ಸುಹಾಸಿನಿ ಚಿಕ್ಕಂದಿನಿಂದಲೂ ಓದು ಮತ್ತು ಕಲೆಯ ಮೇಲೆ ಆಪಾರ ಆಸಕ್ತಿ ಹೊಂದಿದ್ದರು. ಆದರೆ ಅವರ ಬದುಕಿನಲ್ಲಿ ಸ್ಫೂರ್ತಿಯಾಗಿದ್ದು ಚಿಕ್ಕಪ್ಪ ಕಮಲ್ ಹಾಸನ್.
ಸಹಜ ಸುಂದರಿ ನಟಿ ಸುಹಾಸಿನಿ ಕನ್ನಡ ಸಿನಿ ಪ್ರೇಕ್ಷಕರಿಗೆ ತುಂಬಾ ಹತ್ತಿರ. ಪಂಚಭಾಷಾ ತಾರೆ ಸುಹಾಸಿನಿ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಮಣಿರತ್ನಂ ಅವರ ಪತ್ನಿ ದಂಪತಿಗೆ ಓರ್ವ ಮಗನಿದ್ದಾನೆ.
ತಮಿಳುನಾಡಿನ ಪರಮಿಕುಡಿಯಲ್ಲಿ ಜನಿಸಿದ ಸುಹಾಸಿನಿ ಚಿಕ್ಕಂದಿನಿಂದಲೂ ಓದು ಮತ್ತು ಕಲೆಯ ಮೇಲೆ ಆಪಾರ ಆಸಕ್ತಿ ಹೊಂದಿದ್ದರು. ಶಾಲಾ ದಿನಗಳಲ್ಲಿ ನೃತ್ಯ ಮತ್ತು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅವರ ಅಜ್ಜ ಡಿ ಶ್ರೀನಿವಾಸನ್ ಪ್ರಸಿದ್ಧ ವಕೀಲರಾಗಿದ್ದರು. ನಾಟಕಗಳಲ್ಲಿ ಅಭಿನಯಿಸುವ ಅಪಾರ ಗೆಳೆಯರ ಬಳಗವನ್ನು ಹೊಂದಿದ್ದರು.
ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ, ಹತ್ಯೆಗೆ ಸಿಕ್ತು ಬಿಗ್ ಟ್ವಿಸ್ಟ್!
ಡಿ ಶ್ರೀನಿವಾಸನ್ ಅವರಿಗೆ ನಾಲ್ವರು ಮಕ್ಕಳು ನಳಿನಿ ರಾಘು (ಭರತ ನಾಟ್ಯ ಕಲಾವಿದೆ), ಚಂದ್ರ ಹಾಸನ್ (ಚಿತ್ರ ನಿರ್ಮಾಪಕ), ಚಾರು ಹಾಸನ್ (ನಟ, ನಿರ್ದೇಶಕ ಮತ್ತು ವಕೀಲ), ಕೊನೆಯ ಮಗ ಪ್ರಸಿದ್ಧ ನಟ ಕಮಲ್ ಹಾಸನ್.
ಶ್ರೀನಿವಾಸನ್ ಅವರ ಮಕ್ಕಳಲ್ಲಿ ಚಾರು ಹಾಸನ್ ಅವರ ಮೂವರು ಹೆಣ್ಣು ಮಕ್ಕಳಲ್ಲಿ ಕೊನೆಯವರೇ ಸುಹಾಸಿನಿ ಮಣಿರತ್ನಂ. ಅಂದರೆ ಕಮಲ್ ಹಾಸನ್ ಅವರ ಅಣ್ಣನ ಮಗಳು ಸುಹಾಸಿನಿ. ಸಹಜವಾಗಿಯೇ ಕಲೆಯ ಹಿನ್ನೆಲೆಯ ಕುಟುಂಬದಿಂದ ಬಂದ ಸುಹಾಸಿನಿ ಅವರು ತನ್ನ ಅಜ್ಜಿ ಮತ್ತು ಚಿಕ್ಕಪ್ಪ ಕಮಲ್ ಹಾಸನ್ ಜೊತೆಗೆ ವಾಸಿಸುವ ಮತ್ತು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 12 ವರ್ಷಕ್ಕೆ ಮದ್ರಾಸ್ ಗೆ ತೆರಳಿದರು.
ಅಲ್ಲಿಂದ ಅವರ ಕಲಾ ಜೀವನ ಪ್ರಾರಂಭವಾಯ್ತು. ಕಮಲ್ ಅವರಂತೆ ತಾನೂ ಕೂಡ ಬಣ್ಣದ ಬದುಕಿನಲ್ಲಿ ಸಾಧನೆ ಮಾಡಬೇಕು ಎಂದುಕೊಂಡರು. 1980ರಲ್ಲಿ ನೆಂಜತೈ ಕಿಲ್ಲಾತೆ ಎಂಬ ತಮಿಳು ಸಿನೆಮಾ ಒಂದರಲ್ಲಿ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಮೊದಲ ಸಿನೆಮಾದಲ್ಲೇ ತಮಿಳುನಾಡು ರಾಜ್ಯ ಸರ್ಕಾರದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಉತ್ತರ ಕನ್ನಡ: ಮಧ್ಯರಾತ್ರಿ ಕುಸಿದು ಕಾಳಿ ನದಿ ಪಾಲಾದ 1 ಕಿಮೀ ಉದ್ದದ ಸೇತುವೆ, ಟ್ರಕ್ ಡ್ರೈವರ್ ಬಚಾವ್!
ಇದಾದ ಬಳಿಕ 1983ರಲ್ಲಿ ತೆರೆಕಂಡ ಮಲಯಾಳಂ ಸಿನೆಮಾ ಕುಡಿವೆಡೆ ಎಂಬ ಸಿನೆಮಾದಲ್ಲಿ ಮುಮ್ಮಟ್ಟಿಯ ಜೊತೆಗೆ ನಟಿಸುವ ಮೂಲಕ ಅಲ್ಲೂ ಗುರುತಿಸಿಕೊಂಡರು. ಮೋಹನ್‌ಲಾಲ್ ಜೊತೆಗೆ ವಾನಪ್ರಸ್ತಂ ಸಿನೆಮಾದಲ್ಲಿ ನಟಿಸಿದರು. ಇದಾದ ನಂತರ ಕನ್ನಡದಲ್ಲಿ ವಿಷ್ಣುವರ್ಧನ್ ಜೊತೆಗೆ ಬಂಧನ ಸಿನೆಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದರು. ಇದಾದ ನಂತರ ಸಾಲು ಸಾಲು ಕನ್ನಡ ಸಿನೆಮಾದಲ್ಲಿ ಸುಹಾಸಿನಿ ನಟಿಸಿದ್ದಾರೆ.
ಹೀಗೆ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ನಟಿಸುತ್ತಿರುವ ತನ್ನ ಉತ್ತಂಗದ ಸಮಯದಲ್ಲೇ ಖ್ಯಾತ ನಿರ್ದೇಶಕ, ನಿರ್ಮಾಪಕ ಮಣಿರತ್ನಂ ಅವರನ್ನು 1988ರಲ್ಲಿ ಮದುವೆಯಾದರು. ಇವರಿಗೆ ನಂದನ್ ಎಂಬ ಓರ್ವ ಮಗನಿದ್ದಾನೆ. ಸದ್ಯ ತನ್ನದೇ ಆದ ಮದ್ರಾಸ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಅವರು ಹೊಂದಿದ್ದಾರೆ. ಗಂಡನಿಗೆ ಎಲ್ಲಾ ಕೆಲಸದಲ್ಲೂ ಬೆನ್ನೆಲುಬಾಗಿದ್ದಾರೆ. 1980ರಿಂದ ಈವರೆಗೂ ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಸುಹಾಸಿನಿ ಅವರಿಗೆ ಈಗ 62 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲೂ ಅತ್ಯಂತ ಸುಂದರವಾಗಿದ್ದಾರೆ.