Kabzaa ಚಿತ್ರ ಕೆಜಿಎಫ್‌ ಥರ ಇದೆ ಅನ್ನೋದೇ ಪಾಸಿಟಿವ್‌: Upendra

By Kannadaprabha NewsFirst Published Sep 23, 2022, 9:24 AM IST
Highlights

ಟೀಸರ್‌ಗೆ ಬಂದ ಪ್ರತಿಕ್ರಿಯೆ ನೋಡಿ ಖುಷಿಯಾದ ನಿರ್ದೇಶಕ ಆರ್‌ ಚಂದ್ರು. ಉಪೇಂದ್ರ ಪ್ರತಿಕ್ರಿಯೆ ಇದು....

‘ಕಬ್ಜ ಕೆಜಿಎಫ್‌ ಥರ ಇದೆ ಅನ್ನೋದನ್ಯಾಕೆ ನೆಗೆಟಿವ್‌ ಆಗಿ ತಗೊಳ್ತೀರಿ, ಅಂಥಾ ಟ್ರೆಂಡ್‌ ಸೆಟ್ಟರ್‌ ಸಿನಿಮಾ ಥರ ನಮ್ಮ ಕಬ್ಜ ಇದೆ ಅಂದರೆ ಅದು ನಮಗೆ ಹೆಮ್ಮೆಯೇ. ಈ ಸಿನಿಮಾದ ಮೇಕಿಂಗ್‌ ನೋಡಿದ ಮೇಲೆ ನನ್ನ ‘ಯುಐ’ ಸಿನಿಮಾ ಮೇಕಿಂಗ್‌ ಬಗ್ಗೆ ಯೋಚನೆ ಮಾಡ್ತಿದ್ದೇನೆ. ಅಂಥಾ ಅದ್ಭುತ ಮೇಕಿಂಗ್‌ ಕಬ್ಜದ್ದು.’

- ಹೀಗಂದು ಈ ಚಿತ್ರದ ನಿರ್ದೇಶಕ, ನಿರ್ಮಾಪಕ ಚಂದ್ರು ಕಡೆ ತಿರುಗಿ ನಕ್ಕರು ಉಪೇಂದ್ರ.

‘ಕಬ್ಜ’ ಸಿನಿಮಾದ ಮೊದಲ ಟೀಸರ್‌ಗೆ ಬಂದಿರುವ ಅದ್ಭುತ ಪ್ರತಿಕ್ರಿಯೆ ಕಂಡು ಚಿತ್ರತಂಡ ಫುಲ್‌ ಖುಷ್‌ ಆಗಿದೆ. ಇದನ್ನು ತಿಳಿಸಲೆಂದೇ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಮಾತನಾಡುತ್ತಿದ್ದರು.

‘ಒಂದೂರಲ್ಲೊಬ್ಬ ಆರ್ಟಿಸ್ಟ್‌ ಇದ್ದ. ಒಮ್ಮೆ ಅವನು ತನ್ನ ಆರ್ಚ್‌ಪೀಸ್‌ ಮೇಲೆ ಕೈಯಾಡಿಸುತ್ತಿದ್ದಾಗ ಅಲ್ಲಿಗೊಬ್ಬ ಬಂದ. ಆ ಕಲಾಕೃತಿ ನೋಡಿ ಮೆಚ್ಚಿ ಇದು ಯಾವಾಗ ಪೂರ್ಣ ಆಗುತ್ತೆ ಅಂತ ಕೇಳಿದ. ಅದಕ್ಕೆ ಆರ್ಟಿಸ್ಟ್‌ , ಬೇಕಿದ್ರೆ ಈಗಲೇ ತಗೊಂಡು ಹೋಗಬಹುದು, ಇದು ಯಾವತ್ತೂ ಪೂರ್ಣ ಆಗೋದಿಲ್ಲ’ ಅಂದುಬಿಟ್ಟ. ಆರ್‌ ಚಂದ್ರು ಕಥೆನೂ ಹೀಗೇ. ‘ಕಬ್ಜ’ವನ್ನು ಒಂದು ಡೇಟ್‌ ಫಿಕ್ಸ್‌ ಮಾಡಿ ರಿಲೀಸ್‌ ಮಾಡಬೇಕೇ ಹೊರತು ಆ ಸಿನಿಮಾ ಕೆಲಸ ಮುಗಿಯೋದು ಅಂತೆಲ್ಲ ಇರೋದಿಲ್ಲ. ಚಂದ್ರು ಕಥೆ, ಸಿನಿಮಾದ ಐಡಿಯಾ ಹೇಳಿದಾಗ ಇದೆಲ್ಲ ಸಾಧ್ಯವೇ ಆಗದ ಮಾತು ಅಂದುಕೊಂಡಿದ್ದೆ. ಆದರೆ ಚಂದ್ರು ತಾನಂದುಕೊಂಡಿದ್ದನ್ನು ಮಾಡಿ ತೋರಿಸಿದ್ದಾರೆ. ವರ್ಷಾನುಗಟ್ಟಲೆ ನಡೆದ ಶೂಟಿಂಗ್‌, ಹತ್ತಾರು ಸಲ ಬಂದು ಬಟ್ಟೆಅಳತೆ ತಗೊಂಡು ಹೋಗೋ ಡಿಸೈನರ್‌ಗಳು, ಥರಾವರಿ ವಿಂಟೇಜ್‌ ಉಡುಪು, ಹತ್ತಾರು ಎಕರೆಗಳ ಸೆಟ್‌, ಕಣ್ಣೆದುರು ಸಾಲುಗಟ್ಟಿಹೋಗುವ ನೂರಾರು ಲಾರಿಗಳು, ತುಂಬ ಅಪ್‌ಡೇಟ್‌ ಆಗಿರುವ ಟೆಕ್ನಾಲಜಿ ಬಳಕೆ.. ಹೀಗೆ ಕಬ್ಜ ಅಂದರೆ ಹೇಳಿ ಮುಗಿಸದಷ್ಟುಸಂಗತಿಗಳು’ ಇಷ್ಟುಹೇಳಿ ಮೈಕ್‌ ಅನ್ನು ಚಂದ್ರು ಅವರಿಗೆ ಪಾಸ್‌ ಮಾಡಿದರು ಉಪೇಂದ್ರ.

ಉಪೇಂದ್ರ 1990ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ರು: Rana Daggubati

‘ಈ ಟೀಸರ್‌ ಹೊರಬಂದ ಮೇಲೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್‌ ಅಭಿಮಾನಿಗಳಿಂದ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳ ವಿತರಕರಿಂದಲೂ ಬಂದಿದೆ. ಅವರು ಸಿನಿಮಾ ರೈಟ್ಸ್‌ಗೆ ಒತ್ತಡ ಹಾಡುತ್ತಿದ್ದಾರೆ. ಈ ಟೀಸರ್‌ ರಿಲೀಸ್‌ ಆದ ಕೆಲವೇ ಕ್ಷಣಕ್ಕೆ ತೆಲುಗಿನ ಸೂಪರ್‌ಸ್ಟಾರ್‌ ಒಬ್ಬರು ಕಾಲ್‌ ಮಾಡಿ ಟೀಸರ್‌ ಅನ್ನು ಮನಸಾರೆ ಹೊಗಳಿದರು. ಕತೆ ಇದ್ದರೆ ಹೇಳಿ ಅಂದರು. ದಕ್ಷಿಣ ಭಾರತ ಮಾತ್ರ ಅಲ್ಲ, ಉತ್ತರ ಭಾರತದಿಂದಲೂ ಅತ್ಯುತ್ತಮ ರೆಸ್ಪಾನ್ಸ್‌ ಬಂದಿದೆ. ಇದನ್ನು ಪಾನ್‌ ಇಂಡಿಯಾ ಸಿನಿಮಾ ಅಂದ್ಕೊಂಡು ಮಾಡಿದ್ದೆ. ಈಗ ಗ್ಲೋಬಲ್‌ ಮಾರ್ಕೆಟ್‌ ಓಪನ್‌ ಆಗಿರೋದು ನೋಡಿ ಆಶ್ಚರ್ಯ ಆಯ್ತು. ಸುಮಾರು 150 ಟೀಸರ್‌ ಕಟ್‌ ಮಾಡಿದ್ದೇವೆ. ಸಿನಿಮಾದ ಯಾವ ಭಾಗ ಕಟ್‌ ಮಾಡಿದ್ರೂ ಅದೊಂದು ಟೀಸರ್‌ ಥರವೇ ಕಾಣ್ತಿತ್ತು’ ಅನ್ನೋ ಚಂದ್ರು, ತಮ್ಮ ಸಿನಿಮಾದಲ್ಲಿ ಕೆಜಿಫ್‌ ಪ್ರಭಾವ ಇರೋದರ ಬಗ್ಗೆಯೂ ಮಾತಾಡಿದ್ರು.

ಬೆಂಗಳೂರಿನಲ್ಲಿ ನನ್ನ ಹೃದಯವಿದೆ, ಮಸಾಲ ದೋಸೆ ಸೂಪರ್: Shriya Sharan

‘ಕೆಜಿಎಫ್‌ ಸಿನಿಮಾ ನೋಡಿದಂದು ರಾತ್ರಿಯೆಲ್ಲ ನಿದ್ದೆ ಮಾಡಿರಲಿಲ್ಲ. ಎಂಥಾ ಅದ್ಭುತ ಸಿನಿಮಾ ಮಾಡಿದ್ದಾರೆ, ನಂಗ್ಯಾಕೆ ಈ ರೀತಿಯ ಸಿನಿಮಾ ಮಾಡಲಿಕ್ಕೆ ಆಗ್ತಿಲ್ಲ ಅಂತಲೇ ಅನಿಸುತ್ತಿತ್ತು. ಮಾಡಿದರೆ ಕೆಜಿಎಫ್‌ ಥರ ಒಂದು ಸಿನಿಮಾ ಮಾಡ್ಬೇಕು ಅಂತ ಅವತ್ತೇ ಡಿಸೈಡ್‌ ಮಾಡಿದ್ದೆ. ಇದೀಗ ಕಬ್ಜ ಬಂದಿದೆ. ಆದರೆ ದಯವಿಟ್ಟು ಕೆಜಿಎಫ್‌ ಜೊತೆ ಹೋಲಿಕೆ ಮಾಡ್ಬೇಡಿ. ಇದನ್ನೊಂದು ಒಳ್ಳೆ ಸಿನಿಮಾ ಅಂದ್ಕೊಂಡು ನೋಡಿ, ನಿಮಗೆ ಬೇರೆಯೇ ಫೀಲ್‌ ಕೊಡುತ್ತೆ’ ಅನ್ನುತ್ತಾ ಮಾತು ಮುಗಿಸಿದರು.

ಈ ಸಿನಿಮಾ ನಿರ್ಮಾಣದಲ್ಲಿ ಸಹಕರಿಸಿದ ನಿರ್ಮಾಪಕ ಕೆ ಪಿ ಶ್ರೀಕಾಂತ್‌, ‘ಈ ಟೀಸರ್‌ಗೆ ನಮ್ಮ ರಾಜ್ಯವಲ್ಲದೇ ನೇಪಾಳ, ತೆಲಂಗಾಣ, ಆಂಧ್ರ, ಯುಕೆ, ಯುಎಸ್‌ ಮೊದಲಾದೆಡೆಯಿಂದ ಮೆಚ್ಚುಗೆ ಹರಿದುಬಂದಿದೆ. ತೆಲುಗಿಂದ ಸುಮಾರು 50 ಜನ ಫೋನ್‌ ಮಾಡಿ ಬ್ಯುಸಿನೆಸ್‌ ಕೇಳಿದ್ರು’ ಎಂದರು.

click me!