Junior Ravichandran ವಿದ್ಯುತ್ ತಗುಲಿ ಜ್ಯೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು!

By Suvarna News  |  First Published May 11, 2022, 12:06 AM IST
  • ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದನಾಗಿದ್ದ ಲಕ್ಷ್ಮೀನಾರಾಯಣ್
  • ಜೂನಿಯರ್ ರವಿಚಂದ್ರನ್ ಎಂದೇ ಖ್ಯಾತಿ
  • ಸಂಪ್‌ಗೆ ನೀರು ತುಂಬಿಸುವ ವೇಳೆ ವಿದ್ಯುತ್ ಶಾಕ್

ತುಮಕೂರು(ಮೇ.10): ಜ್ಯೂನಿಯರ್ ರವಿಚಂದ್ರನ್, ಜ್ಯೂನಿಯರ್ ಕ್ರೇಜಿ ಸ್ಟಾರ್ ಎಂದೇ ಖ್ಯಾತಿಯಾಗಿದ್ದ ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದ ಲಕ್ಷ್ಮೀನಾರಾಯಣ್ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹೆರೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಸಂಪ್‌ಗೆ ನೀರು ತುಂಬಿಸಲು ಮೋಟರ್ ಆನ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಲಕ್ಷ್ಮೀನಾರಾಯಣ್ ಸಾವನ್ನಪ್ಪಿದ್ದಾರೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tap to resize

Latest Videos

ಆರ್ಕೆಸ್ಟ್ರಾ, ಟಿವಿ ಶೋ, ಹಲವು ಕಾರ್ಯಕ್ರಮಗಳಲ್ಲಿ ಲಕ್ಷ್ಮೀನಾರಾಯಣ್ ಕಾಣಿಸಿಕೊಂಡು, ಕರ್ನಾಟಕದಲ್ಲಿ ಜ್ಯೂನಿಯರ್ ರವಿಚಂದ್ರನ್ ಎಂದೇ ಹೆಸರುವಾಸಿಯಾಗಿದ್ದರು. ನೋಡಲು ಸ್ಯಾಂಡಲ್‌ವುಡ್ ಹಿರಿಯ ನಟ ರವಿಚಂದ್ರನ್ ಹೋಲುವ ಲಕ್ಷ್ಮೀನಾರಾಯಣ್ ಅಪಾರ ಅಭಿಮಾನಿ ವರ್ಗವನ್ನು ಪಡೆದಿದ್ದರು.
 

click me!