ವಿಹಾನ್, ಅಂಕಿತಾ ಅಮರ್ ಅದ್ಭುತ ಕಲಾವಿದರು, ಅವರಿಬ್ಬರಿಗೂ ಪ್ರಶಸ್ತಿ ಸಿಗುವುದು ಖಂಡಿತಾ: ರಕ್ಷಿತ್ ಶೆಟ್ಟಿ

Published : Aug 24, 2024, 08:55 PM IST
ವಿಹಾನ್, ಅಂಕಿತಾ ಅಮರ್ ಅದ್ಭುತ ಕಲಾವಿದರು, ಅವರಿಬ್ಬರಿಗೂ ಪ್ರಶಸ್ತಿ ಸಿಗುವುದು ಖಂಡಿತಾ: ರಕ್ಷಿತ್ ಶೆಟ್ಟಿ

ಸಾರಾಂಶ

‘ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವನ್ನು ನಾನು ಮೂರು ಬಾರಿ ನೋಡಿದ್ದೇನೆ. ಅಂಕಿತಾ ಅಮರ್ ಮತ್ತು ವಿಹಾನ್‌ ಅದ್ಭುತವಾಗಿ ನಟಿಸಿದ್ದಾರೆ. ಅವರಿಬ್ಬರಿಗೂ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಸಿಗುವುದು ಖಂಡಿತಾ. ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದರು ರಕ್ಷಿತ್‌ ಶೆಟ್ಟಿ.   

‘ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾವನ್ನು ನಾನು ಮೂರು ಬಾರಿ ನೋಡಿದ್ದೇನೆ. ಅಂಕಿತಾ ಅಮರ್ ಮತ್ತು ವಿಹಾನ್‌ ಅದ್ಭುತವಾಗಿ ನಟಿಸಿದ್ದಾರೆ. ಅವರಿಬ್ಬರಿಗೂ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಸಿಗುವುದು ಖಂಡಿತಾ. ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದರು ರಕ್ಷಿತ್‌ ಶೆಟ್ಟಿ. ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಟ್ರೇಲರ್‌ ಬಿಡುಗಡೆಯಲ್ಲಿ ಅವರು ತುಂಬಾ ಆಸ್ಥೆಯಿಂದ ಮಾತನಾಡಿದರು. ‘ಚಂದ್ರಜಿತ್‌ ಬೆಳ್ಳಿಯಪ್ಪ ನನಗಿಷ್ಟದ ಬರಹಗಾರ. ಅವರ ಬರವಣಿಗೆ ನನಗಿಷ್ಟ. ಅವರ ಮುಗ್ಧತೆ ಮತ್ತು ಬರವಣಿಗೆಯಲ್ಲಿರುವ ಮೋಹಕತೆಯಿಂದ ಒಂದು ಸೊಗಸಾದ ಸಿನಿಮಾ ಮಾಡಬಲ್ಲರು ಎಂಬ ನಂಬಿಕೆ ನನಗಿತ್ತು. 

ಈ ಸಿನಿಮಾ ಅದೇ ಥರ ಮೂಡಿಬಂದಿದೆ’ ಎಂದು ಹೇಳಿದರು. ನಿರ್ದೇಶಕ ಚಂದ್ರಜಿತ್ ತಂಡದ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು. ಪರಂವಃ ಸಂಸ್ಥೆಯ ಸಿಇಓ ಶ್ರೀನಿಶ್ ಶೆಟ್ಟಿ, ಸಂಗೀತ ನಿರ್ದೇಶಕ ಗಗನ್ ಬಡೇರಿಯಾ, ಛಾಯಾಗ್ರಾಹಕ ಶ್ರೀವತ್ಸನ್ ಸೆಲ್ವರಾಜನ್, ಸಂಕಲನಕಾರ ರಕ್ಷಿತ್ ಕಾಪು ಹರ್ಷಚಿತ್ತರಾಗಿದ್ದರು. ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಗಿರಿಜಾ ಶೆಟ್ಟರ್, ಮಯೂರಿ ನಟರಾಜ್, ಅನಿರುದ್ಧ್ ಭಟ್, ದಾಮಿನಿ ಧನರಾಜ್ ನಟಿಸಿದ್ದಾರೆ. ಈ ಸಿನಿಮಾ ಸೊಗಸಾದ ಪ್ರೇಮಕತೆಯನ್ನು ಹೊಂದಿದ್ದು, ತುಂಬಾ ರಿಚ್ ಆಗಿ ಮೂಡಿ ಬಂದಿದೆ ಅನ್ನುವುದಕ್ಕೆ ಟ್ರೇಲರ್‌ ಪುರಾವೆಯಾಗಿದೆ. ಸೆಪ್ಟೆಂಬರ್ 5ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.

ಸೆ.5ಕ್ಕೆ ಇಬ್ಬನಿ ತಬ್ಬಿದ ಇಳೆಯಲಿ ರಿಲೀಸ್‌: ರಕ್ಷಿತ್‌ ಶೆಟ್ಟಿ ನಿರ್ಮಾಣದ, ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಸೆ.5ಕ್ಕೆ ರಿಲೀಸ್‌ ಆಗಲಿದೆ. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಲು ತಂಡ ನಿರ್ಧಾರ ಮಾಡಿದೆ. ಕಾವ್ಯಾತ್ಮಕ ಅಂಶಗಳಿಂದ ಗಮನ ಸೆಳೆಯುತ್ತಿರುವ ಈ ತ್ರಿಕೋನ ಲವ್‌ಸ್ಟೋರಿಯಲ್ಲಿ ವಿಹಾನ್‌, ಅಂಕಿತಾ ಅಮರ್‌ ನಟಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆ ಆಗಿದ್ದು, ಎಲ್ಲಾ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಹಾಡುಗಳೂ ವಿಭಿನ್ನ ಶೈಲಿಯಲ್ಲಿರುವುದು ವಿಶೇಷ. ಒಂದು ಸುಂದರ ಪ್ಯಾಕೇಜ್ ಆಗಿ ಸಿನಿಮಾ ಮೂಡಿ ಬರಬೇಕು ಎಂದು ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಆಸ್ಥೆ ವಹಿಸಿದ್ದಾರೆ. ಸಿನಿಮಾ ಕುರಿತು ರಕ್ಷಿತ್ ಶೆಟ್ಟಿ, ‘ಪ್ರೀತಿಯ ತಂಗಾಳಿ ಸೆಪ್ಟೆಂಬರ್ 5ರಂದು ಬೀಸಲಿದೆ, ಈ ಸುಂದರ ಪ್ರೇಮ ದೃಶ್ಯ ಕಾವ್ಯವನ್ನು ಚಿತ್ರಮಂದಿರದಲ್ಲಿಯೇ ನೋಡಿ ಸಂಭ್ರಮಿಸೋಣ’ ಎಂದು ಹೇಳಿದ್ದಾರೆ.

ಮಗ ನಾಗಚೈತನ್ಯ ಮೇಲೆ ಕೋಪಗೊಂಡ ಲಕ್ಷ್ಮೀ ದಗ್ಗುಬಾಟಿ: ಸಮಂತಾ ಜೊತೆಗಿನ ಡಿವೋರ್ಸ್ ಕಾರಣಾನಾ?

ರೆಟ್ರೋ ರೂಪದಲ್ಲಿ ವಿಹಾನ್, ಅಂಕಿತಾ ಅಮರ್: ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ, ರಕ್ಷಿತ್ ಶೆಟ್ಟಿ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ವಿಶಿಷ್ಟ ಹಾಡು ಹೇಳು ಗೆಳತಿ ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ನಾಯಕ ನಟ ವಿಹಾನ್‌ ಗೌಡ, ಅಂಕಿತಾ ಅಮರ್‌, ಮಯೂರಿ ನಟರಾಜ್‌ ರೆಟ್ರೋ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ರೀತಿಯಲ್ಲಿ ಚಿತ್ರೀಕರಿಸಿರುವ ಈ ಹಾಡು ವಿಭಿನ್ನ ಶೈಲಿಯಲ್ಲಿ ಮೂಡಿ ಬಂದಿದೆ. ಈ ಹಾಡು ಒಂದು ಶಾರ್ಟ್‌ ಫಿಲ್ಮ್‌ನಂತಿದೆ ಎಂಬ ಮೆಚ್ಚುಗೆಯನ್ನು ಗಳಿಸಿಕೊಂಡಿದೆ. ಹಾಡಿಗೆ ಗಗನ್‌ ಬಡೇರಿಯಾ ಸಂಗೀತ ನೀಡಿದ್ದು, ನಾಗಾರ್ಜುನ ಶರ್ಮಾ ಗೀತ ರಚನೆ ಮಾಡಿದ್ದಾರೆ. ವಿಶೇಷ ಎಂದರೆ ಸಂಗೀತ ನಿರ್ದೇಶಕ ಚರಣ್‌ರಾಜ್‌ ಈ ಹಾಡು ಹಾಡಿದ್ದಾರೆ. ಪರಂವಃ ಮ್ಯೂಸಿಕ್ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಹಾಡು ನೋಡಬಹುದಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?
ಕುಟುಂಬವೇ ಹೆಮ್ಮೆಪಡುವಂತೆ ಮಾಡಿದ Kiccha Sudeep ಮಗಳು ಸಾನ್ವಿ! ಇದಪ್ಪಾ..ಸಾಧನೆ ಅಂದ್ರೆ..!