
1970ರ ದಶಕದಲ್ಲಿ ಕನ್ನಡ ಸಿನಿಮಾಗೆ ಇದ್ದಷ್ಟು ಧೈರ್ಯ ಭಾರತದ ಇತರ ಯಾವುದೇ ಸಿನಿ ರಂಗಕ್ಕೂ ಇರಲಿಲ್ಲ. ಬಾಲಿವುಡ್ ಸಿನಿಮಾಗಳು ಹಾಲಿವುಡ್ ಸೇರಿ ಇತರರ ಕಾಪಿ ಮಾಡುತ್ತಿತ್ತು. ಇನ್ನುಳಿದ ಪ್ರಾದೇಶಿಕ ಸಿನಿಮಾ ತಮ್ಮ ಭಾಷೆಯ ಸಿನಿಪ್ರಿಯರಿಗೆ ತಕ್ಕಂತೆ ಸಿನಿಮಾ ಮಾಡುತ್ತಿತ್ತು. ಆದರೆ ಈ ವೇಳೆ ಹಾಲಿವುಡ್ ರೇಂಜ್‌ಗೆ ಸಿನಿಮಾ ತೆಗೆದ ಖ್ಯಾತಿ ಸ್ಯಾಂಡಲ್‌ವುಡ್‌ಗಿದೆ. ಹಾಲಿವುಡ್‌ನಲ್ಲಿ ಜೇಮ್ಸ್ ಬಾಂಡ್ ಸಿನಿಮಾ ಅಬ್ಬರ ಆರಂಭಗೊಂಡಿತ್ತು. ಈ ವೇಳೆ ದೊರೆ ಭಗವಾನ್ ಹಾಗೂ ಡಾ.ರಾಜ್ ಕುಮಾರ್ ಅಚ್ಚರಿ ಮೂಡಿಸಿದ್ದರು. ಜೇಮ್ಸ್ ಬಾಂಡ್ ರೀಯ ಥ್ರಿಲ್ಲರ್ ಆ್ಯಕ್ಷನ್ ಸಿನಿಮಾ ಆಪರೇಶನ್ ಡೈಮಂಡ್ ರಾಕೆಟ್ ಬಿಡುಗಡೆಯಾಗಿ ಇತಿಹಾಸ ನಿರ್ಮಿಸಿತ್ತು. ಈ ಸಿನಿಮಾದಲ್ಲಿ ಡಾ.ರಾಜ್ ಹಾಡಿದ ಇಂಗ್ಲಿಷ್ ಹಾಡು ಈಗಲೂ ಫೇವರಿಟ್.
1978ರಲ್ಲಿ ಜೇಮ್ಸ್ ಬಾಂಡ್ ರೀತಿಯಲ್ಲಿ ಕನ್ನಡದಲ್ಲಿ ತೆರೆ ಕಂಡ ಆಪರೇಶನ್ ಡೈಮಂಡ್ ರಾಕೆಟ್ ಸಿನಿಮಾ ಹಲವು ಇತಿಹಾಸ ಬರೆದಿದೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮಾಡಿದರೆ ಜನ ಒಪ್ಪಿಕೊಳ್ಳುವುದು ಕಷ್ಟವಿತ್ತು. ಆದರೆ ಈ ಧೈರ್ಯವನ್ನು, ಸಾಹಸವನ್ನು ಕನ್ನಡ ಸಿನಿಮಾ ಮಾಡಿತ್ತು. ದೊರೆ ಭಗವಾನ್ ನಿರ್ದೇಶನ, ಜಿಕೆ ವೆಂಕಚೇಶನ್ ಸಂಗೀತ ನಿರ್ದೇಶನ ನೀಡಿದ ಈ ಆಪರೇಶನ್ ಡೈಮಂಡ್ ರಾಕೆಟ್ ಭಾರತೀಯ ಸಿನಿ ರಂಗವನ್ನೇ ಬೆಚ್ಚಿ ಬೀಳಿಸಿತ್ತು.
ಹಾಲಿವುಡ್ ಲೆವೆಲ್‌ನಲ್ಲಿ ಸಿನಿಮಾ ಪ್ಲಾನ್ ಮಾಡಿದ ದೊರೆ ಭಗವಾನ್‌ಗೆ ಮ್ಯೂಸಿಕ್ ಡೈರೆಕ್ಟ್ ಜಿಕೆ ವೆಂಕಟೇಶ್ ಮಹತ್ವದ ಸೂಚನೆ ನೀಡಿದ್ದರು. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮಾಡುವಾಗ ಇಂಗ್ಲಿಷ್ ಹಾಡೊಂದು ಬೇಕು ಎಂದಿದ್ದರು. ಇದಕ್ಕೆ ಒಪ್ಪಿದ ದೊರೆ ಭಗವಾನ್ ಈಗಲೂ ಸೂಪರ್ ಹಿಟ್ ಹಾಡಾಗಿರುವ ಇಫ್ ಯು ಕಮ್ ಟುಡೆ ಹಾಡು ನೀಡಿದ್ದರು. ಡಾ.ರಾಜ್ ಕುಮಾರ್ ಈ ಹಾಡು ಹಾಡಿದ್ದಾರೆ. ನಾದಮಯ, ಯಾರೇ ಕೂಗಾಡಲಿ ಸೇರಿದಂತೆ ಡಾ. ರಾಜ್ ಹಾಡಿದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಧ್ವನಿಯಲ್ಲಿ ದಿಢೀರ್ ಇಂಗ್ಲಿಷ್ ಹಾಡು ಕನ್ನಡ ಸಿನಿ ಪ್ರೇಕ್ಷಕರಿಗೂ ಹೊಸದಾಗಿತ್ತು. ಇತ್ತ ಬಾಲಿವುಡ್‌ನಲ್ಲೂ ಇಡೀ ಹಾಡು ಇಂಗ್ಲಿಷ್‌ನಲ್ಲಿ ಮಾಡುವ ಧೈರ್ಯ ಮಾಡಿರಲಿಲ್ಲ. ಆ ವೇಳೆ ಕನ್ನಡ ಸಿನಿಮಾ ಈ ಸಾಧನೆ ಮಾಡಿತ್ತು.
ಈಗಲೂ ಪಾರ್ಟಿಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಡಾ.ರಾಜ್ ಇಂಗ್ಲಿಷ್ ಹಾಡು ಸೂಪರ್ ಹಿಟ್. ಹಲವು ಬಾರಿ ಈ ಹಾಡು ರೀಮಿಕ್ಸ್ ಮಾಡಲಾಗಿದೆ. 1978ರಲ್ಲೇ ಕನ್ನಡ ಸಿನಿಮಾದಲ್ಲಿ ಇಂಗ್ಲಿಷ್ ಹಾಡು ಹೊಸತನವಾಗಿತ್ತು. ಕನ್ನಡ ಸಿನಿಮಾದ ಈ ಪ್ರಯತ್ನಕ್ಕೆ ಭಾರತೀಯ ಸಿನಿ ರಂಗದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು.
ಇದೇ ಹಾಡನ್ನು ಹಲವು ದಿಗ್ಗಜರು ಹಾಡಿದ್ದಾರೆ. ಐಪಿಎಲ್ ಟೂರ್ನಿ ವೇಳೆ ಆರ್‌ಸಿಬಿ ಪ್ಲೇಯರ್ ಎಬಿ ಡಿವಿಲಿಯರ್ಸ್ ಕೂಡ ಹಾಡಿದ್ದಾರೆ. ಹಾಡಿನಲ್ಲಿ ಪದಗಳು, ವಾಕ್ಯಗಳು ಇಂಗ್ಲಿಷ್‌ನಲ್ಲಿ ಸಾಮಾನ್ಯ. ಆದರೆ ಭಾಷೆ ಕಟ್ಟುಪಾಡು, ಪರಿಮಿತಿಯಲ್ಲೇ ಕನ್ನಡ ಸಿನಿಮಾ ಗ್ಲೋಬಲ್ ಆಗಿ ಯೋಚನೆ ಮಾಡಿತ್ತು ಅನ್ನೋದಕ್ಕೆ ಈ ಹಾಡು ಹಾಗೂ ಸಿನಿಮಾ ಸಾಕ್ಷಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.