
ಪ್ಯಾನ್ ಇಂಡಿಯಾ ನಟಿ ಕನ್ನಡತಿ ರಶ್ಮಿಕಾ ಮಂದಣ್ಣ ಮಾತನಾಡಿರುವ ರೀಲ್ಸ್, ವಿಡಿಯೋ ಕ್ಲಿಪ್ಪಿಂಗ್ಸ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಲೇ ಇರುತ್ತವೆ. ಕೆಲವು ಅವರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದು ಆಗಿರುತ್ತವೆ. ಇನ್ನೂ ಕೆಲವು ಅವರ ವೃತ್ತಿಗೆ ಕನೆಕ್ಟ್ ಆಗಿದ್ದು, ಎಲ್ಲವು ಕೂಡ ಹಲವರ ಮೆಚ್ಚುಗೆ, ಟೀಕೆಗಳಿಗೆ ಗುರಿಯಾಗುತ್ತವೆ. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ರಶ್ಮಿಕಾ ಮಂದಣ್ಣ, ತಾವೇನು ಹೇಳಬೇಕೋ ಅದನ್ನು ಹೇಳುತ್ತ, ಮಿಕ್ಕಿದ್ದನ್ನು ಜಗತ್ತಿಗೆ ಬಿಟ್ಟು ತಮ್ಮ ಕೆಲಸದಲ್ಲಿ ತಾವು ಬ್ಯುಸಿ ಆಗುತ್ತಾರೆ.
ನಟಿ ರಶ್ಮಿಕಾ ಮಂದಣ್ಣ ತಮ್ಮ ಆಹಾರದ ಬಗ್ಗೆ, ಅದರಲ್ಲಿರುವ ಒಂದು ಸಮಸ್ಯೆ ಬಗ್ಗೆ ಮಾತನಾಡಿರುವ ವೀಡಿಯೋ ಒಂದು ಈಗ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಪರೂಪ ಎನಿಸುವ ಸಮಸ್ಯೆಯೊಂದನ್ನು ಶೇರ್ ಮಾಡಿದ್ದಾರೆ. ಹಾಗಿದ್ದರೆ ರಶ್ಮಿಕಾ ಅದೇನು ಹೇಳಿದ್ದಾರೆ? ಅದಕ್ಕೆ ಅದೆಷ್ಟು ವಿಧದಲ್ಲಿ ವಿಭಿನ್ನವಾಗಿ ಹಲವರು ಕಾಮೆಂಟ್ ಮಾಡಿದ್ದಾರೆ ನೋಡಿ..
ಕಿಚ್ಚ ಸುದೀಪ್ ಅಂದು ಹೇಳಿದ್ದ ಮಹಾನ್ ಸೀಕ್ರೆಟ್ ಇಂದು ಹೀಗ್ಯಾಕೆ ವೈರಲ್ ಆಗ್ತಿದೆ ನೋಡಿ!
'ನಾನು ವೆಜಿಟೇರಿಯನ್. ನಾನು ಕೆಲವೊಂದಿಷ್ಟು ತರಕಾರಿಗಳಿಗೆ ಅಲರ್ಜಿ ಹೊಂದಿದ್ದೇನೆ. ಟೊಮೆಟೋ, ಆಲೂಗಡ್ಡೆ, ಸೌತೇಕಾಯಿ, ಕ್ಯಾಪ್ಸಿಕಂ, ಹೀಗೆ ಬಹಳಷ್ಟಿವೆ. ನನ್ನ ಫ್ರೆಂಡ್ಸ್ 'ಇವೆಲ್ಲಾ ಬಿಟ್ರೆ ನಿಂಗೆ ತಿನ್ನೋಕೆ ಇನ್ನೇನಿದೆ..?' ಅಂತಾ ಕೇಳ್ತಾರೆ. ಅದು ಕೂಡ ಒಳ್ಳೇ ಪಾಯಿಂಟ್ ಹೊಂದಿರೋ ಪ್ರಶ್ನೆನೇ ಆಗಿದೆ. ಇತ್ತೀಚೆಗೆ ನನ್ನ ಸ್ನೇಹಿತರ ಬಳಗ ಫಿಜ್ಜಾಗೆ ಆರ್ಡರ್ ಮಾಡಿತ್ತು. ಅದಕ್ಕೆ ಜತೆಯಾಗಿ ಟೊಮೇಟೋ ಸಾಸ್ ಬೇರೆ. 'ನನಗೆ ಇವೆಲ್ಲಾ ತಿನ್ನೋಕೆ ಆಗಲ್ಲ..' ಎಂದಿದ್ದಕ್ಕೆ, ನೀನು ಹಾಗೇ ಏನೂ ತಿನ್ನದೇ ಇರು, ಬೇರೆ ದಾರಿ ನಿನಗಿಲ್ಲ ಎಂದಿದ್ದಾರೆ ನನ್ ಫ್ರೆಂಡ್ಸ್.
ರಶ್ಮಿಕಾ ಹೇಳಿರುವಂತೆ ಅವರಿಗೆ ಕೆಲವು ತರಕಾರಿಗಳು ಅಲರ್ಜಿ. ಅದಕ್ಕೆ ಅವರ ಫ್ರೆಂಡ್ ಸರ್ಕಲ್ ಕಾಮೆಂಟ್ ಮಾಡಿರುವ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಆದರೆ, ಅದಕ್ಕೆ ಹಲವರು ತೀರಾ ವಿಭಿನ್ನ, ತೀರಾ ವಿಚಿತ್ರ ಎನ್ನುವಂತೆ ಟೀಕೆ ಮಾಡಿದ್ದಾರೆ. ಅದೇನೇ ಆಗಿರಲಿ, ಎಲ್ಲದಕ್ಕೂ ಪರಿಹಾರ ಇದೆ ಎಂಬುದು ನಟಿ ರಶ್ಮಿಕಾಗೆ ತಿಳಿಯದಿರುವ ಸಂಗತಿಯೇನೂ ಅಲ್ಲ. ಸಮಸ್ಯೆ ಇದೆ ಎಂದು ಗೊತ್ತಾಗಿರುವುದೇ ಪರಿಹಾರಕ್ಕೆ ದಾರಿ ಹುಡುಕಲು ಅವಕಾಶ ಮಾಡಿಕೊಟ್ಟಿದೆ. ಇನ್ನೇಕೆ ತಡ?
ಶಂಕರ್ ನಾಗ್ ಕಂಡ್ರೆ ಡಾ ರಾಜ್‌ಕುಮಾರ್‌ಗೆ ಆಗ್ತಾ ಇರ್ಲಿಲ್ಲ ಅನ್ನೋದು ಶುದ್ಧ ಸುಳ್ಳು, ಇಲ್ಲಿ ನೋಡಿ!
ಫುಡ್ ಎಕ್ಸ್‌ಫರ್ಟ್ ಸಲಹೆ ಪಡೆದು, ತಮ್ಮ ಫ್ಯಾಮಿಲಿ ವೈದ್ಯರನ್ನೂ ಸಂಪರ್ಕಿಸಿ ಮಾತನಾಡಿ ಆ ಬಗ್ಗೆ ಚರ್ಚಿಸಿ ನಟಿ ರಶ್ಮಿಕಾ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ ಎಂದಿದ್ದಾರೆ ಹಲವರು. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಸಿನಿಜರ್ನಿ ಪ್ರಾರಂಭಿಸಿದ ನಟಿ ರಶ್ಮಿಕಾ, ಈಗ ಬಾಲಿವುಡ್‌ನಲ್ಲೂ ಮಿಂಚುತ್ತಿರುವುದು ಸಂತೋಷದ ಸಂಗತಿಯೇ ಸರಿ. ಕನ್ನಡ ಸೇರಿದಂತೆ, ಸೌತ್ ಇಂಡಿಯಾದ ನಾಲ್ಕೂ ಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ, ಬಾಲಿವುಡ್‌ನಲ್ಲೂ ಕೈ ತುಂಬಾ ಆಫರ್ ಪಡೆದುಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.