ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ರಿಪ್ಪನ್ ಸ್ವಾಮಿ ಆಗ್ಬಿಟ್ರು, ಫ್ಯಾನ್ಸ್ ಶಾಕ್ ಆಗೋದ್ರು!

By Shriram Bhat  |  First Published Aug 29, 2024, 11:20 PM IST

ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು 48 ದಿನಗಳ ಚಿತ್ರೀಕರಣವನ್ನು ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡುತ್ತಿದ್ದಾರೆ. ..


ಸ್ಯಾಂಡಲ್‌ವುಡ್ ಸಿನಿರಂಗದಲ್ಲಿ ಹೊಸಬರ ಮೂಲಕ ಹೊಸ ಹೊಸ ಪ್ರಯೋಗಗಳು ನಿರಂತರವಾಗಿ ನಡೆಯುತ್ತಲೇ ಇವೆ. ಪಂಚಾಂನನ ಫಿಲಂಸ್ ನಿರ್ಮಾಣದ ,ಕಿಶೋರ್ ಮೂಡುಬಿದ್ರೆ ನಿರ್ದೇಶನದ ವಿಜಯ್ ರಾಘವೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ 'ರಿಪ್ಪನ್ ಸ್ವಾಮಿ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ  ಬಿಡುಗಡೆಯಾಗಿ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದೆ. 

ಪೋಸ್ಟರ್‌ನಲ್ಲಿ ಚಿನ್ನಾರಿ ಮುತ್ತ ಖ್ಯಾತಿಯ ನಟ ವಿಜಯ್ ರಾಘವೇಂದ್ರ ಅವರು ರಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಮಾಲ್ಗುಡಿ ಡೇಸ್ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದ ಕಿಶೋರ್ ಮೂಡಬಿದ್ರೆ 'ರಿಪ್ಪೆನ್ ಸ್ವಾಮಿ' ಮೂಲಕ ಒಂದು ಮಾಸ್ ಕಥೆ ಹೇಳಲು ಹೊರಟಿದ್ದಾರೆ. ತಾರಾಗಣದಲ್ಲಿ ಅಶ್ವಿನಿ ಚಂದ್ರಶೇಖರ್, ಪ್ರಕಾಶ್ ತುಮ್ಮಿ ನಾಡು ,ವಜ್ರದೀರ್ ಜೈನ್ ,ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್ ಮುಂತಾದವರು ಇದ್ದಾರೆ. 

Tap to resize

Latest Videos

ತೊಡೆಯಿಂದ ಸೀಟ್ ಕೆಳಗೆ ಬಾಂಬ್ ಟ್ರಾನ್ಸ್‌ಫರ್ ಮಾಡೋದ್ರಲ್ಲಿ ಅರ್ಥವೇ ಇಲ್ಲ; ರಮೇಶ್ ಅರವಿಂದ್!

ಇನ್ನು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು 48 ದಿನಗಳ ಚಿತ್ರೀಕರಣವನ್ನು ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡುತ್ತಿದ್ದಾರೆ. ರಂಗನಾಥ್ ಸಿ ಎಂ ರವರು ಕ್ಯಾಮರಾ ಹಿಡಿದಿದ್ದಾರೆ. ಇನ್ನು ಈ ಸಿನಿಮಾ ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ನಿರ್ಮಾಣ ಮಾಡುತ್ತಿದ್ದಾರೆ .

ಪಂಚಾನನ ಫಿಲಂಸ್ ನ ಮೊದಲನೇ ಸಿನಿಮಾ ಇದಾಗಿದೆ .ತನ್ನ ಎಲ್ಲಾ ಕೆಲಸವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಚಿತ್ರ ಇದ್ದು ಅತಿ ಶೀಘ್ರದಲ್ಲಿ  ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಕನ್ನಡದಲ್ಲಿ ಹೊಸತನದ ಅಲೆಯೊಂದನ್ನು ಸೃಷ್ಟಿಸಲಿದೆ ಎಂದು ಚಿತ್ರತಂಡ ಸೇರಿದಂತೆ ಹಲವರು ಹೇಳುತ್ತಿದ್ದಾರೆ. ಚಿತ್ರವು ತೆರೆಗೆ ಬಂದ ಬಳಿಕ ಹೊಸಬರ ಹೊಸ ಪ್ರಯೋಗವು ಫಲ ನೀಡುವುದೇ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ನಟ ವಿಜಯ್ ರಾಘವೇಂದ್ರ ಅಭಿಮಾನಿಗಳು ಈ ಚಿತ್ರವನ್ನು ತೆರೆಯಲ್ಲಿ ನೋಡಲು ಕಾಯುತ್ತಿದ್ದಾರೆ. 

ಜನಾಂಗೀಯ ಸಂಘರ್ಷದ ನಡುವೆ ಅರಳಿದ ಪ್ರೇಮಕಥೆ; ತಮಿಳು ಪವಿತ್ರನ್ ಸಾರಥ್ಯದಲ್ಲಿ 'ಕರ್ಕಿ'..!

click me!