'ಬಡವರ ಮಕ್ಕಳು ಬೆಳಿಬೇಕ್'​ ಎನ್ನುತಾ ಪ್ರೇಮ್ ಮಗಳಿಗೆ ಅವಕಾಶ ಕೊಟ್ಟಿದ್ದೀರಾ? ನೆಟ್ಟಿಗರಿಗೆ ಡಾಲಿ ಖಡಕ್ ಉತ್ತರ

Published : Dec 06, 2022, 10:58 AM ISTUpdated : Dec 06, 2022, 11:13 AM IST
'ಬಡವರ ಮಕ್ಕಳು ಬೆಳಿಬೇಕ್'​ ಎನ್ನುತಾ ಪ್ರೇಮ್ ಮಗಳಿಗೆ ಅವಕಾಶ ಕೊಟ್ಟಿದ್ದೀರಾ? ನೆಟ್ಟಿಗರಿಗೆ ಡಾಲಿ ಖಡಕ್ ಉತ್ತರ

ಸಾರಾಂಶ

ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ​ ಎನ್ನುತ್ತಾ ಪ್ರೇಮ್ ಮಗಳಿಗೆ ಅವಕಾಶ ಕೊಟ್ಟಿದ್ದೀರಾ ಎಂದ ನೆಟ್ಟಿಗರಿಗೆ ಡಾಲಿ ಖಡಕ್ ಉತ್ತರ ನೀಡಿದ್ದಾರೆ. 

ಸ್ಯಾಂಡಲ್ ವುಡ್‌ನ ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ಧನಂಜಯ್ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಬಡವ ರಾಸ್ಕಲ್ ಸಕ್ಸಸ್ ಬಳಿಕ ಹೆಡ್ ಬುಷ್ ಸಿನಿಮಾಗೆ ಬಂಡವಾಳ ಹೂಡಿಸಿದ್ದ ಧನಂಜಯ್ ಇದೀಗ ಮತ್ತೊಂದು ಸಿನಿಮಾದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಧನಂಜಯ್ ನಿರ್ಮಾಣದಲ್ಲಿ ಬರ್ತಿರುವ ಸಿನಿಮಾಗೆ 'ಟಗರು ಪಲ್ಯಾ' ಎಂದು ಹೆಸರಿಡಲಾಗಿದೆ. ವಿಶೇಷ ಎಂದರೆ ಈ ಸಿನಿಮಾ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಮುಹೂರ್ತ ನೆರವೇರಿದ್ದು ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಅಂದಹಾಗೆ ಪ್ರೇಮ್ ಪುತ್ರಿಯ ಮೊದಲ ಸಿನಿಮಾದ ಲುಕ್ ಕೂಡ ವೈರಲ್ ಆಗಿದೆ. ಈ ನಡುವೆ ಧನಂಜಯ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. 'ಬಡವರ ಮಕ್ಕಳು ಬೆಳಿಯೋಕೆ ಬಿಡ್ರೋ' ಎಂದು ಧನಂಜಯ್ ಅವರೇ ಹೇಳಿರುವ ಮಾತನ್ನೇ ಪುನರಾವರ್ತಿಸಿ ಬಡವರ ಮಕ್ಕಳಿಗೆ ಅವಕಾಶ ಕೊಡಬಹುದಿತ್ತಲ್ಲಾ ಎಂದು ಸರ್ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಧನಂಜಯ್ ಶೇರ್ ಮಾಡಿರುವ ಫೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ, 'ಬಡವರ ಮಕ್ಕಳು ಬೆಳಿಬೇಕು ಸರ್, ಒಬ್ಬ ಬಡವರ ಮಕ್ಕಳಿಗೆ ಅವಕಾಶ ಕೊಡಬಹುದಿತ್ತಲ್ಲ ನೀವು' ಎಂದು ಕೇಳುತ್ತಿದ್ದಾರೆ. ನೆಟ್ಟಿಗರ ಪ್ರಶ್ನೆಗೆ ಧನಂಜಯ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 'ನಿರ್ದೇಶಕ ಒಬ್ಬ ಸೆಟ್ ಬಾಯ್ ಆಗಿದ್ದವನು ಕಣೋ ಕಂದ' ಎಂದು ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ಧನಂಜಯ್ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಾಲಿಯ ಉತ್ತರ ಅಭಿಮಾನಿಗಳ ಹೃದಯ ಗೆದ್ದಿದೆ. ಅಂದಹಾಗೆ ಡಾಲಿ ನಿರ್ಮಾಣದ ಟಗರ್ ಪಲ್ಯಾ ಸಿನಿಮಾದಲ್ಲಿ ನಾಯಕನಾಗಿ ನಾಗಭೂಷಣ್ ನಟಿಸುತ್ತಿದ್ದಾರೆ. ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಸೆಟ್ ಬಾಯ್ ಆಗಿದ್ದ ಉಮೇಶ್ ಈಗ ಟಗರು ಪಲ್ಯಾ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. 

ನೆನಪಿರಲಿ ಪ್ರೇಮ್ ಪುತ್ರಿ ಸಿನಿಮಾರಂಗಕ್ಕೆ ಎಂಟ್ರಿ; ಯಾವ ಚಿತ್ರ, ನಾಯಕ ಯಾರು?

ಇನ್ನು ಧನಂಜಯ್ ವಿರುದ್ಧ ನೆಪೋಟಿಸಂ ಆರೋಪ ಕೇಳಿಬಂದಿದೆ.  ಫಿಲ್ಮಿ ಕುಟುಂಬದ ಯಾವುದೇ ಹಿನ್ನೆಲೆ ಇಲ್ಲದೇ ಬಣ್ಣದ ಲೋಕಕ್ಕೆ ಬಂದು ಹೆಸರು ಮಾಡಿದ ಧನಂಜಯ್​ ಅವರು ಅನೇಕರಿಗೆ ಸ್ಫೂರ್ತಿ. ಆದರೆ ಇಂದು ಅವರು ನೆಪೋಟಿಸಂ ಮಾಡುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ. ಆದರೆ ಎಲ್ಲಾ ಪ್ರಶ್ನೆಗಳಿಗೂ ಒಂದೇ ಪ್ರತಿಕ್ರಿಯೆ ಮೂಲಕ ಖಡಕ್ ಉತ್ತರ ನೀಡಿದ್ದಾರೆ. 

Tagaru Palya ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನೆಂದು ರಿವೀಲ್ ಮಾಡಿದ ಅಮೃತಾ ಪ್ರೇಮ್

ಇನ್ನೂ ಡಾಲಿ ಧನಂಜಯ್ ಸಿನಿಮಾ ಬಗ್ಗೆ ಹೇಳುವುದಾದರೆ ಅನೇಕ ಸಿನಿಮಾಗಳಲ್ಲಿ​ ಬ್ಯುಸಿ ಆಗಿದ್ದಾರೆ. ‘ಉತ್ತರಕಾಂಡ’ ಸಿನಿಮಾದಲ್ಲಿ ಡಾಲಿ ನಟಿ ರಮ್ಯಾ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ರಮ್ಯಾ ಕಮ್ ಬ್ಯಾಕ್ ಸಿನಿಮಾ ಕೂಡ ಆಗಿದ್ದರಿಂದ ನಿರೀಕ್ಷೆ ಹೆಚ್ಚಾಗಿದೆ.   ಈ ಸಿನಿಮಾ ಜೊತೆಗೆ ‘ಒನ್ಸ್​ ಅಪಾನ್​ ಎ ಟೈಮ್​ ಇನ್ ಜಮಾಲಿ ಗುಡ್ಡ’ ಸಿನಿಮಾ ಕೂಡ ಡಾಲಿ ಕೈಯಲ್ಲಿದೆ. ಈಗಾಗಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು​ ಗಮನ ಸೆಳೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?