
ಬೆಂಗಳೂರು (ನ.20) ಸ್ಯಾಂಡಲ್‌ವುಡ್ ಇತಿಹಾಸಕ ಕೆದಕಿ ನೋಡಿದರೆ ರೋಮಾಂಚನಗೊಳ್ಳದೇ ಇರದು. ಭಾರತೀಯ ಸಿನಿಮಾದಲ್ಲಿ ಹಲವು ಪ್ರಯೋಗ, ಯಾರು ಮಾಡದ ಸಾಧನೆ ಮಾಡಿದ ಹೆಗ್ಗಳಿಕೆ ಕನ್ನಡ ಸಿನಿಮಾಗೆ ಇದೆ. ಈ ಪೈಕಿ ಭಾರತೀಯ ಸಿನಿಮಾದಲ್ಲಿ ಮೊದಲ ಸ್ಲೋ ಮೋಶನ್ ಹಾಡು ನೀಡಿದ ಖ್ಯಾತಿ ಸ್ಯಾಂಡಲ್‌ವುಡ್‌ಗೆ ಇದೆ. ವಿಷ್ಣುವರ್ಧನ್‌ಗೆ ಸೂಪರ್ ಸ್ಟಾರ್ ಪಟ್ಟ ತಂದುಕೊಟ್ಟ ಈ ಸಿನಿಮಾ ನಾಗರಹಾವು. ಈ ಸಿನಿಮಾದ ಬಾರೇ ಬಾರೇ ಚಂದದ ಚೆಲುವಿನ ತಾರೆ ಹಾಡು ತಂತ್ರಜ್ಞಾನದಿಂದ ಮಾತ್ರವಲ್ಲ ಎಲ್ಲರನ್ನು ಪ್ರೀತಿಯ ಅಮಲಿನಲ್ಲಿ ಮುಳುಗಿಸಿದ ಹಾಡು.
ಬಾಲಿವುಡ್ ಸೇರಿದಂತೆ ಭಾರತದ ಯಾವುದೇ ಸಿನಿಮಾ ಇಂಡಸ್ಟ್ರಿ ಸ್ಲೋ ಮೋಶನ್ ಕುರಿತು ಯೋಚನೆ ಮಾಡಿರಲಿಲ್ಲ. ಅಂದಿನ ಕಾಲಕ್ಕೆ ಅದು ಅಸಾಧ್ಯವಾಗಿತ್ತು. ಡಿಜಿಟಲ್ ತಂತ್ರಜ್ಞಾನದ ಸಹಾಯವಿಲ್ಲ, ಡಿಜಿಟಲ್ ಎಡಿಟಿಂಗ್ ಸೇರಿದಂತೆ ಅಧುನಿಕ ತಂತ್ರಜ್ಞಾನಗಳು ಇಲ್ಲ. ಈ ಕಾಲದಲ್ಲಿ ಕನ್ನಡ ಸಿನಿಮಾ ಮೊದಲ ಸ್ಲೋ ಮೋಶನ್ ಹಾಡು ನೀಡಿತ್ತು. ವಿಷ್ಣುವರ್ಧನ್ ಆರತಿ ನಡುವಿನ ಲವ್ ಸಾಂಗ್ ಯುವ ಮನಸ್ಸುಗಳ ತೇಲಾಡಿಸಿದರೆ, ಹಿರಿಯರು ತಮ್ಮ ಬಾಲ್ಯಕ್ಕೆ ನೆನಪಿಗೆ ಜಾರಿದ್ದರು. ಪ್ರೀತಿ ಸ್ಲೋ ಮೋಶನ್ ಮೂಲಕ ಹರಿದಿತ್ತು. ನಗು , ನಡಿಗೆಯಲ್ಲಿ ಪ್ರೀತಿ ಉಕ್ಕಿತ್ತು. ಸ್ಲೋ ಮೋಶನ್ ಮೂಲಕ ಪ್ರೀತಿ ಪಯಣ ಸುದೀರ್ಘವಾಗಿತ್ತು. ಈ ರೋಮಾಂಚನ ಅನುಭವ ಭಾರತೀಯ ಸೀನಿಮಾದಲ್ಲೇ ಮೊದಲಾಗಿತ್ತು. 1972ರಲ್ಲೇ ನಾಗರಹಾವು ಸಿನಿಮಾ ಮೂಲಕ ಕನ್ನಡ ಸಿನಿಮಾ ಈ ಸಾಧನೆ ಮಾಡಿತ್ತು.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾದಲ್ಲಿ ಈ ಇತಿಹಾಸ ನಿರ್ಮಾಣವಾಗಿತ್ತು.ಛಾಯಾಗ್ರಾಹಕ ಚೆಟ್ಟಿಬಾಬು ಹಾಗೂ ಪುಟ್ಟಣ ಕಣಗಾಲ್ ಅದ್ಭುತ ಐಡಿಯಾ, ಭಿನ್ನ ಆಲೋಚನೆ ಜೊತೆಗೆ ಅಂದಿನ ತಂತ್ರಜ್ಞಾನ ಬಳಸಿ ಈ ಸ್ಲೋ ಮೋಶನ್ ಸಾಂಗ್ ಹುಟ್ಟಿಕೊಂಡಿತು.ಪ್ರೀತಿ ನಿಧಾನವಾಗಿ ಹರಿಯಬೇಕು ಅನ್ನೋದು ಮೂಲ ಮಂತ್ರ. ಹೀಗಾಗಿ ಸ್ಲೋ ಮೋಶನ್‌ನಲ್ಲಿ ಹಾಡು ತೆಗೆಯಲು ನಿರ್ಧರಿಸಲಾಗಿತ್ತು.
ನಾಗರಹಾವು ಸಿನಿಮಾ ನಟ ವಿಷ್ಣುವರ್ಧನ್ ಕರಿಯರ್‌ಗೆ ಮಹತ್ವದ ತಿರುವು ಕೊಟ್ಟ ಸಿನಿಮಾ. ವಿಷ್ಣುರ್ಧನ್ ಆರತಿ ಜೋಡಿಗೆ ಅಭಿಮನಿಗಳು ಮರುಳಾಗಿದ್ದರು. ಇತ್ತ 100 ದಿನಗಳ ಯಶಸ್ವಿ ಪ್ರದರ್ಶನ ಜೊತೆ ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಈ ಪೈಕಿ ಬಾರೆ ಬಾರೇ ಚಂದದ ಚೆಲುವಿನ ತಾರೆ ಹಾಡು ಸ್ಲೋ ಮೋಶನ್ ಮೂಲಕ ಪ್ರೇಕ್ಷಕರ ಮೋಡಿ ಮಾಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.