ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಖ್ಯಾತ ಗಾಯಕ ಕೈಲಾಶ್ ಖೇರ್!

Suvarna News   | Asianet News
Published : Dec 01, 2020, 10:53 AM ISTUpdated : Dec 01, 2020, 11:13 AM IST
ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಖ್ಯಾತ ಗಾಯಕ ಕೈಲಾಶ್ ಖೇರ್!

ಸಾರಾಂಶ

ಭಾರತೀಯ ಗಾಯಕ ಕೈಲಾಶ್ ಖೇರ್‌ ಖಾಸಗಿ ಸಂದರ್ಶನವೊಂದರಲ್ಲಿ ಯಾರಿಗೂ ತಿಳಿಯದ ಸತ್ಯದ ಬಗ್ಗೆ ಮಾತನಾಡಿದ್ದಾರೆ. ಅವರು ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಕಾರಣವೇನು?  

ಬಾಲಿವುಡ್ ಸಿನಿಮಾ ಹಾಡುಗಳನ್ನು ಹಾಡುವ ಮೂಲಕ ಗಾಯಕನಾಗಿ ಪರಿಚಿತವಾದ ಕೈಲಾಶ್ ಖೇರ್ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿಯೂ ಹಾಡಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. 'ತೇರಿ ದಿವಾನಿ' ಹಾಡಿನ ನಂತರ ಕೈಲಾಶ್ ಸಂಗೀತ ಲೋಕದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದರು. ಯಶಸ್ಸಿನ ಉತ್ತುಂಗದಲ್ಲಿದ್ದ ಕೈಲಾಶ್ ಆತ್ಮಹತ್ಯಗೆ ಯತ್ನಿಸಲು ಕಾರಣವೇನು?

'ನನ್ನ ಮಗ ಗಾಯಕನಾಗುವುದು ಬೇಡ, ಅದರಲ್ಲೂ ಭಾರತದಲ್ಲಂತೂ ಬೇಡವೇ ಬೇಡ': ಸೋನು ನಿಗಮ್ 

ಕೈಲಾಶ್ ಮಾತುಗಳು:
'ಪ್ರಾರಂಭದಲ್ಲಿ ನಾನು ಮುಂಬೈಗೆ ಬಂದಾಗ, ಯಾರೂ ನನ್ನನ್ನು ಒಪ್ಪಿಕೊಳ್ಳಲಿಲ್ಲ, ಎಲ್ಲರೂ ರಿಜೆಕ್ಟ್ ಮಾಡಿದರು. ಈ ಸಮಯದಲ್ಲಿ ಪಾಪ್ ಕಲ್ಚರ್ ಹಾಗೂ ಸೋನು ಎಲ್ಲಾ ಫೇಮಸ್ ಆಗಿದ್ದ ಸಮಯ. ತುಂಬಾನೇ ನೋವು ಅನುಭವಿಸಿರುವೆ. ಈ ರಂಗದಲ್ಲಿ ಸುಮಾರು 15 ವರ್ಷ ಕಳೆದಿದ್ದೀನಿ. ಸಂಗೀತದ ಮೇಲಿರುವ ಹುಚ್ಚು ನನ್ನನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ,' ಎಂದು ಮಾತು ಆರಂಭಿಸಿದ್ದಾರೆ.

'2013ರಲ್ಲಿ ನಾಮಿನೇಟ್ ಆಗಿದ್ದೆ. ಆದರೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡೆ. ನಾನು ಎಷ್ಟು ವರ್ಷದಿಂದ ಕಲಿತಿದ್ದೀವಿ ಎಂಬುವುದು ಲೆಕ್ಕಕ್ಕೇ ಬರುವುದಿಲ್ಲ.  ನಾನು ಗೆದ್ದೇ ಗೆಲ್ಲುವೆ ಎಂಬ ಛಲದಿಂದ ನನಗೆ ನಾನೇ ಮಾತು ಕೊಟ್ಟುಕೊಂಡಿದ್ದೆ. ಈಗ ನಾನು ಹೊಸ ಗಾಯಕರಿಗೆ ಅವಕಾಶ ಕೊಡುತ್ತೇನೆ. ಪ್ರತಿ ವರ್ಷ ಹುಟ್ಟು ಹಬ್ಬದ ದಿನ ಹೊಸ ಪ್ರತಿಭೆ ಪರಿಚಯ ಮಾಡುತ್ತೇನೆ. ಇಡೀ ವರ್ಷ ಅವರಿಗೆ ಸಂಗೀತಾಭ್ಯಾಸ  ಮಾಡಿಸುತ್ತೇನೆ,' ಎಂದು ಹೇಳಿದ್ದಾರೆ.

ಸತತ ಸೋಲುಗಳನ್ನು ಕಂಡಿದ್ದೆ. ಆತ್ಮಹತ್ಯೆಗೂ ಯೋಚಿಸಿದ್ದೆ, ಎಂದ ಕೈಲಾಶ್ ಖೇರ್  ಅವರಂತೆ ಅನೇಕರು ಇದ್ದಾರೆ. ಅವರಿಗೆ ದಾರಿ ದೀಪವಾಗಬೇಕೆಂದು ಅವರಿಗೆ ಮಾರ್ಗದರ್ಶಿಯಾಗಿ ನಿಂತಿದ್ದಾರ ಕೈಲಾಶ್.

ವೈರಲ್ ಆಗ್ತಿದೆ ಸಾದ್ವಿನಿ ಕೊಪ್ಪ ಹಾಡುಗಳು: 'ಸರಿಗಮಪ' ಖ್ಯಾತಿಯ ಚೆಲುವೆ ಇವರೇ 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ ಚಿತ್ರದ 'ಎಕ್ಕ ರಾಜ ರಾಣಿ' ಕನ್ನಡಿದರ ಮೆಚ್ಚಿಗೆ ಪಡೆದು ಟಾಪ್ ಸಾಂಗ್ . 'ಮುದ್ದು ಮನಸೇ','ಚಿಂಗಾರಿ','ಸಾರಥಿ','ನಾನು ನನ್ನ ಕನಸ್ಸು', 'ಸಿದ್ಲಿಂಗು' ಹಾಗೂ 'ಪೈಲ್ವಾನ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹಾಡು ಹಾಡಿದ್ದಾರೆ. 

ಯಶಸ್ಸು ಎನ್ನುವುದು ಒಂದೆರಡು ದಿನದಲ್ಲಿ ಸಿಗುವುದಲ್ಲ. ಅದಕ್ಕೆ ತಕ್ಕ ಪರಿಶ್ರಮದ ಅಗತ್ಯವಿರುತ್ತದೆ. ಅದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅರ್ಥ ಮಾಡಿಕೊಳ್ಳಬೇಕು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep