ಶಿವಾಜಿನಗರದ ಮಿಲಿಟರಿ ಹೋಟೆಲ್‌ನಲ್ಲಿ ಆಶಿಷ್ ವಿದ್ಯಾರ್ಥಿ: ಊಟ ಸವಿದು ವಾವ್.. ಎಂದ ನಟ

Published : Sep 20, 2022, 01:56 PM ISTUpdated : Sep 20, 2022, 04:44 PM IST
 ಶಿವಾಜಿನಗರದ ಮಿಲಿಟರಿ ಹೋಟೆಲ್‌ನಲ್ಲಿ ಆಶಿಷ್ ವಿದ್ಯಾರ್ಥಿ: ಊಟ ಸವಿದು ವಾವ್.. ಎಂದ ನಟ

ಸಾರಾಂಶ

ಆಶಿಷ್ ವಿದ್ಯಾರ್ಥಿ ಆಹಾರ ಪ್ರೀಯರು. ಇದಕ್ಕಾಗಿಯೇ ಒಂದು ಯೂಟ್ಯೂಬ್ ವಾಹಿನಿಯನ್ನು ಸಹ ಮಾಡಿದ್ದಾರೆ.  ತನ್ನಿಷ್ಟದ ಊಟದ ಬಗ್ಗೆ ಆಶಿಷ್ ವಿಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ನಟ ಆಶಿಷ್ ವಿದ್ಯಾರ್ಥಿ ಯಾರಿಗೆ ತಾನೆ ಗೊತ್ತಿಲ್ಲ. ವಿಲನ್ ಆಗಿ ಹೀರೋಗಳನ್ನು ಕಾಡುತ್ತಿದ್ದ ನಟ ಆಶಿಷ್ ಅವರನ್ನು ಅಭಿಮಾನಿಗಳು ಮರೆಯಲು ಸಾಧ್ಯನೆ ಇಲ್ಲ. ಇತ್ತೀಚಿಗೆ ಆಶಿಷ್ ವಿದ್ಯಾರ್ಥಿ ಕನ್ನಡದಲ್ಲಿ  ಹೆಚ್ಚು ಕಾಣಿಸಿಕೊಂಡಿಲ್ಲ. ಆಶಿಷ್ ಕನ್ನಡ ಸಿನಿಮಾಗಳು ಕಡಿಮೆಯಾಗಿವೆ. ಆದರೆ ಕರ್ನಾಟಕದ ಮೇಲಿನ ಅವರ ಪ್ರೀತಿ ಮಾತ್ರ ಹಾಗೆ ಇದೆ. ಅಭಿಮಾನಿಗಳು ಸಹ ಆಶಿಷ್ ವಿದ್ಯಾರ್ಥಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೀಗ ಆಶಿಶ್ ವಿದ್ಯಾರ್ಥಿ ಮತ್ತೆ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಸಿನಿಮಾಗಾಗಿನಾ ಅಂತ ಅಂದ್ಕೋಬೇಡಿ. ಊಟದ ವಿಚಾರಕ್ಕೆ. ಹೌದು ಆಶಿಷ್ ವಿದ್ಯಾರ್ಥಿ ಆಹಾರ ಪ್ರೀಯರು. ಇದಕ್ಕಾಗಿಯೇ ಒಂದು ಯೂಟ್ಯೂಬ್ ವಾಹಿನಿಯನ್ನು ಸಹ ಮಾಡಿದ್ದಾರೆ.  ತನ್ನಿಷ್ಟದ ಊಟದ ಬಗ್ಗೆ ಆಶಿಷ್ ವಿಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ದೇಶದ ವಿವಿದ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಫೇಮಸ್ ಹೋಟೆಲ್‌ಗೆ ಹೋಗಿ ಊಟ ಸವಿದು ತನ್ನ ಅಭಿಮಾನಿಗಳಿಗೂ ವಿವರಿಸುತ್ತಿದ್ದಾರೆ. 
 
ಬೆಂಗಳೂರು ಸೇರಿದಂತೆ ಬೇರೆ ಎಲ್ಲೇ ಹೋದರೂ ಅಲ್ಲಿನ ಪ್ರಸಿದ್ಧ ಸ್ವಾದಿಷ್ಟಕರ ಊಟ ಸವಿದು ಅದರ ವಿಡಿಯೋ ಮಾಡಿ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ಬಾರಿ ಮುದ್ದೆ ಊಟ ಮಾಡಿ ಸೂಪರ್ ಎಂದಿದ್ದ ಆಶಿಶ್ ವಿದ್ಯಾರ್ಥಿ ಇದೀಗ ಮಾಂಸಾಹಾರ ಊಟದ ರುಚಿಯನ್ನು ಸವಿದು ತೃಪ್ತಿಪಟ್ಟಿದ್ದಾರೆ. ಈ ಬಾರಿ ಅವರ ವಿಲಾಗ್ ನಲ್ಲಿ ಬೆಂಗಳೂರಿನ ಶಿವಾಜಿ ನಗರದಲ್ಲಿನ ಒಂದು ಪುಟ್ಟ ಮಿಲಿಟರಿ ಹೋಟೆಲ್‌ ಊಟದ ಬಗ್ಗೆ ವಿವರಿಸಿದ್ದಾರೆ. ಊಟ ಮಾಡುತ್ತಾ ಆ ಹೋಟೆಲ್‌ನ ವಿಶೇಷತೆ ಮತ್ತು ಅಲ್ಲಿನ ಆಹಾರದ ರುಚಿಯನ್ನು ವಿವರಿಸಿದ್ದಾರೆ.  

30 ಜೊತೆ ಬಟ್ಟೆ, ಚಪ್ಪಲಿ ಬೇಕೆ ಬೇಕು; Mrs India ಸತ್ಯ ಬಯಲು ಮಾಡಿದ ನಿವೇದಿತಾ ಗೌಡ!

ಹೌದು ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ಆಹಾರದ ರುಚಿ ಇದೆ ಎಂದು ಊಟ ಮಾಡುತ್ತಲೇ ವಿವರಿಸಿದ್ದಾರೆ. ಶಿವಾಜಿ ನಗರದಲ್ಲಿರುವ ಮಿಲಿಟರಿ ಹೋಟೆಲ್ ನಲ್ಲಿ ದೊನ್ನೆ ಬಿರಿಯಾನಿ, ಚಿಕನ್ ಕರಿ, ಮಟನ್ ಸುಕ್ಕಾ, ಪಾಯಾ ಸೂಪ್ ಹಲವು ಫುಡ್ ಸವಿದು ವಾವ್ ಎಂದಿದ್ದಾರೆ. ಅನೇಕ ದಿನಗಳ ಬಳಿಕ ಬೆಂಗಳೂರಿನಲ್ಲಿ ಎಕೆ47 ನಟನನ್ನು ನೋಡಿ ಅಭಿಮಾನಿಗಳು ಸಹ ಖುಷ್ ಆಗಿದ್ದಾರೆ. ಈ ವಿಡಿಯೋವನ್ನು ನಟ ಕೂನಲ್ಲಿಯೂ ಹಂಚಿಕೊಂಡಿದ್ದಾರೆ.ಆಶಿಷ್ ರುಚಿಯಾದ ಊಟದ ಬಗ್ಗೆ ಹೇಳಿದ್ದನ್ನು ಕೇಳಿ ಅಭಿಮಾನಿಗಳು ಸಹ ಸಂತಸಗೊಂಡಿದ್ದಾರೆ.

ಈ ಕಾರಣಕ್ಕೆ ಯೂಟ್ಯೂಬ್‌ ಡಿಲೀಟ್ ಮಾಡಲು ಮುಂದಾಗ ನಟ ವಿಶಾಲ್ ಹೆಗ್ಡೆ!

ಆಶಿಷ್ ವಿದ್ಯಾರ್ಥಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಕನ್ನಡದಲ್ಲಿ ಇತ್ತೀಚಿಗೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಕೊನೆಯದಾಗಿ ಕನ್ನಡದಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಶಿಷ್ ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೆಹಲಿ ಮೂಲದ ನಟ ಆಶಿಷ್ ವಿದ್ಯಾರ್ಥಿ ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟರು. ನಂತರ ಎಕೆ 47 ಸಿನಿಮಾ ಮೂಲಕ ಕನ್ನಡ ಸಿನಿಮಾ ಅಭಿಮಾನಿಗಳ ಮುಂದೆ ಬಂದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಆಶಿಷ್ ಪಾತ್ರ ಅಭಿಮಾನಿಗಳ ಹೃದಯ ಗೆದ್ದಿತ್ತು ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಮಿಂಚಿದರು. ಬಹುಭಾಷ ನಟ ಇದೀಗ ವಿಲಾಗ್ ಮೂಲಕ ಅಭಿಮಾನಿಗಳ ಮುಂದೆಬರ್ತಿದ್ದಾರೆ. ವಿಶೇಷ ತಿನಿಸು ಹಾಗೂ ಅದು ಸಿನಿಮಾ ಜಾಗದ ಬಗ್ಗೆ ವಿವರಿಸುತ್ತಿದ್ದಾರೆ.    


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie Collection: ಕಿಚ್ಚ ಸುದೀಪ್‌ 'ಮಾರ್ಕ್' ಸಿನಿಮಾದ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು?
ಮೇಕಿಂಗ್‌ನಿಂದ ಕತೆವರೆಗೆ.. ಟಾಕ್ಸಿಕ್’ನಿಂದ ‘ಕ್ರಿಮಿನಲ್’ವರೆಗೆ: 2026ರ ಬಹು ನಿರೀಕ್ಷಿತ ಸಿನಿಮಾಗಳು