ನನಗೆ ಸರಿ ಅನಿಸಿದ್ದು ಮಾಡ್ತೀನಿ ಅಷ್ಟೇ; 'ಮಲ್ಲ' ಚಿತ್ರದಲ್ಲಿ ಬೋಲ್ಡ್‌ ಆಗಿದ್ದಕ್ಕೆವಿವಾದ, ಪ್ರಿಯಾಂಕಾ ಸ್ಪಷ್ಟನೆ

By Vaishnavi Chandrashekar  |  First Published Nov 26, 2024, 1:04 PM IST

ಮಲ್ಲ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಬೋಲ್ಡ್‌ ಲುಕ್‌ಗಳ ಬಗ್ಗೆ ವಾದ. ಮದುವೆ ಆದ ಮೇಲೆ ರಿಲೀಸ್ ಆಗಿದ್ದಕ್ಕೆ ಸಮಸ್ಯೆ?


ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ನಟನೆಯ 'ಮಲ್ಲ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. ಪ್ರಿಯಾಂಕಾ ಮತ್ತು ಉಪೇಂದ್ರ ಮದುವೆ ಆದ ಮೇಲೆ ರಿಲೀಸ್ ಆದ ಕಾರಣ ಪ್ರಿಯಾಂಕಾ ಬೋಲ್ಡ್‌ನೆಸ್‌ ವಿವಾದ ಸೃಷ್ಟಿ ಮಾಡಿತ್ತು. ಸೆನ್ಸೇಷನ್ ಕ್ರಿಯೇಟ್ ಮಾಡಿದ ಹಾಡುಗಳಲ್ಲಿ ಪ್ರಿಯಾಂಕಾ ಸಖತ್ ಹಾಟ್ ಆಗಿದ್ದಕ್ಕೆ ಉಪೇಂದ್ರ ವಿರೋಧ ವ್ಯಕ್ತ ಪಡಿಸಿದ್ದರು ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ ವಿವಾದಕ್ಕೆ ಫ್ಯಾಮಿಲಿ ಕಾರಣ ಅಲ್ಲ ಜನರು ಮಾತುಗಳು, ನನಗೆ ಸರಿ ಅನಿಸಿದ್ದು ನಾನು ಮಾಡುತ್ತೀನಿ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. 

'ಮಲ್ಲ ಸಿನಿಮಾ ಸಮಯದಲ್ಲಿ ತುಂಬಾ ಕಡೆ ವಿವಾದ ಆಗಿತ್ತು. ಕೆಲವು ಕಡೆ ಡ್ರೆಸ್‌ ಬಗ್ಗೆ ಬರೆದಿದ್ದರು ಆದರೆ ಅದೆಲ್ಲ ಮ್ಯಾಟರ್ ಆಗಲಿಲ್ಲ. ಏಕೆಂದರೆ ಸಮಯ ಎಲ್ಲವನ್ನು ಸಾಬೀತು ಮಾಡುತ್ತದೆ. ನನ್ನ ಜೀವನದಲ್ಲಿ ಏನನ್ನ ಆಯ್ಕೆ ಮಾಡುತ್ತೇನೋ ಅದಕ್ಕೆ ನಾನು ಸದಾ ಬದ್ಧವಾಗಿದ್ದೇನೆ. ಯಾರೋ ಫೋರ್ಸ್‌ ಮಾಡಿ ಹೀಗೆ ಮಾಡಿಸಿದ್ದಾರೆ ಅಂತ ಹೇಳಿದ್ದರು ಹಾಗಂತ ನಾನೇನು ಬಲಿಪಶು ಆಗಿರಲಿಲ್ಲ. ನನಗೆ ಏನು ತಪ್ಪು ಅನಿಸಿದೆಯೋ ಅದನ್ನು ನಾನು ಮಾಡಿಲ್ಲ. ಯಾವುದು ಸರಿ ಅನಿಸಿದೆಯೋ ಅದನ್ನು ಮಾಡಿದ್ದೇನೆ' ಎಂದು ಕನ್ನಡ ಖಾಸಗಿ ವೆಬ್‌ ಸಂದರ್ಶನದಲ್ಲಿ ಪ್ರಿಯಾಂಕಾ ಉಪೇಂದ್ರ ಮಾತನಾಡಿದ್ದಾರೆ.

Tap to resize

Latest Videos

ಮುಸ್ಲಿಂ ಧರ್ಮಗುರು ಕೈ ಹಿಡಿದ ಗೋಲ್ಡನ್ ಸ್ಟಾರ್ ಗಣೇಶ್ ನಟಿ ಸನಾ; ಮದ್ವೆ ಆದ್ಮೇಲೆ ಆಸ್ತಿ

ಬಾಂಗಡೆ ಮೀನು ಹಾಡಿನ ವಿವಾದ:

'ಮಲ್ಲ ಹಾಡು ಬಂದಾಗ ದೊಡ್ಡದಾಗಿ ಏನೋ ಸುದ್ದಿಯಾಗಿತ್ತು. ಆ ಪಾತ್ರ ಗ್ಲಾಮರಸ್‌ ಆಗಿತ್ತು ಅದಕ್ಕೆ ನಾನು ಹಾಗೆ ನಟಿಸಿದೆ. ಎಲ್ಲಾ ಹಾಡುಗಳು ಇತ್ತು ಯಾವುದು ತೆಗೆದಿಲ್ಲ. ನನ್ನ ಜೊತೆ ಶೂಟ್ ಮಾಡಿದ ಎಲ್ಲಾ ಹಾಡುಗಳು ಇತ್ತು. ಯಾವ ಸಾಂಗನ್ನು ಸಿನಿಮಾದಿಂದ ತೆಗೆದು ಹಾಕಿಲ್ಲ' ಎಂದು ಪ್ರಿಯಾಂಕಾ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.

ದರ್ಶನ್- ಸುದೀಪ್ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ ರಜತ್

ಮದುವೆ ಆದ್ಮೇಲೆ ರಿಲೀಸ್:

'ಮಲ್ಲ ಸಿನಿಮಾ ಮದುವೆ ಆದ ಮೇಲೆ ರಿಲೀಸ್ ಆಗಿದ್ದು ಅದಿಕ್ಕೆ ಜನರಿಗೆ ಹಾಗೆ ಅನಿಸಿರಬೇಕು. ನನಗೆ ಏನು ಸರಿ ಅನಿಸಿದೆಯೋ ಅದನ್ನು ನಾನು ಮಾಡುತ್ತಿದ್ದೇನೆ ಅಷ್ಟೇ. ನನಗೆ ಬಯೋಪಿಕ್‌ ಸಿನಿಮಾ ಮಾಡಬೇಕು ಅಂತ ಆಸೆ ಇದೆ. ಆದರೆ ಯಾವುದೂ ಇನ್ನೂ ನಿರ್ಧಾರ ಮಾಡಿಲ್ಲ. ಒಂದಿಷ್ಟು ಆಫರ್‌ಗಳು ಬಂದಿದೆ..ಮುಂದೆ ನೋಡೋಣ' ಎಂದಿದ್ದಾರೆ ಪ್ರಿಯಾಂಕಾ.

click me!