ತಂದೆ ಹೇಳಿಕೊಟ್ಟಿರುವ ಸಿದ್ಧಾಂತವನ್ನು ಫಾಲೋ ಮಾಡುತ್ತಿದ್ದಾರೆ ಅಜಯ್ ರಾವ್. ಹಣ ಮಾಡುವುದರಲ್ಲಿ ವೀಕ್ ಅಂತ ಹೇಳಿಕೊಂಡಿದ್ದು ಯಾಕೆ?
ಕನ್ನಡ ಚಿತ್ರರಂಗದ ಲವರ್ ಬಾಯ್, ಹಿಟ್ ಲವ್ ಸ್ಟೋರಿ ಕೊಟ್ಟ ನಟ ಅಜಯ್ ರಾವ್. ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ನಟ ಯಾಕೆ ಕಾಣಿಸಿಕೊಳ್ಳುವುದು ಕಡಿಮೆ ಆಗಿಬಿಟ್ಟರು? ಸಿನಿಮಾ ಬಿಟ್ಟು ಬೇರೆ ಕೆಲಸ ಮಾಡುತ್ತಿದ್ದಾರಾ? ಸಂಪಾದನೆ ಹೆಚ್ಚಾಯ್ತಾ ಎಂದು ಜನರಿಗೆ ಸಾಕಷ್ಟು ಪ್ರಶ್ನೆಗಳು ಕಾಡುತ್ತದೆ. ಆದರೆ ಹಣ ಮಾಡುವುದರಲ್ಲಿ ಅಜಯ್ ರಾವ್ ಲಾಜಿಕ್ ಸಿಕ್ಕಾಪಟ್ಟೆ ಸಿಂಪಲ್ ಕಣ್ರೀ ನೋಡಿ.......
'ಈಗ ಹಣ ಮಾಡುವುದು ಹೇಗೆ ಅಂತ ಕಲಿಯುತ್ತಿದ್ದೀನಿ ಆದರೆ ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಮಾಡಿದ್ದೀನಿ.ಹಣವನ್ನು ಹೇಗೆ ಡಬಲ್ ಮಾಡುವುದು ತ್ರಿಪಲ್ ಮಾಡುವುದು ಅದನ್ನು ಹೇಗೆ ಬೆಳೆಸಬೇಕು ಅಂತ ಇದುವರೆಗೂ ಯೋಚನೆ ಮಾಡಿಲ್ಲ. ಹಣಕಾಸಿನ ವಿಚಾರದಲ್ಲಿ ನಾನು ತುಂಬಾ ವೀಕ್. ನನ್ನ ತಂದೆ ಹೇಳಿಕೊಟ್ಟಿರುವ ಸಿದ್ಧಾಂತವನ್ನು ಫಾಲೋ ಮಾಡಿಕೊಂಡು ಬಂದಿದ್ದೀನಿ ಹೀಗಾಗಿ ಬದಲು ಯಾರೊಟ್ಟಿಗೂ ಕೈ ಚಾಚುವಂತ ಪರಿಸ್ಥಿತಿ ಬಂದಿಲ್ಲ. ಮುಂದೆ ಯಾರನ್ನೂ ಹೇಳುವುದಿಲ್ಲ ಆ ರೀತಿಯಲ್ಲಿ ಬದುಕುತ್ತೀನಿ ಅನ್ನೋ ಧೈರ್ಯ ನನಗೆ ಬಂದಿದೆ. ಹಣ ಮಾಡ್ಬೇಕು ಅನ್ನೋ ಯೋಚನೆ ಇಲ್ಲ ಒಳ್ಳೆ ಸಿನಿಮಾ ಮಾಡ್ಬೇಕು ಅಂತ ಅಷ್ಟೇ ತಲೆಯಲ್ಲಿ ಇರುವುದು. ಕೊನೆ ಉಸಿರು ಇರುವವರೆಗೂ ಕೆಲಸ ಮಾಡಬೇಕು ಅಷ್ಟೇ. ಶೀಘ್ರದಲ್ಲಿ ನಿರ್ದೇಶಕನಾಗಿ ಅಜಯ್ ರಾವ್‌ನ ನೋಡಬಹುದು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಜಯ್ ರಾವ್ ಮಾತನಾಡಿದ್ದಾರೆ.
ನಾನು ಹಾಕೋ ಬಟ್ಟೆಗೂ ಕಾಮೆಂಟ್ ಮಾಡ್ತಾರೆ, ದುಡ್ಡಿಗೆ ಆ ಕೆಲಸ ಮಾಡಲ್ಲ: ನಮ್ರತಾ ಗೌಡ
ಎಕ್ಸ್‌ಕ್ಯೂಸ್ ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಅಜಯ್ ರಾವ್. ಇದಾದ ಮೇಲೆ ಮಾಡಿದ ತಾಜ್ ಮಹಲ್,ಕೃಷ್ಣನ ಲವ್ ಸ್ಟೋರಿ, ಕೃಷ್ಣನ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ ಎಲ್ಲವೂ ಸೂಪರ್ ಹಿಟ್. ಹೀಗಾಗಿ ಅವರಿಗೆ ಕೃಷ್ಣ ಅಜಯ್ ರಾವ್ ಅಂತಲೇ ಅಭಿಮಾನಿಗಳು ಕರೆಯಲು ಶುರು ಮಾಡಿಬಿಟ್ಟರು. 2014ರಲ್ಲಿ ಗರ್ಲ್‌ಫ್ರೆಂಡ್ ಸ್ವಪ್ನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಚರಿಷ್ಮಾ ಎಂಬ ಮುದ್ದಾದ ಮಗಳು ಇದ್ದಾಳೆ.
ವಿದೇಶದಲ್ಲಿ ಪುನೀತ್ ರಾಜ್‌ಕುಮಾರ್ ಪಾಸ್‌ಪೋರ್ಟ್ ಪಡೆದ ಆಫೀಸರ್; ಪಕ್ಕದಲ್ಲಿದ್ದ ಹೆಸರು ನೋಡಿ ಗಾಬರಿ ಆಗಿದ್ದು ಯಾಕೆ?