕ ಬಿಡುಗಡೆ ಹಕ್ಕುಗಳನ್ನು ತೆಗೆದುಕೊಂಡಿರುವುದು ವಿತರಕ ಕಮಲಾಕರ್‌ ವೆಂಕಟೇಶ್‌ ಅವರು. ಬಹು ತಾರಾಗಣದ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದರು. ಈ ಹಿಂದೆ ಬಂದಿದ್ದ ‘ವಿಕ್ರಮ್‌’ ಚಿತ್ರದ ಯಶಸ್ಸು ಕೂಡ ಇದಕ್ಕೆ ಕಾರಣವಾಗಿತ್ತು.

ಕಮಲ್‌ ಚಿತ್ರಗಳ ವ್ಯಾಪ್ತಿ: ಸಾಮಾನ್ಯವಾಗಿ ಕಮಲ್‌ ಹಾಸನ್‌ ನಟನೆಯ ಸಿನಿಮಾಗಳು ಕರ್ನಾಟಕದಲ್ಲಿ 150 ರಿಂದ 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದ್ದವು. ಬೆಂಗಳೂರಿನಲ್ಲಿ ತಮಿಳು ಹಾಗೂ ಕನ್ನಡ, ಮಂಡ್ಯ, ಹುಬ್ಬಳ್ಳಿ ಹಾಗೂ ತುಮಕೂರು ಭಾಗದಲ್ಲಿ ಕನ್ನಡ, ಮೈಸೂರು ಮತ್ತು ಹೊಸೂರು ಗಡಿ ಪ್ರದೇಶ ಸೇರಿ ಶಿವಮೊಗ್ಗ, ಭದ್ರಾವತಿ ಭಾಗದಲ್ಲಿ ತಮಿಳು, ಚಿತ್ರದುರ್ಗ, ಕೋಲಾರ, ರಾಯಚೂರು ಪ್ರದೇಶದಲ್ಲಿ ತೆಲುಗು ಭಾಷೆಯಲ್ಲಿ ಕಮಲ್‌ ಹಾಸನ್‌ ಚಿತ್ರಗಳು ಬಿಡುಗಡೆ ಆಗುತ್ತಿದ್ದವು.

ಕಮಲ್‌ ಸಿನಿಮಾಗಳು ಚೆನ್ನಾಗಿದ್ದರೆ 10 ಕೋಟಿ, ಸೂಪರ್‌ ಹಿಟ್‌ ಅನಿಸಿಕೊಂಡರೆ 15 ಕೋಟಿಯಷ್ಟು ರಾಜ್ಯದಲ್ಲಿ ಕಲೆಕ್ಷನ್‌ ಮಾಡುತ್ತಿದ್ದವು. ಈಗ ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಬಿಡುಗಡೆ ಆಗದೆ ಹೋದರೆ ನನ್ನ ಪ್ರಕಾರ ಸುಮಾರು 13-15 ಕೋಟಿ ನಷ್ಟ ಆಗಲಿದೆ.
-ಕೆ ವಿ ಚಂದ್ರಶೇಖರ್‌, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ

ದೊಡ್ಡ ನಟರ ಸಿನಿಮಾಗಳು ಮೊದಲಿನಂತೆ ಈಗ ಒಂದೇ ಭಾಷೆಗೆ ಸೀಮಿತವಾಗಿಲ್ಲ. ಮೂಲ ಭಾಷೆಯ ಜತೆಗೆ ಬೇರೆ ಬೇರೆ ಭಾಷೆಗಳಿಗೆ ಡಬ್‌ ಮಾಡುತ್ತಾರೆ. ಹೀಗಾಗಿ ರಾಜ್ಯದಲ್ಲಿ 200 ಚಿತ್ರಮಂದಿರಗಳಲ್ಲಿ ಕಮಲ್‌ ಹಾಸನ್‌ ಚಿತ್ರಗಳು ಬಿಡುಗಡೆ ಆಗುವುದು ವಾಡಿಕೆ.
-ಉಮೇಶ್‌ ಬಣಕಾರ್‌, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ