
ಸ್ಯಾಂಡಲ್‌ವುಡ್ ಯುವ ನಟ ಚಿರಂಜೀವಿ ಸರ್ಜಾ ಅಗಲಿ ಒಂದು ತಿಂಗಳಾಗಿದೆ. ಸರ್ಜಾ ಮತ್ತು ಸುಂದರ್ ರಾಜ್ ಕುಟುಂಬದವರು ಕನಕಪುರದ ನೆಲಗುಳಿಯ 'ಬೃಂದಾವನ' ಫಾರ್ಮ್‌ಹೌಸ್‌ನಲ್ಲಿ ಪೂಜೆಯನ್ನೂ ಸಲ್ಲಿಸಿದ್ದಾರೆ. ಆದರೂ ಚಿರು ಇನ್ನಿಲ್ಲ ಎಂಬ ವಿಚಾರವನ್ನು ಚಿತ್ರರಂಗದವರು ಮತ್ತು ಆಪ್ತರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.
'ಲವ್ ಯು Baby ma,ನಾನು ನಗಲು ನೀನೇ ಕಾರಣ'; ಮೇಘನಾ ರಾಜ್
ಜೂನ್ 7ರಂದು ಹೃದಯಾಘಾತದಿಂದ ಅಗಲಿದ ಚಿರುಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರ ಭಾಷಾ ನಟ-ನಟಿಯರು ಮತ್ತು ಕ್ರಿಕೆಟಿಗರು ಕಂಬನಿ ಮಿಡಿದಿದ್ದರು. ಚಿರು ಸಾವಿನ ವಿಚಾರ ಮತ್ತು ವಿಡಿಯೋಗಳು ಗೂಗಲ್‌ನಲ್ಲಿ ಅತಿ ಹೆಚ್ಚು ಗಮನ ಸೆಳೆದು, ವೀಕ್ಷಣೆ ಪಡೆದು ಕೊಂಡಿತ್ತು. ಕೋಟಿಗೂ ಮೀರಿ # ಹ್ಯಾಷ್‌ಟ್ಯಾಗ್ ಬಳಸಿ, ಚಿರು ಹೆಸರಲ್ಲಿ ಸಂತಾಪ ಸೂಚಿಸಲಾಗಿತ್ತು. ಈ ಮಧ್ಯೆ ನಗುಮೊಗದ ಚಿರಂಜೀವ ಸರ್ಜಾ ಸಾವಿಗೆ ಪ್ರಖ್ಯಾತ ಇನ್‌ಸ್ಟಾಗ್ರಾಂ ಖಾತೆಯೂ ನಮನ ಸಲ್ಲಿಸಿದ್ದು, Remebering ಎಂದು ಚಿರಿಂಜೀವಿ ಸರ್ಜಾ ಹ್ಯಾಷ್ ಟ್ಯಾಗ್ ಬಳಸಿದೆ.
35 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಚಿರಂಜೀವಿ ಖಾತೆಯನ್ನು ಪತ್ನಿ ಮೇಘನಾ ರಾಜ್ ನೋಡಿಕೊಳ್ಳುತ್ತಿದ್ದಾರೆ. ಚಿರು ನೆನೆದು ಬರೆದ ಸಾಲುಗಳನ್ನು ಮೇಘನಾ ಇಲ್ಲಿಯೂ ಶೇರ್ ಮಾಡಿಕೊಂಡಿದ್ದರು. ಈ ಖಾತೆಯನ್ನು ಇನ್‌ಸ್ಟಾಗ್ರಾಂ ಕಂಪನಿಯೂ ಸ್ಮರಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದೆ.
ಚಿರಂಜೀವಿ ಸಮಾಧಿಗೆ ಪೂಜಿಸುತ್ತಾ ಕಣ್ಣೀರಿಟ್ಟ ಧ್ರುವ ಸರ್ಜಾ!
ಸ್ಯಾಂಡಲ್‌ವುಡ್ ಯುವ ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆ ಹಾಗೂ ಎದೆ ನೋವೆಂದು ಮನೆಯಲ್ಲಿಯೇ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಹಲವು ಚಿತ್ರಗಳಲ್ಲಿ ನಟಿಸಿದ ಈ ಯುವನಟನ ಅಕಾಲಿಕ ಮರಣಕ್ಕೆ ಕನ್ನಡ ಚಿತ್ರರಂಗವೇ ಶಾಕ್‌ಗೆ ಒಳಗಾಗಿತ್ತು.
ಪತ್ನಿ, ನಟಿ ಮೇಘನಾ ರಾಜ್ ಚಿರು ಮಗುವಿನ ನಿರೀಕ್ಷೆಯಲ್ಲಿದ್ದು, ಪತಿಯ ಸಾವಿನಿಂದ ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದಾರೆ. ಪತಿಗಾಗಿ ಪ್ರಾರ್ಥನಾ ಸಭೆಯನ್ನೂ ನಡೆಸಿದ್ದು, ಸದಾ ನಗಲು ಯತ್ನಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.