ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಚಿತ್ರದ ಮೇಲೆ ಭರವಸೆ ಹೆಚ್ಚಿದೆ. ಮಗ ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಪ್ರಚಾರದಲ್ಲಿ ಬ್ಯುಸಿಯಿರುವ ಜೋಡಿ ದೋಸೆ, ಟೀ ಅಂತ ಫುಲ್ ಎಂಜಾಯ್ ಮಾಡ್ತಿದೆ.
ಇನ್ಸ್ಟಾಗ್ರಾಮ್‌ನಲ್ಲಿ ಸ್ಯಾಂಡಲ್ವುಡ್ ನಾಯಕಿ ಸಾನ್ಯಾ ಅಯ್ಯರ್, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್ ವಿಡಿಯೋದ್ದೇ ಹವಾ. ಅದ್ರಲ್ಲಿ ಸಮರ್ಜಿತ್ ಲಂಕೇಶ್, ಮುದ್ದು ಗೌರಿ ಸಾನ್ಯಾ ಅಯ್ಯರ್‌ಗೆ ಟೀ ಕುಡಿಸ್ತಿದ್ದಾರೆ. ನಾಚಿಕೊಳ್ತಾ ಟೀ ಹೀರುವ ಸಾನ್ಯಾ ಅಯ್ಯರ್, ಸೂಪರ್ ಅಂತಾ ಕೈಸನ್ನೆ ಮಾಡ್ತಾರೆ. ಇಷ್ಟಕ್ಕೂ ಈ ಜೋಡಿ ಹೋಗಿದ್ದು ಎಲ್ಲಿಗೆ, ಅವರಿಬ್ಬರ ಮಧ್ಯೆ ಏನೆಲ್ಲ ನಡಿತಾ ಇದೆ ಎಂಬ ಮಾಹಿತಿ ಇಲ್ಲಿದೆ.
ಸದ್ಯ ಸಾನ್ಯಾ ಅಯ್ಯರ್ (Sanya Iyer) ಮತ್ತು ಸಮರ್ಜಿತ್ ಲಂಕೇಶ್ (Samarjit Lankesh), ಸಿನಿಮಾ ವಿಷ್ಯಕ್ಕೆ ಸುದ್ದಿಯಲ್ಲಿದ್ದಾರೆ. ಆಗಸ್ಟ್ 15ರಂದು ಅವರಿಬ್ಬರು ನಟಿಸಿರುವ ಗೌರಿ (Gowri) ಚಿತ್ರ ತೆರೆಗೆ ಬರ್ತಿದೆ. ಈ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿ ಇರುವ ಯುವ ಜೋಡಿ, ಹೊಟೇಲ್ ಅಲ್ಲಿ ಕಾಣಿಸಿಕೊಂಡಿತ್ತು.
ಹೊಟೇಲಿನಲ್ಲಿ ಟೀ ಹೀರಿದ ಅವರು ನಂತ್ರ ದೋಸೆ ತಿಂದಿದ್ದಾರೆ. ಸಮರ್ಜಿತ್ ಟೀ ಕುಡಿಸಿದ್ರೆ, ಸಾನ್ಯಾ ದೋಸೆ ತಿನ್ನಿಸಿದ್ದಾರೆ. ಸಮರ್ಜಿತ್ ಸರ್ಪ್ರೈಸ್ ಆಗಿ ಟೀ ತಟ್ಟೆಯನ್ನು ಸಾನ್ಯಾ ಮುಂದಿಟ್ಟಾಗ ಸ್ವಲ್ಪ ಅನುಮಾನಿಸಿದ್ದ ಸಾನ್ಯಾ, ನಂತ್ರ ನಾಚುತ್ತಲೇ ಟೀ ಕುಡಿದಿದ್ದರು. ಅದಾದ್ಮೇಲೆ ದೋಸೆ ತಿನ್ನುವ ಸರದಿ ಸಮರ್ಜಿತ್ ಅವರಿಗೆ ಬಂದಿತ್ತು. ಸಾನ್ಯಾ ದೋಸೆ ತಿನ್ನಿಸಲು ಬಂದ್ರೆ ಸಮರ್ಜಿತ್ ಲಂಕೇಶ್ ನಾಚಿ ನೀರಾಗಿದ್ದರು. ಕೊನೆಗೂ ತುತ್ತು ತಿಂದ ಸಮರ್ಜಿತ್, ಸಾನ್ಯಾ ಕೈನಿಂದ ಬಂದ ದೋಸೆ ಸ್ವೀಟ್ ಆಗಿತ್ತು ಅಂತ ಕಮೆಂಟ್ ಮಾಡಿದ್ರು.
ಪುಟ್ಟ ಗೌರಿ ಬೋಲ್ಡ್‌ನೆಸ್‌ಗೆ ಹಾರ್ಟ್ ಬೀಟ್ ನಿಂತೋಯ್ತು ಅಂತಿದ್ದಾರೆ ಅಭಿಮಾನಿಗಳು!
ಒನ್ಸ್ ಮೋರ್, ಒನ್ಸ್ ಮೋರ್ ಎನ್ನುತ್ತಲೇ ಪ್ರಸಿದ್ಧಿ ಪಡೆದಿರುವ, ಬೆಳ್ಳುಳ್ಳಿ ಕಬಾಬ್ ಸ್ಪೇಷಲಿಷ್ಟ್ ಚಂದ್ರು ಅವರ ಶಿವಾನಂದ ಸರ್ಕಲ್ ನಲ್ಲಿರುವ ಫ್ಯಾಮಿಲಿ ರೆಸ್ಟೋರೆಂಟ್ ಗೆ ಕೂಡ ಜೋಡಿ ಭೇಟಿ ನೀಡಿದ್ದರು. ಅಲ್ಲಿ ಲೈವ್ ಬಂದ ಸಾನ್ಯಾ ಅಯ್ಯರ್, ಚಂದ್ರು ಅವರನ್ನು ಮಾತನಾಡಿಸಿದ್ದಾರೆ. ಗೌರಿ ಚಿತ್ರ ವೀಕ್ಷಣೆ ಮಾಡುವಂತೆ ಚಂದ್ರು ಕೂಡ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಅವರ ಜೊತೆ ಅಲ್ಲಾಡ್ಸೋ ರಾಹುಲ್ಲಾ ಹೆಸರಿನಲ್ಲೇ ಪ್ರಸಿದ್ಧಿ ಪಡೆದಿರುವ ಸಿಬ್ಬಂದಿ ಕೂಡ, ಗೌರಿ ಚಿತ್ರಕ್ಕೆ ಶುಭಕೋರಿದ್ದಾರೆ.
ಅಷ್ಟೇ ಅಲ್ಲ ಇವತ್ತು ಹಾಸ್ಯ ನಟಿ ಹಾಗೂ ನಿರೂಪಕಿ ಸುಶ್ಮಿತಾ ಜೊತೆ ಕಾಣಿಸಿಕೊಂಡ ಸಾನ್ಯಾ ಹಾಗೂ ಸಮರ್ಜತ್ ಹೂವಿನ ಮಾರ್ಕೆಟ್ ಸುತ್ತಿದ್ದಾರೆ. ಅಲ್ಲಿ ಹೂ ಖರೀದಿ, ಹೂ ಕಟ್ಟೋದು ಸೇರಿದಂತೆ ಕೆಲ ಆಕ್ಟಿವಿಟಿ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಸಮಯದಲ್ಲಿ ಸಾನ್ಯಾಗೆ ಅಮರ್ಜಿತ್ ರೆಡ್ ರೋಸ್ ಮುಡಿಸಿದ್ದಾರೆ. ಇಷ್ಟೇ ಅಲ್ಲ ಸಮರ್ಜಿತ್, ಕಮಲದ ಹೂ ನೀಡಿ ಸಾನ್ಯಾಗೆ ಪ್ರಪೋಸ್ ಮಾಡಿದ್ರೆ, ಸಾನ್ಯಾ ಗುಲಾಬಿ ಹೂ ನೀಡಿ ಪ್ರಪೋಸ್ ಮಾಡಿದ್ದಾರೆ. ಇದು ಗೌರಿಗೆ ಪ್ರೀತಿಯಿಂ ನೀಡ್ತಿರೋ ಗುಲಾಬಿ ಅಂತ ಸಾನ್ಯಾ ಹೇಳಿದ್ದಾರೆ.
ಇದನ್ನೆಲ್ಲ ನೋಡಿದ ನೆಟ್ಟಿಗರು, ಈ ಜೋಡಿ ಮೂವಿ ಪ್ರಚಾರ ಮಾಡ್ತಿದ್ಯಾ ಇಲ್ಲ ಡೇಟಿಂಗ್ ಮಾಡ್ತಿದ್ಯಾ ಅಂತ ಕಮೆಂಟ್ ಮಾಡಿದ್ದಾರೆ. ಸಾನ್ಯಾ ಅಯ್ಯರ್, ಅಮರ್ಜಿತ್ ಗೆ ದೋಸೆ ತಿನ್ನಿಸೋದನ್ನು ನೋಡಿದ ಕೆಲ ಅಭಿಮಾನಿಗಳು ಪಾಪ ರೂಪೇಶ್ ಅಂತ ಕಮೆಂಟ್ ಮಾಡಿದ್ದಾರೆ.
ಸ್ಲೀವ್‌ಲೆಸ್ ಬ್ಲೌಸ್, ಗುಲಾಬಿ ಬಣ್ಣದ ಸೀರೆಯುಟ್ಟ ಪುಟ್ಟಗೌರಿ: ಚಂದನವನದ ಚೆಂದುಳ್ಳಿ ಚೆಲುವೆ ಸಾನ್ಯಾ ಅಂತಿದ್ದಾರೆ ಫ್ಯಾನ್ಸ್
ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಅಯ್ಯರ್ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಸೋಮವಾರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಟ್ರೇಲರ್ ಅದ್ದೂರಿಯಾಗಿ ಬಂದಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಸಮರ್ಜಿತ್ ಲಂಕೇಶ್ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಚಿತ್ರವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದು, ಕಿಚ್ಚ ಸುದೀಪ್ ಬೆಂಬಲ ನೀಡಿದ್ದಾರೆ.