ತೊಡೆಯಿಂದ ಸೀಟ್ ಕೆಳಗೆ ಬಾಂಬ್ ಟ್ರಾನ್ಸ್‌ಫರ್ ಮಾಡೋದ್ರಲ್ಲಿ ಅರ್ಥವೇ ಇಲ್ಲ; ರಮೇಶ್ ಅರವಿಂದ್!

By Shriram BhatFirst Published Aug 29, 2024, 10:37 PM IST
Highlights

ನಟ ರಮೇಶ್ ಅರವಿಂದ್ ಒಂದೊಳ್ಳೆ ಕಥೆ ಮೂಲಕ ಅದೇನೋ ಮಹತ್ವವಾದುದನ್ನು ಹೇಳಿದ್ದಾರೆ ನೋಡಿ! ಅದೇನೋ ಅಂದಿದ್ದು ಯಾಕೆಂದರೆ, ಇಲ್ಲಿಯೇ ಒಂದೇ ವಾಕ್ಯದಲ್ಲಿ ಅದನ್ನ ಹೇಳೋಕೆ ಆಗಲ್ಲ ಅಂತ. ಅವರು ಹೇಳಿರೋದನ್ನು...

ನಟ, ನಿರ್ದೇಶಕ ರಮೇಶ್ ಅರವಿಂದ್ (Ramesh Aravind) ಇಡೀ ಭಾರತಕ್ಕೇ ಗೊತ್ತಿರುವ ನಟ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷಗೆಳಲ್ಲಿ ಅವರು ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದರು. ಅವರು ನಟಿಸಿರುವ ಅನೇಕ ಸಿನಿಮಾಗಳು ಬಾಲಿವುಡ್‌ ಸಿನಿರಂಗದಲ್ಲೂ ಡಬ್ ಆಗಿದ್ದು, ಆ ಮೂಲಕ ಅವರು ಹಿಂದಿ ಪ್ರೇಕ್ಷಕರಿಗೂ ಅಪರಿಚಿತರೇನಲ್ಲ. ಇಂಥ ನಟ ರಮೇಶ್ ಅರವಿಂದ ವ್ಯಕ್ತಿತ್ವ ವಿಕಸನದ ಬಗ್ಗೆ ಮಾತನಾಡುವುದರ ಮೂಲಕ ಇತ್ತೀಚೆಗೆ ಭಾರೀ ಫೇಮಸ್. 

ನಟ ರಮೇಶ್ ಅರವಿಂದ್ ಒಂದೊಳ್ಳೆ ಕಥೆ ಮೂಲಕ ಅದೇನೋ ಮಹತ್ವವಾದುದನ್ನು ಹೇಳಿದ್ದಾರೆ ನೋಡಿ! ಅದೇನೋ ಅಂದಿದ್ದು ಯಾಕೆಂದರೆ, ಇಲ್ಲಿಯೇ ಒಂದೇ ವಾಕ್ಯದಲ್ಲಿ ಅದನ್ನ ಹೇಳೋಕೆ ಆಗಲ್ಲ ಅಂತ. ಅವರು ಹೇಳಿರೋದನ್ನು ಅವರು ಹೇಳಿದಂತೆ ಅವರದೇ ಮಾತಿನಲ್ಲಿ ಕೇಳಿ ನೋಡಿ.. ಓವರ್ ಟು ರಮೇಶ್ ಅರವಿಂದ್.. 

Latest Videos

ಜನಾಂಗೀಯ ಸಂಘರ್ಷದ ನಡುವೆ ಅರಳಿದ ಪ್ರೇಮಕಥೆ; ತಮಿಳು ಪವಿತ್ರನ್ ಸಾರಥ್ಯದಲ್ಲಿ 'ಕರ್ಕಿ'..!

ಒಂದ್ ಪಾರ್ಕ್‌ ಬೆಂಚ್ ಕೆಳಗೆ ಒಬ್ಬ ಟೆರರಿಸ್ಟ್ ಒಂದು ಬಾಂಬ್ ಇಟ್ಬಿಟ್ಟು ಓಡೋಗ್ಬಿಟ್ಟ.. ಇದನ್ನ ಒಬ್ಬ ನೋಡ್ಬಿಟ್ಟ.. ಅಯ್ಯಯ್ಯೋ, ಯಾರಿಗಾದ್ರೂ ಜೀವಕ್ಕೆ ಹಾನಿಯಾಗ್ಬಿಟ್ರೆ ಅಂದ್ಕೊಂಡು ಈ ಪುಣ್ಯಾತ್ಮ ಆ ಬಾಂಬ್‌ನ ತಗೊಂಡೋಗಿ ಪೊಲೀಸ್ ಸ್ಟೇಷನ್‌ಗೆ ಕೊಟ್ಬಿಡೋಣ ಅಂತ ಓಡಿ ಹೋಗ್ತಿದ್ದ.. ಹೋಗ್ತಾ ಇದ್ದಾಗ ಬಸ್ ನೋಡಿದ, ಬಸ್ಸಲ್ಲಿ ಹೋದ್ರೆ ಬೇಗ ಹೋಗ್ಬಹುದು ಅಂತ ಬಸ್‌ ಹತ್ಬಿಟ್ಟ.. ಬಸ್‌ನಲ್ಲಿ ಲಾಸ್ಟ್ ಸೀಟ್‌ನಲ್ಲಿ ಕೂತಿರೋ ಇವ್ನ ತೊಡೆ ಮೇಲೆ ಬಾಂಬ್. 

ಕಂಡಕ್ಟರ್ ಬಂದ, ಇವ್ನ ತೊಡೆ ಮೇಲೆ ಬಾಂಬ್ ನೋಡಿ, ಅದೇನು ಅಂದ.. ಅವ್ನು 'ಬಾಂಬ್ ಸರ್..' ಅಂದ.. ಕಂಡಕ್ಟರ್ 'ಟಿಕ್ ಟಿಕ್ ಅಂತಿದ್ಯಲ್ರೀ..' ಅಂದಾಗ ಆತ 'ಹೌದು ಸರ್, ಲೈವ್ ಬಾಂಬ್..'ಅಂದ. ತಕ್ಷಣ ಕಂಡಕ್ಟರ್ 'ತಲೆ ಇದೆಯೇನ್ರೀ..? ಲೈವ್ ಬಾಂಬ್ ಯಾರಾದ್ರೂ ತೊಡೆ ಮೇಲೆ ಇಟ್ಕೊತಾರೇನ್ರೀ..? ಸೀಟ್ ಕೆಳಗೆ ಇಡ್ರೀ..' ಅಂದ್ನಂತೆ.. ಈ ಲೈವ್ ಬಾಂಬ್‌ನ ತೊಡೆ ಮೇಲೆ ಇಟ್ಕೊಂಡ್ರೆ ಏನು, ಸಿಟ್ ಕೆಳಗೆ ಇಟ್ಕೊಂಡ್ರೆ ಏನು? ಟೈಮ್ ಆದಕೂಡ್ಲೇ ಬಸ್ಸೇ ಬ್ಲಾಸ್ಟ್ ಆಗುತ್ತೆ ಅಲ್ವಾ? 

ನಮ್ಮೆಲ್ಲರ ಸಮಸ್ಯೆ ಎಲ್ಲಾ ಅದೇ.. ಯಾವ್ದೋ ಒಂದು ಸಮಸ್ಯೆಗೆ ತಾತ್ಕಾಲಿಕವಾಗಿ ಯಾವುದೋ ಒಂದು ಪರಿಹಾರ ಹುಡುಕಿಬಿಡ್ತೀವಿ.. ಅದು ಮತ್ತೆ ಬಂದು ನಮ್ಮನ್ನ ಕಾಡುತ್ತೆ.. ಈ ತಿಂಗ್ಳು ಇಎಮ್‌ಐ ಕಟ್ಟೋಕೆ ಆಗ್ತಿಲ್ವಾ, ಇನ್ನೊಬ್ರಿಂದ ಸಾಲ ತಗೋ.. ಮುಂದಿನ ತಿಂಗ್ಳು ಅವ್ನು ನಮ್ಮ ಪ್ರಾಣ ತಿಂತಾನೆ..  ಇಎಮ್‌ಐ ಮಾತ್ರ ಅಲ್ಲ, ಎಲ್ಲ ಸಮಸ್ಯೆಗಳಿಗೂ ಆ ಮೂಲ ಕಾರಣ ಏನು? ಅದಕ್ಕೆ ಹೇಗೆ ಪರಿಹಾರ ಹುಡುಕೋದು ಅಂತ ಯೋಚ್ನೆ ಮಾಡ್ಬೇಕು.. 

ಕೊನೆಗಾಲದಲ್ಲಿ 'ಗಂಧದ ಗುಡಿ' ಖ್ಯಾತಿ ಎಂಪಿ ಶಂಕರ್ ಭಾರಿ ಸಂಕಟ ಅನುಭವಿಸಲು ಕಾರಣವೇನು?

ಈ ತೊಡೆಯಿಂದ ಸೀಟ್ ಕೆಳಗೆ ಬಾಂಬ್ ಟ್ರಾನ್ಸ್‌ಫರ್ ಮಾಡಿದಂಗೆ ಮಾಡೋದ್ರಲ್ಲಿ ಅರ್ಥನೇ ಇಲ್ಲ.. 'ಹೆಲೋ ರಮೇಶ್ ಈಸ್ ಸ್ಪೀಕಿಂಗ್' ಅನ್ನೋ 'ಕಾನ್ಸೆಪ್ಟ್‌'ನಲ್ಲಿ ನಟ ರಮೇಶ್ ಅರವಿಂದ್ ಅವರು ಜನಸಾಮಾನ್ಯರ ಜೀವನಕ್ಕೆ ಅತ್ಯಗತ್ಯವಾಗಿ ಬೇಕಾಗುವಂಥ ಪರಿಹಾರದ ಮಾರ್ಗ ತಿಳಿಸುತ್ತಾರೆ. ಕಾಮನ್ ಪೀಪಲ್‌ಗೆ ಹತ್ತಿರವಾಗುವಂಥ ಮಾತುಗಳನ್ನು ಆಡುತ್ತಾರೆ. ಎಷ್ಟೋ ಜನರು ಅವರ ಮಾತುಗಳನ್ನು ಕೇಳಿ ತಮ್ಮ ಜೀವನವೇ ಬದಲಾಯುತು ಎನ್ನುತ್ತಾರೆ. ಇನ್ನೂ ಹಲವರು ರಮೇಶ್ ಅರವಿಂದ್ ಮಾತುಗಳು ನಮ್ಮ ಸಾಧನೆಗೆ ಸಹಾಯಕವಾಯ್ತು ಅಂತಾರೆ. 

click me!