ಮತ್ತೆ ಕೆಲಸ ಶುರು ಮಾಡಿದ ಶಿವಣ್ಣ, 'ಶಿವಸೈನ್ಯ'ಕ್ಕೆ ಗುಡ್ ನ್ಯೂಸ್: ಯಾವ ಸಿನಿಮಾ ಗೊತ್ತಾ?

Published : Mar 02, 2025, 03:07 PM ISTUpdated : Mar 02, 2025, 03:28 PM IST
ಮತ್ತೆ ಕೆಲಸ ಶುರು ಮಾಡಿದ ಶಿವಣ್ಣ, 'ಶಿವಸೈನ್ಯ'ಕ್ಕೆ ಗುಡ್ ನ್ಯೂಸ್: ಯಾವ ಸಿನಿಮಾ ಗೊತ್ತಾ?

ಸಾರಾಂಶ

ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಸಾರಥ್ಯದಲ್ಲಿ 'ಶಿವಣ್ಣ 131' ತಯಾರಾಗುತ್ತಿದೆ. ಚಿತ್ರದಲ್ಲಿ ಹ್ರ್ಯಾಟ್ರಿಕ್ ಶಿವರಾಜ್‌ಕುಮಾರ್ ಹಿಂದೆಂದೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ದೇವ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ. ಗುಳ್ಟೂ ಖ್ಯಾತಿಯ ನವೀನ್ ಶಂಕರ್ ಕೂಡ..

ಕ್ಯಾನ್ಸರ್ ಮುಕ್ತರಾಗಿರುವ ದೊಡ್ಮನೆ ದೊರೆ ಡಾ.ಶಿವರಾಜ್ ಕುಮಾರ್ (Shivarajkumar) ರೆಸ್ಟ್ ಮೂಡ್ ನಿಂದ ಈಗ ವರ್ಕ್ ಮೂಡ್ ಗೆ ಕಂಬ್ಯಾಕ್ ಆಗುತ್ತಿದ್ದಾರೆ. ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದಿದ್ದ ಶಿವಣ್ಣ ಇಷ್ಟು ದಿನ ವಿಶ್ರಾಂತಿಯಲ್ಲಿದ್ದರು. ವಿಶ್ರಾಂತಿಗೆ ವಿರಾಮ ಹಾಕಿ ಈಗ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ನಾಳೆಯಿಂದ ಶಿವಣ್ಣ ನಟಿಸುತ್ತಿರುವ 131 ಚಿತ್ರೀಕರಣ ಮತ್ತೆ ಪ್ರಾರಂಭವಾಗುತ್ತಿದೆ. 

ಈಗಾಗಲೇ 131 ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಂಡಿದ್ದು,  ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು.‌ಇದೀಗ ಎರಡನೇ ಹಂತದ ಚಿತ್ರೀಕರಣ ನಾಳೆಯಿಂದ ಮತ್ತೆ ಆರಂಭವಾಗುತ್ತಿದೆ. ಶಿವಣ್ಣ ಅದೇ ಉತ್ಸಾಹ, ಎನರ್ಜಿಯಿಂದ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ಅನಾರೋಗ್ಯದಿಂದ ಬಹುಬೇಗ ಚೇತರಿಸಿಕೊಂಡಿದ್ದಾರೆ. ಇದೀಗ ಸಾಹಸ ದೃಶ್ಯಗಳಲ್ಲಿ ಕೂಡ ನಟಿಸಲಿರುವ ಶಿವಣ್ಣ, ಸಂಪೂರ್ಣವಾಗಿ ಫಿಟ್ & ಫೈನ್ ಆಗಿದ್ದಾರೆ. 

ಚಿಕ್ಕ ವಯಸ್ಸಲ್ಲೇ ಹಾಡಿದ್ದ ಅಪ್ಪು, ಆ ಹಾಡು ಕೇಳಿ ಶಿವಣ್ಣ ಮಾಡಿದ್ದೇನು? ಸೀಕ್ರೆಟ್ ಓಡಾಡ್ತಿದೆ ಈಗ..!

ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಸಾರಥ್ಯದಲ್ಲಿ 'ಶಿವಣ್ಣ 131' ತಯಾರಾಗುತ್ತಿದೆ. ಚಿತ್ರದಲ್ಲಿ ಹ್ರ್ಯಾಟ್ರಿಕ್ ಶಿವರಾಜ್‌ಕುಮಾರ್ ಹಿಂದೆಂದೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ದೇವ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ. ಗುಳ್ಟೂ ಖ್ಯಾತಿಯ ನವೀನ್ ಶಂಕರ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಘೋಸ್ಟ್ ಖ್ಯಾತಿಯ ವಿ.ಎಂ.ಪ್ರಸನ್ನ ಮತ್ತು ಸೀತಾರಾಮಂ ಜನಪ್ರಿಯತೆಯ ಜಯಕೃಷ್ಣ ಬರಹಗಾರರಾಗಿ ಚಿತ್ರತಂಡದ ಭಾಗವಾಗಿದ್ದಾರೆ.

ವಿಕ್ರಂ, ವೇದ, ಆರ್ಡಿಎಕ್ಸ್, ಖೈದಿ ಸಿನಿಮಾಗಳ ಖ್ಯಾತಿಯ ಸ್ಯಾಮ್ ಸಿ.ಎಸ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ದೀಪು ಎಸ್ ಕುಮಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಜೊತೆಗೆ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಶಿವರಾಜ್‌ಕುಮಾರ್ ಲುಕ್, ಗೆಪಟ್ ಎಲ್ಲವೂ ಈ ಚಿತ್ರದಲ್ಲಿ ತೀರಾ ವಿಭಿನ್ನವಾಗಿದ್ದು, ಈ ಚಿತ್ರದಲ್ಲಿ ಅವರ ಅಭಿಮಾನಿಗಳು ಅವರನ್ನು ಬೇರೆಯದೇ ರೀತಿಲ್ಲಿ ನೋಡಲಿದ್ದಾರೆ. 

ಅಪ್ಪು-ಅಪ್ಪಾಜಿ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ: ಅದೆಷ್ಟೋ ಗುಟ್ಟು ಜಗತ್ತಿಗೆ ಗೊತ್ತೇ ಇಲ್ಲ! ಇಲ್ನೋಡಿ..

ಮಹೇಂದ್ರ ಸಿಂಹ ಕ್ಯಾಮೆರಾ ಮೋಡಿ: ಶಿವಣ್ಣನ 131 ಸಿನಿಮಾದ ಪ್ರಮುಖ ಆಕರ್ಷಣೆ ಮಹೇಂದ್ರ ಸಿಂಹ ಕ್ಯಾಮೆರಾ ವರ್ಕ್. ಈಗಾಗಲೇ ಶಿವಣ್ಣ ಜೊತೆ ಟಗರು, ಘೋಸ್ಟ್ ಚಿತ್ರಗಳಲ್ಲಿ ಅದ್ಭುತ ಕ್ಯಾಮೆರಾ ಕೈಚಳಕ ತೋರಿಸಿರುವ ಮಹೇಂದ್ರ ಸಿಂಹ ಮತ್ತೊಮ್ಮೆ ದೊಡ್ಮನೆ ದೊರೆ ಚಿತ್ರದಲ್ಲಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಮಹೇನ್ ಸಿಂಹ ಶಿವಣ್ಣನ 131 ಚಿತ್ರದಲ್ಲಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ ಮಂದಣ್ಣಗೆ ಪೋಷಕರಿಂದ ಭರ್ಜರಿ ಮದುವೆ ಗಿಫ್ಟ್; ಕೋಟಿ ಬೆಲೆಯ ಐಶಾರಾಮಿ ಮನೆ ಮಗಳ ಹೆಸರಿಗೆ ವರ್ಗಾವಣೆ!
ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು