ಸುರೇಶ್ ರೈನಾಗೆ ಲಾಂಗ್ ಹಿಡಿಯುವ ಸ್ಟೈಲ್‌ನಲ್ಲಿ ಬ್ಯಾಟ್ ಹಿಡಿಯಲು ಕಲಿಸಿದ ಶಿವಣ್ಣ, ವಿಡಿಯೋ

Published : Jun 01, 2025, 07:11 PM IST
Shivarajkumar Suresh raina

ಸಾರಾಂಶ

ಶಿವರಾಜ್ ಕುಮಾರ್ ಲಾಂಗ್ ಹಿಡಿಯುವ ಸ್ಟೈಲ್‌ಗೆ ಸರಿಸಾಟಿ ಇಲ್ಲ. ಇತ್ತ ಕ್ರಿಕೆಟ್ ಫೀಲ್ಡ್‌ನಲ್ಲಿ ಸುರೇಶ್ ರೈನಾ ಕ್ಯಾಚ್ ಹಿಡಿಯು ರೀತಿಗೆ ಸರಿಸಾಟಿ ಇಲ್ಲ. ಇವರಿಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಕ್ರಿಕೆಟ್ ಬ್ಯಾಟನ್ನೇ ಲಾಂಗ್ ರೀತಿ ಹಿಡಿದರೆ ಹೇಗಿರುತ್ತೆ? ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಬೆಂಗಳೂರು(ಜೂ.01) ನಟ ಶಿವರಾಜ್ ಕುಮಾರ್ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳು ಹಬ್ಬದೂಟ ನೀಡಿದ್ದಾರೆ. ಸಾಫ್ಟ್ ಬಾಲ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಕ್ರಿಕೆಟ್ ರಾಯಭಾರಿಯಾಗಿರುವ ಶಿವರಾಜ್ ಕುಮಾರ್ ಹಾಗೂ ಸುರೇಶ್ ರೈನಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ದಿಗ್ಗಜರು ತಮ್ಮ ಸಿಗ್ನೇಚರ್ ಸ್ಟೈಲ್ ಮೂಲಕ ಮಿಂಚಿದ್ದಾರೆ. ವಿಶೇಷ ಅಂದರೆ ಶಿವರಾಜ್ ಕುಮಾರ್ ಲಾಂಗ್ ಹಿಡಿಯುವ ಶೈಲಿಯಲ್ಲಿ ಸುರೇಶ್ ರೈನಾಗೆ ಬ್ಯಾಟ್ ಹಿಡಿಯಲು ಕಲಿಸಿದ್ದಾರೆ. ಬಳಿಕ ಇಬ್ಬರು ಕ್ರಿಕೆಟ್‌ ಬ್ಯಾಟನ್ನು ಲಾಂಗ್ ರೀತಿಯಲ್ಲಿ ಹಿಡಿದು ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಟೂರ್ನಿಯ ಕಾರ್ಯಕ್ರಮದಲ್ಲಿ ಇಬ್ಬರು ರಾಯಭಾರಿಗಳು ಜೊತೆಯಾಗಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಸಿಗ್ನೇಚರ್ ಸ್ಟೈಲ್ ಆಗಿರುವ ಲಾಂಗ್ ಕಾರ್ಯಕ್ರಮದಲ್ಲಿ ಸದ್ದು ಮಾಡಿದೆ. ಕಾರ್ಯಕ್ರಮದ ನಿರೂಪಕರು ವೇದಿಕೆ ಮೇಲೆ ಇರುವ ಶಿವರಾಜ್ ಕುಮಾರ್ ತಮ್ಮ ಸಿಗ್ನೇಚರ್ ಸ್ಟೈಲ್ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಬಾರಿ ಶಿವರಾಜ್ ಕುಮಾರ್ ಲಾಂಗ್ ಸ್ಟೈಲ್ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಅನುಸರಿಸಲಿದ್ದಾರೆ ಎಂದಿದ್ದಾರೆ.

ಸುರೇಶ್ ರೈನಾಗೆ ಸ್ಟೈಲ್ ಕಲಿಸಿದ ಶಿವರಾಜ್ ಕುಮಾರ್

ಇಬ್ಬರಿಗೂ ಕ್ರಿಕೆಟ್ ಬ್ಯಾಟ್ ನೀಡಲಾಗಿದೆ. ವೇದಿಕೆಯಲ್ಲಿ ಶಿವರಾಜ್ ಕುಮಾರ್, ಸುರೇಶ್ ರೈನಾಗೆ ತಮ್ಮ ಶೈಲಿಯಲ್ಲಿ ಲಾಂಗ್ ಹಿಡಿಯುವುದು ಹೇಗೆ ಎಂದು ಕಲಿಸಿದ್ದಾರೆ. ಬಳಿಕ ಅದೇ ಸ್ಟೈಲ್‌ನಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಮುಂದೆ ಸಾಗುವುದನ್ನು ಹೇಳಿಕೊಟ್ಟಿದ್ದಾರೆ. ಇಬ್ಬರು ಕ್ರಿಕೆಟ್ ಬ್ಯಾಟ್ ಹಿಡಿದು ಮುಂದೆ ಹೆಜ್ಜೆ ಹಾಕಿದ್ದಾರೆ. ಶಿವಣ್ಣ ತಮ್ಮ ಓಂ ಸಿನಿಮಾ, ಜೋಗಿ ಸಿನಿಮಾದಲ್ಲಿ ಲಾಂಗ್ ಹಿಡಿದು ಹೆಜ್ಜೆ ಹಾಕಿದ ರೀತಿಯಲ್ಲಿ ಇಬ್ಬರು ದಿಗ್ಗಜರು ಕ್ರಿಕೆಟ್ ಬ್ಯಾಟ್ ಹಿಡಿದು ಹೆಜ್ಜೆ ಹಾಕಿದ್ದಾರೆ.

 

 

ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಶಿವಣ್ಣನ ಸ್ಟೈಲ್‌ಗೆ ಸರಿಸಾಟಿ ಇಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಶಿವರಾಜ್ ಕುಮಾರ್ ಶೈಲಿ ಅನುಸರಿಸಿದ ಸುರೇಶ್ ರೈನಾಗೆ ಧನ್ಯವಾದ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ಕಾರ್ಯಕ್ರಮದ ಬಳಿಕ ಸುರೇಶ್ ರೈನಾ, ಶಿವರಾಜ್ ಕುಮಾರ್ ಭೇಟಿ ಕುರಿತು ಪೋಸ್ಟ್ ಮಾಡಿದ್ದಾರೆ. ಯಾವತ್ತೂ ನಿಮ್ಮನ್ನು ಭೇಟಿಯಾಗಲು ಖುಷಿ ಹಾಗೂ ಹೆಮ್ಮೆಯಾಗುತ್ತದೆ. ನೀವು ಮಾದರಿ ಹಾಗೂ ಪ್ರರಣೆಯಾಗಿದ್ದೀರಿ. ನಿಮ್ಮ ಮಾನವೀಯತೆ, ಕಳಕಳಿಯೇ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತಿದೆ ಎಂದು ಸುರೇಶ್ ರೈನಾ ಹೇಳಿಕೊಂಡಿದ್ದಾರೆ. ಇವರಿಬ್ಬರ ಭೇಟಿಯಿಂದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಸಿಗ್ನೇಚರ್ ಸ್ಟೈಲ್

ನಟ ಶಿವರಾಜ್ ಕುಮಾರ್ ಸಿನಿಮಾ ಸ್ಟೈಲ್ ಭಾರಿ ಜನಪ್ರಿಯವಾಗಿದೆ. ಈ ಪೈಕಿ ಶಿವರಾಜ್ ಕುಮಾರ್ ಲಾಂಗ್ ಹಿಡಿಯು ಶೈಲಿ ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಭಾರಿ ಜನಪ್ರಿಯವಾಗಿದೆ. ಓಂ ಸಿನಿಮಾ, ಜೋಗಿ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಲಾಂಗ್ ಹಿಡಿದು ಮಿಂಚಿದ್ದಾರೆ. ಶಿವರಾಜ್ ಕುಮಾರ್ ಸಿನಿಮಾದಲ್ಲಿ ಲಾಂಗ್ ಇಲ್ಲ ಎಂದರೆ ಅಭಿಮಾನಿಗಳು ನಿರಾಸಗೊಳ್ಳುವಷ್ಟರ ಮಟ್ಟಿಗೆ ಈ ಸಿಗ್ನೇಚರ್ ಸ್ಟೈಲ್ ಜನಪ್ರಿಯವಾಗಿದೆ. ಇತ್ತ ಸುರೇಶ್ ರೈನಾ ಬ್ಯಾಟಿಂಗ್ ಮಾತ್ರವಲ್ಲ, ಫೀಲ್ಡಿಂಗ್‌ನಲ್ಲೂ ಮಿಂಚಿದ ಪ್ರತಿಭೆ, ಸುರೇಶ್ ರೈನಾ ಕ್ಯಾಚ್ ಹಿಡಿಯುವ ಸ್ಟೈಲ್ ಕೂಡ ಕ್ರಿಕೆಟ್ ಲೋಕದಲ್ಲಿ ಜನಪ್ರಿಯವಾಗಿದೆ. ಇವರಿಬ್ಬರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ