ಆ ಒಬ್ಬ ವ್ಯಕ್ತಿನ ಭೇಟಿ ಮಾಡಿಲ್ಲ ಅಂತ ತುಂಬಾ ಕೊರಗಿದೆ: ಮೇಘನಾ ರಾಜ್

Published : Mar 05, 2025, 03:26 PM ISTUpdated : Mar 05, 2025, 03:36 PM IST
ಆ ಒಬ್ಬ ವ್ಯಕ್ತಿನ ಭೇಟಿ ಮಾಡಿಲ್ಲ ಅಂತ ತುಂಬಾ ಕೊರಗಿದೆ: ಮೇಘನಾ ರಾಜ್

ಸಾರಾಂಶ

ಮೇಘನಾ ರಾಜ್ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಅವರ ಸಿನಿಮಾ ಆಯ್ಕೆ, ಯೂಟ್ಯೂಬ್ ಚಾನೆಲ್, ಮತ್ತು ಮಗ ರಾಯನ್ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಶಂಕರ್ ನಾಗ್ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಹೊಸ ಮನೆಗೆ ಪ್ರವೇಶಿಸಿದ್ದಾರೆ.

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ದಿನದಿಂದ ದಿನಕ್ಕೆ ಕನ್ನಡಿಗರಿಗೆ ಸಿಕ್ಕಾಪಟ್ಟೆ ಹತ್ತಿರವಾಗುತ್ತಿದ್ದಾರೆ. ಕಾರಣ ಹೇಳುವುದಾದರೆ ಆಯ್ಕೆ ಮಾಡಿಕೊಳ್ಳುತ್ತಿರುವ ಕನ್ನಡ ಸಿನಿಮಾ ಕಥೆಗಳು, ಮನೆ ಮಗಳಂತೆ ಪಟಪಟ ಮಾತನಾಡುವ ಯೂಟ್ಯೂಬ್ ಚಾನೆಲ್ ಹಾಗೂ ಪುತ್ರ ರಾಯನ್. ಮೇಘನಾ ರಾಜ್ ಇದ್ದಾರೆ ಅಂದ್ರೆ ಆ ರಿಯಾಲಿಟಿ ಶೋ ಸೂಪರ್ ಹಿಟ್. ರಾಯನ್ ಇದ್ದಾನೆ ಅಂದ್ರೆ ಆ ಯೂಟ್ಯೂಬ್ ವಿಡಿಯೋ ಸಖತ್ ವೈರಲ್. ಚಿರಂಜೀವಿ ನಮ್ಮೊಟ್ಟಿಗೆ ಇಲ್ಲವಾದರೂ ರಾಯನ್ ಮೂಲಕ ಅವನ ನಗು ಮೂಲಕ ಕಾಣುತ್ತಿದ್ದಾರೆ ಅಭಿಮಾನಿಗಳು. ದಿಟ್ಟ ಮಹಿಳೆಯಂತೆ ನಿಂತಿರುವ ಮೇಘನಾ ರಾಜ್‌ ಒಬ್ಬ ವ್ಯಕ್ತಿಯನ್ನು ತಮ್ಮ ಜೀವನದಲ್ಲಿ ಭೇಟಿ ಮಾಡಲು ಆಗಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ.

'ಜೀವದಲ್ಲಿ ಯಾವುದರ ಬಗ್ಗೆನೂ ನನಗೆ ರಿಗ್ರೆಟ್‌ ಇಲ್ಲ ಆದರೆ ಬೇಸರ ಆಗುವುದು ಒಂದೇ ವಿಚಾರಕ್ಕೆ ಅದು ಶಂಕರ್‌ ನಾಗ್‌ ಅಂಕಲ್‌ನ ಲೈಫ್‌ನಲ್ಲಿ ಮೀಟ್ ಮಾಡಲು ಆಗಿಲ್ಲ ಅಂತ. ನಾನು ಹುಟ್ಟಿದ ವರ್ಷವೇ ಶಂಕರ್ ನಾಗ್ ಅಂಕಲ್ ಅಗಲಿದ್ದು. ಅಮ್ಮ (ಪ್ರೆಮಿಳಾ ಜೋಶಾಯಿ) ಪ್ರೆಗ್ನೆಂಟ್ ಅಂತ ಗೊತ್ತಾಗಿದ್ದು ಮಹೇಶ್ವರ ಅನ್ನೋ ಸಿನಿಮಾ ಸೆಟ್‌ನಲ್ಲಿ. ಶಂಕರ್ ನಾಗ್ ಅಂಕಲ್ ಕೂಡ ಆ ಸಿನಿಮಾದಲ್ಲಿ ನಟಿಸಿದ್ದರು. ಶೂಟಿಂಗ್ ಸಮಯದಲ್ಲಿ ಅಮ್ಮನಿಗೆ ಸ್ವಲ್ಪ ಹುಷಾರು ಇರಲಿಲ್ಲ ಆಗ ಡಾಕ್ಟರ್ ಬಂದು ಚೆಕ್ ಮಾಡುತ್ತಿದ್ದರಂತೆ ಆಗ ಹೊರಡೆ ಬಾಗಿಲು ಬಳಿ ಅಪ್ಪ ಮತ್ತು ಶಂಕರ್ ನಾಗ್ ಅಂಕಲ್ ಕೇಳಿಸಿಕೊಳ್ಳುತ್ತಿದ್ದರಂತೆ ಆಗ ಡಾಕ್ಟರ್ ಹೇಳಿದ್ದು ಪ್ರಮಿಳಾ ಅವರೆ ನೀವು ಪ್ರೆಗ್ನೆಂಟ್ ಎಂದು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ.

ಮುಂಜಾನೆ 4 ಗಂಟೆಗೆ ಗಾಯತ್ರಿ ಮಂತ್ರ ಓದಿದ ನಂತರ ಜಿಮ್‌ಗೆ ಹೋಗುವುದು; ಅನುಪಮಾ ಗೌಡ ದಿನಚರಿ ನಿಜಕ್ಕೂ ಶಾಕಿಂಗ್!

ಸದ್ಯ ಮೇಘನಾ ರಾಜ್ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾ ಪ್ರಾಜೆಕ್ಟ್‌ಗಳು ಇದೆ.  ಇತ್ತೀಚಿಗೆ ಬೆಂಗಳೂರಿನಲ್ಲಿ ಐಷಾರಾಮಿ ಬಂಗಲೆ ಗೃಹಪ್ರವೇಶ ಮಾಡಿದ್ದರು. ಮೊದಲ ಸಿನಿಮಾ ಲೂಸ್ ಮಾದಾ ಯೋಗಿ ಜೊತೆ ಪುಂಡ ಆದರೆ ಬಿಗ್ ಹಿಟ್ ಕೊಟ್ಟಿದ್ದು ಯಶ್‌ ಜೊತೆಗಿನ ರಾಜಾಹುಲಿ ಸಿನಿಮಾ. ಇದಾದ ಮೇಲೆ ಬಹುಪರಾಕ್, ಆಟಗಾರ, ವಂಶೋಧರಕ, ಅಲ್ಲಮ,ನೂರೊಂದು ನೆನಪು, ಇರುವುವುದೆಲ್ಲಾವ ಬಿಟ್ಟು, ಒಂಟಿ, ಕುರುಕ್ಷೇತ್ರ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ತತ್ಸಮ ತದ್ಭವ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮೇಘನಾ ನಟಿಸಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ಸ್‌ ರಿಯಾಲಿಟಿ ಶೋ ಜಡ್ಜ್‌ ಆಗಿ ಒಂದು ಸೀಸನ್ ಕಾಣಿಸಿಕೊಂಡಿದ್ದರು. 

ಕಷ್ಟಪಟ್ಟ ತಗೊಂಡ ಕಾರು ಮಾರಿದೆ, ಈಗ EMI ಕಟ್ಟಲು ಮನೆ ಖರ್ಚು ನೋಡಿಕೊಳ್ಳುವಷ್ಟು ಇದೆ: ಧರ್ಮ ಕೀರ್ತಿರಾಜ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ