ಇದೇನು ಅನುಶ್ರೀ.. ಪ್ರೇಮ ಪುರಾಣ ಹೇಳೋಕೆ ಇಷ್ಟೊಂದು ಬಿಲ್ಡಪ್ಪು..? ನಿಮ್ದೆನಾ ಅಂತಿದಾರೆ!

By Shriram Bhat  |  First Published Aug 24, 2024, 7:44 PM IST

ನಿಮಗೆ ಕತೂಹಲವಿದ್ದರೆ ನೀವು ಗೆಸ್ ಮಾಡಬಹುದು, ಅಥವಾ ಸಂದರ್ಶನ ಬರುವವೆರೆಗೂ ಕಾದು ನೋಡಿ ತಿಳಿದುಕೊಳ್ಳಬಹುದು. ಸಾಕಷ್ಟು ಜನ ಪ್ರೇಮಿಗಳಿದ್ದಾರೆ. ಸಿನಿಮಾ ನಟನಟಿಯರು ಮಾತ್ರವಲ್ಲ, ಕ್ರೀಡಾಪಟುಗಳು ಕೂಡ ಇದ್ದಾರೆ..


ಆಂಕರ್ ಅನುಶ್ರೀ (Anchor Anushree) ಅವರು ನಡೆಸುತ್ತಿರುವ ಯೂಟ್ಯೂಬ್ ಚಾನೆಲ್, ಅದರಲ್ಲಿ ಬರುತ್ತಿರುವ ಸಂದರ್ಶನಗಳು ಎಲ್ಲವೂ ಬಹಳಷ್ಟು ಜನರಿಗೆ ಗೊತ್ತು. ಇದೀಗ ಅನುಶ್ರೀ ಅವರು ಹೊಚ್ಚಹೊಸ ಪ್ರೊಮೋ ಒಂದನ್ನು ಬಿಟ್ಟು ಭಾರೀ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದಾರೆ. ಅದೇನೋ ಲವ್, ಸೆಲೆಬ್ರೇಷನ್ ಅಂತೆಲ್ಲಾ ಮಾತನಾಡಿ ಹಲವರ ತಲೆಗೆ ಹುಳ ಬಿಟ್ಟಿದ್ದಾರೆ. ಹಾಗಿದ್ದರೆ, ಅನುಶ್ರೀ ಏನ್ ಮಾಡಲಿದ್ದಾರೆ? ಯಾರನ್ನು ಕರೆದು ಲವ್ ಲೆಸನ್ ಮಾಡಿಸಲಿದ್ದಾರೆ?

ನಿರೂಪಕಿ ಅನುಶ್ರೀ ಹರಿಯಬಿಟ್ಟಿರುವ ಪ್ರೊಮೋದಲ್ಲಿ ಏನಿದೆ? 'ನಿಮ್ಗೆ ನನ್ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಅದೆಲ್ಲದಕ್ಕೂ ಉತ್ತರ ಕೊಡೋದಕ್ಕೆ ನಾನು ಬರ್ತಿದೀನಿ.. ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ.. ಸರ್‌ಪ್ರೈಸ್, ಕಮಿಂಗ್ ಸೂನ್, ಬನ್ನಿ.. ಪ್ರೀತಿನ ಸೆಲೆಬ್ರೇಟ್ ಮಾಡೋಣ.. ಲೆಟ್ಸ್‌ ಸೆಲೆಬ್ರೇಟ್ ಲವ್...'ಎಂದಿದ್ದಾರೆ ಅನುಶ್ರೀ. ಈ ಪ್ರೋಮೋ ನೋಡಿದ ಹಲವರು, ಸ್ವತಃ ಅನುಶ್ರೀ ಅವರೇ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಲಿದ್ದಾರೆ, ಗುಟ್ಟು ರಟ್ಟಾಗಲಿದೆ ಎಂದಿಕೊಂಡಿಬಹುದು. 

Tap to resize

Latest Videos

undefined

ಕೈ ತುಂಬ ಇದ್ದೋನೆ ಯೋಗಿ, ಕಡೆವರೆಗು ಬೇಡೋನೆ ಜೋಗಿ ಸದ್ಯ ಟ್ರೆಂಡಿಂಗ್ ಆಗ್ತಿರೋದು ಯಾಕೆ?

ಆದರೆ, ವಿಷಯ ಅದಲ್ಲ! ಅನುಶ್ರೀ ಇಂಟರ್‌ವ್ಯೂ ಮಾಡುತ್ತಾರೆ. ಯಾರೋ ಸೆಲೆಬ್ರಟಿಗಳು ಭಾಗವಹಿಸುತ್ತಾರೆ. ಅವರು ತಮ್ಮ ಪ್ರೇಮ ಕಹಾನಿಯನ್ನು ಹೇಳಲಿದ್ದಾರೆ. ಅಥವಾ, ಅನುಶ್ರೀ ಅವರು ಯಾರೋ ಪ್ರೇಮಪಕ್ಷಿಗಳ ಪ್ರೇಮ ಪುರಾಣವನ್ನು ಹೊರಜಗತ್ತಿಗೆ ಅನಾವರಣ ಮಾಡಿಸಲಿದ್ದಾರೆ. ಅವರು ಯಾರಿರಬಹುದು? ಅನುಶ್ರೀ ಚಾನೆಲ್‌ಗೆ ಬಂದು ಕುಳಿತು ತಮ್ಮ ಪ್ರೇಮ ಪ್ರಸಂಗವನ್ನು ಕ್ಯಾಮೆರಾ ಎದುರು ಬಿಚ್ಚುಟ್ಟು ಅಲ್ಲಿ ಪ್ರೇಮಲೋಕ ಸೃಷ್ಟಿಸಲಿರುವ ಲವ್ ಬರ್ಡ್ಸ್ ಯಾರು?

ಈ ಬಗ್ಗೆ ನಿಮಗೆ ಕತೂಹಲವಿದ್ದರೆ ನೀವು ಗೆಸ್ ಮಾಡಬಹುದು, ಅಥವಾ ಸಂದರ್ಶನ ಬರುವವೆರೆಗೂ ಕಾದು ನೋಡಿ ತಿಳಿದುಕೊಳ್ಳಬಹುದು. ಸಾಕಷ್ಟು ಜನ ಪ್ರೇಮಿಗಳಿದ್ದಾರೆ. ಸಿನಿಮಾ ನಟನಟಿಯರು ಮಾತ್ರವಲ್ಲ, ಕ್ರೀಡಾಪಟುಗಳು ಕೂಡ ಇದ್ದಾರೆ, ಜನಸಾಮಾನ್ಯರು ಕೂಡ ಹಲವರಿದ್ದಾರೆ. ಆದರೆ, ಹೆಚ್ಚಾಗಿ ಸಂದರ್ಶನ ಮಾಡುವುದು ಸಿನಿಮಾ ಸೆಲೆಬ್ರಟಿಗಳನ್ನೇ ಆಗಿರುವ ಕಾರಣಕ್ಕೆ ಈ ಜೋಡಿ ಖಂಡಿತ ಸಿನಿಮಾ ತಾರಾ ಜೋಡಿಯೇ ಆಗಿರಬಹುದು ಎನ್ನಲಾಗ್ತಿದೆ. 

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ; ಯಾವುದು ಈ ಸಿನಿಮಾ?

ಸರಿ, ಕಾಯೋಣ ಬಿಡಿ.. ಪ್ರೋಮೋ ಬಿಟ್ಟಿದಾರೆ ಅಂದರೆ, ಸಂದರ್ಶನ ಬಂದೇ ಬರುತ್ತೆ.. ಅಷ್ಟಕ್ಕೂ ಅನುಶ್ರೀ ಬಿಡ್ತಾರಾ? ಆ ಪ್ರೇಮಿಗಳನ್ನು ಕಾಡಿಬೇಡಿಯಾದರೂ ನಮಗೆ ಪ್ರೇಮಕಥೆಯನ್ನು ಉಣಬಡಿಸುತ್ತಾರೆ. ಅನುಶ್ರೀ ಬಗ್ಗೆ ಗೊತ್ತಿಲ್ಲದವರು ಕಡಿಮೆ. ಅಚ್ಚ, ಸ್ವಚ್ಛ ಕನ್ನಡದಲ್ಲಿ ಅರಳು ಹುರಿದಂತೆ ಪಟಪಟ ಮಾತನಾಡುವ ಅನುಶ್ರೀ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಹೀಗಾಗಿ ಸಹಜ ಎಂಬಂತೆ ಅನುಶ್ರೀ ಮಾಡಲಿರುವ ಲವರ್ಸ್‌ ಇಂಟರ್‌ವ್ಯೂ ಸಾಕಷ್ಟು ಕುತೂಹಲ ಸೃಷ್ಟಿಸಿದೆ. 

click me!