ಸ್ನೇಹಕ್ಕೆ ಕಟ್ಟುಬಿದ್ದು ದರ್ಶನ್ ಭೇಟಿಯಾದೆ: ಪೊಲೀಸರಿಗೆ ಸ್ಪಷ್ಟನೆ ಕೊಟ್ಟ ನಟ ಚಿಕ್ಕಣ್ಣ

By Kannadaprabha News  |  First Published Aug 30, 2024, 7:09 AM IST

'ನಾನು ಸ್ನೇಹಕ್ಕೆ ಕಟ್ಟು ಬಿದ್ದು ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾದೆ. ನಮ್ಮಿಬ್ಬರ ಭೇಟಿಗೆ ಗೆಳೆತನ ಹೊರತು ಬೇರೆ ಕಾರಣಗಳಿರಲಿಲ್ಲ' ಎಂದು ನಟ ಚಿಕ್ಕಣ್ಣ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾರೆ. 


ಬೆಂಗಳೂರು (ಆ.30): 'ನಾನು ಸ್ನೇಹಕ್ಕೆ ಕಟ್ಟು ಬಿದ್ದು ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾದೆ. ನಮ್ಮಿಬ್ಬರ ಭೇಟಿಗೆ ಗೆಳೆತನ ಹೊರತು ಬೇರೆ ಕಾರಣಗಳಿರಲಿಲ್ಲ' ಎಂದು ನಟ ಚಿಕ್ಕಣ್ಣ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾರೆ. ಸಾಕ್ಷಿ ಹೇಳಿಕೆ ಬಳಿಕ ದರ್ಶನ್ ಭೇಟಿ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಚಿಕ್ಕಣ್ಣ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸಿಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಚಿಕ್ಕಣ್ಣರನ್ನು ಸುಮಾರು ಹೊತ್ತು ಪ್ರಶ್ನಿಸಿ ತನಿಖಾಧಿಕಾರಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. 

ಈ ವೇಳೆ ಮತ್ತೆ ಈ ತಪ್ಪು ಮರುಕಳಿಸಿದರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾದಿತು ಎಂದು ಚಿಕ್ಕಣ್ಣಗೆ ಎಸಿಪಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. ನೀನು ದರ್ಶನ್‌ಗೆ ಬಹಳ ಆತ್ಮೀಯ. ಇಂಥ ಸಮಯದಲ್ಲಿ ಅವರನ್ನು ಮಾತನಾಡಿಸದೆ ಇರೋದು ಸರಿಯಲ್ಲ ಎಂದು ಆಪ್ತರು ಹೇಳಿದ್ದರು. ಹೀಗಾಗಿ ಜೈಲಿನಲ್ಲಿ ದರ್ಶನ್‌ರನ್ನು ಭೇಟಿಯಾದೆ. ಇದರ ಹೊರತು ಬೇರೆ ಕಾರಣವಿಲ್ಲ ಎಂದು ಚಿಕ್ಕಣ್ಣ ಹೇಳಿದ್ದಾರೆ ಎನ್ನಲಾಗಿದೆ. ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕಣ್ಣ, ಸಾಕ್ಷಿ ಹೇಳಿಕೆ ನೀಡಿದ ಬಳಿಕ ಜೈಲಿನಲ್ಲಿರುವ ದರ್ಶನ್‌ರನ್ನು ಭೇಟಿಯಾಗಬಾರದು ಎಂಬುದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

Latest Videos

undefined

ರಾಜ್ಯದ ಬೇರೆ ಬೇರೆ ಜೈಲಿಗೆ ದರ್ಶನ್ ಆಪ್ತರು ಸ್ಥಳಾಂತರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ್ ಗ್ಯಾಂಗ್‌ನ ನಾಲ್ವರು ಆರೋಪಿಗಳನ್ನು ಗುರುವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಾಜ್ಯದ ಬೇರೆ, ಬೇರೆ ಜೈಲುಗಳಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಶಿಫ್ಟ್ ಮಾಡಲಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೂಷನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ, 6ನೇ ಆರೋಪಿ ಜಗದೀಶ್ ಹಾಗೂ 12ನೇ ಆರೋಪಿ ಲಕ್ಷ್ಮಣ್‌ನನ್ನು ಶಿವಮೊಗ್ಗಕ್ಕೆ, 9ನೇ ಆರೋಪಿ ಧನರಾಜ್‌ನನ್ನು ಧಾರವಾಡ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪ್ರದೂಷ್ ಬ್ಯಾಂಕೆಟ್ ಹಾಗೂ ಬ್ಯಾಗ್ ಸಮೇತ ಜೈಲಿಗೆ ಆಗಮಿಸಿದ್ದ. ಈ ವೇಳೆ ಜೈಲಿನ ಸಿಬ್ಬಂದಿ ಬ್ಯಾಂಕೆಟನ್ನು ಒಳಗೆ ತೆಗೆದುಕೊಂಡು ಹೋಗಲು ನಿರಾಕರಿಸಿದರು. 

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ: ಯೋಗೇಶ್ವರ್‌ ಹೇಳಿಕೆಗೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ

ಆತನ ಬ್ಯಾಗ್ ತಪಾಸಣೆ ನಡೆಸಿದಾಗ ಸಿರಪ್ ಪತ್ತೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಕೊಡುತ್ತೇವೆ ಎಂದುತಿಳಿಸಿದರು. ಹಿಂಡಲಗಾಜೈಲಿನ ಅತಿ ಭದ್ರತಾ ವಿಭಾಗದಸೆಲ್‌ನಲ್ಲಿ (ಅಂಧೇರಿಸೆಲ್) ಪ್ರದೂಷ್ಯನನ್ನು ಇರಿಸಲಾಗಿದ್ದು, 2894 ದಿನಂಬರ್‌ ನೀಡಲಾಗಿದೆ. ತಂದೆಯ ಅನಾರೋಗ್ಯದಿಂದ ಬೇರೆಡೆಗೆ ಸ್ಥಳಾಂತರ ಮಾಡದಂತೆ ಪ್ರದೂಷ್ ಮನವಿ ಮಾಡಿಕೊಂಡಿದ್ದ. ಆದರೆ, ಕೋರ್ಟ್ ಅನುಮತಿ ನೀಡಿಲ್ಲ. ಇನ್ನು 6ನೇ ಆರೋಪಿ ಜಗದೀಶ್, 12ನೇ ಆರೋಪಿ ಲಕ್ಷ್ಮಣ್ ನನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಲಕ್ಷ್ಮಣ್ ಗೆ 1073, ಜಗದೀಶ್ ಗೆ 1072 ನಂಬರ್‌ನೀಡಲಾಗಿದೆ. ಪ್ರಕರಣದ 9ನೇ ಆರೋಪಿ ಧನರಾಜ್‌ನನ್ನು ಮಧ್ಯಾಹ್ನ 1ರ ಸುಮಾರಿಗೆ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಕರೆತರಲಾಯಿತು.

click me!