ತುಳುನಾಡು ದೈವದ ಬಗ್ಗೆ ಮತ್ತೊಂದು ಚಿತ್ರ; ಕೊರಗಜ್ಜನ ಕಥೆಯಲ್ಲಿ ನಟಿಸಿದ ಕಬೀರ್ ಬೇಡಿ

Published : Dec 06, 2022, 11:11 AM IST
ತುಳುನಾಡು ದೈವದ ಬಗ್ಗೆ ಮತ್ತೊಂದು ಚಿತ್ರ; ಕೊರಗಜ್ಜನ ಕಥೆಯಲ್ಲಿ ನಟಿಸಿದ ಕಬೀರ್ ಬೇಡಿ

ಸಾರಾಂಶ

 ಕರಿ ಹೈದ ಕರಿ ಅಜ್ಜ ಚಿತ್ರದಲ್ಲಿ ನಟಿಸಿದ ಬಾಲಿವುಡ್ ಖ್ಯಾತ  ನಟ ಕಬೀರ್ ಬೇಡಿ.....

70ರ ದಶಕದಲ್ಲಿ ಹಿಂದಿ ಚಿತ್ರರಂಗಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟ ಕಬೀರ್ ಬೇಡಿ ಇಡೀಗ ಕನ್ನಡ ಕರಿ ಹೈದ ಕರಿ ಅಜ್ಜ ಸಿನಿಮಾದಲ್ಲಿ ನಟಿಸಿದ್ದಾರೆ. ತುಳುನಾಡ ದೈವ ಕೊರಗಜ್ಜನ ಕಥೆ ಹೇಳುವ ಸಿನಿಮಾ ಇದಾಗಿದ್ದು ಮತ್ತೊಂದು ದೈವ ಕಥೆ ಸಿನಿ ರಸಿಕರ ಗಮನ ಸೆಳೆಯಲು ಸಜ್ಜಾಗಿದೆ. ಕಬೀರ್ ಸಿಂಗ್, ಭವ್ಯಾ, ಶ್ರುತಿ ಸೇರಿದಂತೆ ದೊಡ್ಡ ತಾರ ಬಳಗವೇ ಸಿನಿಮಾದಲ್ಲಿದೆ.... 

ಕೊರಗಜ್ಜ ಮಹಿಳೆ ಹೇಳು ಕರಿ ಹೈದ ಕರಿ ಅಜ್ಜ ಸಿನಿಮಾದಲ್ಲಿ ಕಬೀರ್ ಬೇಡಿ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ.  ಸುಧೀರ್ ಅತ್ತಾವರ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಕಬೀರ್ ರಾಜನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ಖುಷಿಯಾಗಿದೆ. ಕೊರಗಜ್ಜ ದೈವದ ಬಗ್ಗೆ ಮಾಡಿರುವ ಈ ಚಿತ್ರದಲ್ಲಿ ನನ್ನದು ರಾಜನ ಪಾತ್ರ ವಾಗಿದ್ದು ಶ್ರುತಿ, ಭವ್ಯಾ, ಭರತ್ ಸೂರ್ಯ ಸೇರಿಂದತೆ ದೊಡ್ಡ ಕಲಾವಿದರು ನಟಿಸಿದ್ದಾರೆ. ಅವರ ಜೊತೆ ನಟಿಸಿರುವುದು ಹೊಸ ಅನುಭವ ನೀಡಿದೆ' ಎಂದು ಕಬೀರ್ ಭೇಡಿ ಹೇಳಿದ್ದಾರೆ. 

ಉಕ್ರೇನ್‌ ಕುಟುಂಬದಿಂದ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಗೇಲು ಸೇವೆ

ಕಬೀರ್ ಬೇಡಿ ರಾಜನಾದರೆ, ರಾಣಿ ಪಾತ್ರದಲ್ಲಿ ಭವ್ಯಾ ನಟಿಸಿದ್ದಾರೆ. 'ಕಬೀರ್ ಬೇಡಿ ಅವರಂತಹ ಮಹಾನ್ ನಟನ ಜೊತೆ ಅಭಿನಯಿಸಿರುವುದಕ್ಕೆ ತುಂಬಾನೇ ಖುಷಿ ಇದೆ. ನಾನು ಈ ಚಿತ್ರದಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ, ಸುಧೀರ್ ಅತ್ತಾವರ್ ಒಳ್ಳೆಯ ಸಿನಿಮಾವನ್ನು ನಿರ್ದೇಶಿಸಿದ್ದಾರೆ'ಎಂದು ಭವ್ಯಾ ಹೇಳಿದ್ದಾರೆ. 

ನಿರ್ದೇಶಕರ ಮಾತು:

'ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದೆ. ಬೆಳ್ತಂಗಡಿ ಆಸುಪಫಾಸಿನಲ್ಲೇ ಹೆಚ್ಚು ಚಿತ್ರೀಕರಣವಾಗಿದೆ. ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ ಅವರ ಕುಟುಂಬದವರಿಗೆ ಕೊರಗಜ್ಜನ ಕುರಿತಾದ ಚಿತ್ರ ಮಾಡುವ ಹಂಬಲವಿತ್ತು. ಈ ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು. ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ ಆನಂತರ ಅವರ ಜನಾಂಗದ ಮಹನೀಯರೊಂದಿಗೆ ಚರ್ಚೆ ಮಾಡಿ 12ನೇ ಶತಮಾನದಲ್ಲಿದ್ದ ಜೊರಗಜ್ಜನ ಬಗ್ಗೆ ಯಾರಿಗೂ ಗೊತ್ತಿರದ ನಿಜ ಬದುಕಿನ ವಿಷಯವನ್ನು ತಿಳಿಸುವ ಪ್ರಯತ್ನ ಈ ಚಿತ್ರದ ಮೂಲಕ ಮಾಡಲಾಗುತ್ತದೆ. ಭರತ್ ಸೂರ್ಯ ಅವರು ಕೊರಗಜ್ಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಬೀರ್ ಬೇಡಿ, ಶ್ರುತಿ ಮತ್ತು ಭವ್ಯಾ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿದ್ಯಾಧರ್ ಶೆಟ್ಟಿ ಸಂಕಲನದ ಜೊತೆಗೆ ಇತಿಹಾಸದ ದಾಖಲೆ ಮತ್ತು ಪುರಾವೆಗಳನ್ನು ಕಲೆ ಹಾಕಿದ್ದಾರೆ' ಎಂದು ನಿರ್ದೇಶಕರು ಮಾತನಾಡಿದ್ದಾರೆ.

ಕೊರಗಜ್ಜನಿಗೆ ಪ್ರಾರ್ಥಿಸಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು!

'ನಮ್ಮ ಕುಟುಂಬದವರಿಗೆ ಕೊರಗಜ್ಜನ ಮೇಲೆ ವಿಶೇಷ ಭಕ್ತಿ ಇದೆ. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರತಂಡದ ಪ್ರೋತ್ಸಾಹದಿಂದ ಚಿತ್ರ ಉತ್ತಮವಾಗಿ ಮೂಡಿ ಬರುತ್ತಿದೆ. ಅಂದುಕೊಂಡಂತೆ ಆದರೆ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಚಿತ್ರ ತೆರೆಗೆ ಬರಲಿದೆ' ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹೇಳಿದ್ದಾರೆ.

ದತ್ರಿ ಕ್ರಿಯೇಷನ್ಸ್‌ ಮತ್ತು ಸಕ್ಸಸ್‌ ಫಿಲ್ಮ್ಸ್‌ ಬ್ಯಾನರ್‌ನ ಅಡಿಯಲ್ಲಿ ತ್ರಿವಿಕ್ರಮ್‌ ಸಪಲ್ಯ ಕರಿ ಹೈದ ಕರಿ ಅಜ್ಜ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಪವನ್ ವಿ ಕುಮಾರ್ ಮತ್ತು ಗಣೇಶ್ ಕೆಳಮನೆ ಛಾಯಗ್ರಹಣ ಮಾಡುತ್ತಿದ್ದರೆ ಸುಧೀರ್ ಮತ್ತು ಕೃಷ್ಣ ರವಿ ಸಂಗೀತ ನಿರ್ದೆಶಕ ಮಾಡಲಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ನಿರ್ದೇಶಕ ಸುಧೀರ್ ಅತ್ತಾವರ್ ಅವರೇ ಕಲಾ ನಿರ್ದೇಶನ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಜೈಲಿನಲ್ಲಿಯೂ 'ಡಿ ಬಾಸ್' ದರ್ಬಾರ್: ಮಲಗಿದ್ದ ಸಹ ಕೈದಿಗಳನ್ನು ಕಾಲಿನಿಂದ ಒದ್ದು ನಟ ದರ್ಶನ್ ದರ್ಪ