
ಇಂದು ಭಾರತದ ಶ್ರೇಷ್ಠ ಗಾಯಕರಲ್ಲಿ ಒಬ್ಬರಾಗಿರುವ ಶ್ರೇಯಾ ಘೋಷಾಲ್ ಸಂಗೀತದ ಜರ್ನಿ ಬಗ್ಗೆ ಹಲವರಿಗೆ ಗೊತ್ತಿಲ್ಲ. ಶ್ರೇಯಾ ಘೋಷಾಲ್ ಅವರು ಮೂಲತಃ ರಾಜಸ್ಥಾನದವರು. ಆದರೆ, ಅವರ ಇಡೀ ಕುಟಂಬ ಮುಂಬೈನಲ್ಲಿ ನೆಲೆಸಿತ್ತು. ಅದೇ ಕಾರಣದಿಂದ ಇಂದು ಶ್ರೇಯಾ ಅವರು ಬಾಲಿವುಡ್ ಗಾಯಕಿ ಎಂಬ ಹೆಸರು ಪಡೆದುಕೊಳ್ಳಲು ಕಾರಣವಾಯಿತು. ಶ್ರೇಯಾ ಘೋಷಾಲ್ ಅವರು ಚಿಕ್ಕ ವಯಸ್ಸಿನಿಂದಲೇ ಹಾಡುವುದರಲ್ಲಿ ಪ್ರತಿಭೆ ಹಾಗೂ ಆಸಕ್ತಿ ಹೊಂದಿದ್ದರು. 4ನೇ ವರ್ಷದಿಂದಲೇ ಅವರು ಸಂಗೀತದ ಅಭ್ಯಾಸ ಹಾಗೂ ಹಾಡಲು ಶುರು ಮಾಡಿದ್ದಾರೆ.
ಶ್ರೇಯಾ ಘೋಷಾಲ್ ಅವರು 1996ರಲ್ಲಿ ಹಿಂದಿಯ ಸರಿಗಮಪ 'ಚಿಲ್ಡ್ರನ್ ಸ್ಪೆಷಲ್' ಎಪಿಸೋಡ್ ನಲ್ಲಿ ಮೊದಲು ಕಾಣಿಸಿಕೊಂಡರು. ಅಲ್ಲಿ ಅವರ ಗಾನಸುಧೆ ಎಷ್ಟು ಚೆನ್ನಾಗಿತ್ತು ಎಂದರೆ, ಜಡ್ಜ್‌ಸ್ ಹಾಗೂ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಅವರು ಆಗಲೇ ಪಡದುಕೊಂಡಿದ್ದರು. ಆಗ ಅವರು ಈವೆಂಟ್ ವಿನ್ನರ್ ಪ್ರಶಸ್ತಿ ಪಡೆದುಕೊಂಡರು. ಬಳಿಕ 2000ನೇ ಇಸ್ವಿಯಲ್ಲಿ ಅದೇ ಸರಿಗಮಪ ರಿಯಾಲಿಟಿ ಶೋದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು.
ಶ್ರೇಯಾ ಘೋಷಾಲ್ ಹಾರ್ಟ್ ಓಲ್ಡ್ ಅಂತೆ.. ಐಶ್ವರ್ಯಾ ರೈ ಬಗ್ಗೆ ಈ ಸಿಂಗರ್ ಹೀಗ್ ಹೇಳೋದಾ?
ಸರಿಗಮಪ ಶೋದಲ್ಲಿ 2000ನೇ ಇಸ್ವಿಯಲ್ಲಿ ಗೆಲುವು ಸಾಧಿಸಿದ ಮೇಲೆ ಶ್ರೇಯಾ ಘೋಷಾಲ್ ಬಾಲಿವುಡ್ ಸಿನಿಮಾ ಹಾಡು ಹಾಡಲು ಶುರು ಮಾಡಿದ್ದಾರೆ. ಆ ಬಳಿಕ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಸಿನಿಮಾ ಹಾಡು ಹಾಡೋದ್ರಲ್ಲಿ ಶ್ರೇಯಾ ಘೋಷಾಲ್ ಅದೆಷ್ಟು ಬ್ಯುಸಿ ಆಗ್ಬಿಟ್ರು ಅಂದ್ರೆ, ಬಾಲಿವುಡ್ ಮಾತ್ರವಲ್ಲದೇ ಭಾರತದ ಇತರ ಭಾಷೆಗಳಲ್ಲು ಹಾಡೋಕೆ ಶುರು ಮಾಡಿದರು. ಇಂದು ಶ್ರೇಯಾ ಘೋಷಾಲ್ ಅವರು ಏಳೆಂಟು ಭಾಷೆಗಳಲ್ಲಿ ಹಾಡುತ್ತಾರೆ.
ಶ್ರೇಯಾ ಘೋಷಾಲ್ ಅವರು ನಾಲ್ಕು ಬಾರಿ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಹಿಂದಿ ಸೇರಿದಂತೆ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ, ಬೆಂಗಾಳಿಯಲ್ಲೂ ಕೂಡ ಶ್ರೇಯಾ ಹಾಡಿದ್ದಾರೆ. ಸಂಗೀತದಲ್ಲಿ ಪ್ರತಿಭೆ ಶ್ರೇಯಾ ಘೋಷಾಲ್ ಅವರಿಗೆ ಬಾಲ್ಯದಿಂದಲೇ ಬಳುವಳಿಯಾಗಿ ಬಂದಿದೆ. ಸದ್ಯಕ್ಕಂತೂ ಶ್ರೇಯಾ ಬಾಲಿವುಡ್‌ನ ನಂಬರ್ ಒನ್ ಗಾಯಕಿ. ಅಷ್ಟೇ ಅಲ್ಲ, ಭಾರತದ ಶ್ರೇಷ್ಠ ಗಾಯಕಿಯರಲ್ಲಿ ಶ್ರೇಯಾಗೆ ಕೂಡ ಸ್ಥಾನವಿದೆ.
ಅಪ್ಪು-ಅಪ್ಪಾಜಿ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ: ಅದೆಷ್ಟೋ ಗುಟ್ಟು ಜಗತ್ತಿಗೆ ಗೊತ್ತೇ ಇಲ್ಲ! ಇಲ್ನೋಡಿ..
ನೋಡಲೂ ಕೂಡ ಸುಂದರಿ ಎನ್ನಿಸುವ ಶ್ರೇಯಾ ಅವರಿಗೆ ಸಿನಿಮಾ ಆಫರ್ ಕೂಡ ಬಂದಿತ್ತು. ಆದರೆ, 'ಸಂಗೀತವೇ ನನ್ನ ಉಸಿರು, ಅದೇ ನನ್ನ ಜೀವನ' ಎಂದು ಅರಿತಿರುವ ಶ್ರೇಯಾ ಘೋಷಾಲ್, ಸಿನಿಮಾ ನಟನೆ ಕಡೆ ಮುಖ ಮಾಡಲೇ ಇಲ್ಲ. ಆದರೆ, ಅವರು ನಂಬಿರುವ ಸಂಗೀತ ಅವರನ್ನು ಕೈ ಬಿಟ್ಟಿಲ್ಲ. ಇಂದೂ ಕೂಡ ಶ್ರೇಯಾ ಘೋಷಾಲ್ ಬಹಳಷ್ಟು ಭಾಷೆಗಳಿಂದ ಆಫರ್ ಪಡೆಯುತ್ತಿದ್ದಾರೆ. ಅವರಿಗೆ ಜಗತ್ತಿನಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.