
‘ನನಗೆ ಹೆಣ್ಮಕ್ಕಳ ಶೋಷಣೆ ಕುರಿತ ವಿಚಾರ ಕಾಡುತ್ತದೆ. ಶೋಷಣೆ ಅಥವಾ ಅಪರಾಧ ಉಂಟಾಗದಂತೆ ತಡೆಯುವುದು ಹೇಗೆ, ಕ್ರೈಮ್ ಆಗುವುದಕ್ಕೆ ಈ ಸಮಾಜ ಯಾಕೆ ಬಿಡುತ್ತಿದೆ? ಇವತ್ತು ಅಪರಾಧ ಮಾಡುವವರಿಗೆ ಭಯ ಕಡಿಮೆಯಾಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಅನ್ಯಾಯವಾದವರಿಗೆ ರಕ್ಷಣೆ ಮತ್ತು ನ್ಯಾಯ ಸಿಗಬೇಕು. ಇವತ್ತಿನ ತಂತ್ರಜ್ಞಾನ ಬಳಸಿಕೊಂಡು ಕ್ರೈಮ್ ಆಗದಿರುವಂತಹ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯವನ್ನು ಯುದ್ಧಕಾಂಡ ಸಿನಿಮಾ ಹೊಂದಿದೆ.’
ಹೀಗೆ ಹೇಳಿರುವುದು ಅಜಯ್ ರಾವ್. ಅವರು ನಾಯಕನಾಗಿ ನಟಿಸಿರುವ, ನಿರ್ಮಾಣ ಮಾಡಿರುವ ‘ಯುದ್ಧಕಾಂಡ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ಅವರು, ‘ಈ ಚಿತ್ರದ ಪ್ರತಿಯೊಂದು ದೃಶ್ಯ ಮಾಡುವಾಗಲೂ, ನಾನು ಸೋಲಬಾರದು ಅಂತ ಹೆದರಿಕೊಂಡು ಸಿನಿಮಾ ಮಾಡಿದ್ದೇನೆ. ಈ ಚಿತ್ರಕ್ಕೆ ತುಂಬಾ ಸಾಲ ಮಾಡಿದ್ದೇನೆ. ಅಡ ಇಟ್ಟಿದ್ದೇನೆ. ಕನ್ನಡ ಸಿನಿಮಾ ಬೆಳೆಯಲಿ ಎಂಬ ಉದ್ದೇಶದ ಜೊತೆಗೆ ನಾನೂ ಕಲಾವಿದನಾಗಿ ಬೆಳೆಯಬೇಕು ಎಂಬ ಆಶಯದಿಂದ ಸಿನಿಮಾ ಮಾಡಿದ್ದೇನೆ. ಗೆಲ್ಲುತ್ತೇನೆಂಬ ಭರವಸೆ ಇದೆ’ ಎಂದು ಹೇಳಿದ್ದಾರೆ.
‘ಚಿತ್ರಕ್ಕೆ 90 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ನಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸಿದ್ದೇವೆ. ಸರಸ್ವತಿ ಗೆದ್ದರೆ ಲಕ್ಷ್ಮೀ ತಾನಾಗಿಯೇ ಬರುತ್ತಾಳೆ. ಹಾಗಾಗಿ ಆತಂಕವಿಲ್ಲ. ಒಂದೊಳ್ಳೆಯ ಚಿತ್ರ ಮಾಡಿದ ಖುಷಿ ಇದೆ. ಅಲ್ಲದೇ ನಾನೊಬ್ಬ ಪ್ಯಾಶನೇಟ್ ನಟ, ನಿರ್ಮಾಪಕ. ಗಳಿಸುವ ತಾಕತ್ತಿದೆ’ ಎನ್ನುತ್ತಾರೆ. ಈ ಚಿತ್ರಕ್ಕೆ ರವಿಚಂದ್ರನ್ ಅವರು ಐದು ಟಿಕೆಟ್‌ಗಳನ್ನು ಖರೀದಿಸುವ ಮೂಲಕ ಶುಭ ಹಾರೈಸಿದ್ದು, ‘ನಾನು ಕೋಟಿಗಟ್ಟಲೆ ಹಾಕಿ ಸಿನಿಮಾ ಮಾಡಿದವನು. ನನಗೆ ದುಡ್ಡು ದುಡ್ಡಿನ ಬೆಲೆ ಆಗಲೂ ಗೊತ್ತಿಲ್ಲ. ಈಗಲೂ ಗೊತ್ತಿಲ್ಲ. ಆಗ ಅಪ್ಪನ ಬಳಿ ಏನಾದರೂ ಕೇಳಿದರೆ ಸಾಕು ಅವರು ಏರ್ಪಾಡು ಮಾಡುತ್ತಿದ್ದರು.
ಯುದ್ಧಕಾಂಡ ರಾಷ್ಟ್ರಪತಿಗಳಿಗೂ ತಲುಪಬೇಕು: ಚಿತ್ರದ ಕತೆ ಹೆಣ್ಣಿನ ಮೇಲೆ ನಿಂತಿದೆ ಎಂದ ಅಜಯ್ ರಾವ್
ಅವರು ಎಲ್ಲಿಂದ ಹಣ ತರುತ್ತಿದ್ದರು ಅಂತ ನನಗೆ ಗೊತ್ತಿರುತ್ತಿರಲಿಲ್ಲ. ಅವರು ಇಲ್ಲದಾಗ ಅದರ ಬೆಲೆ ಗೊತ್ತಾಯಿತು. ಕನಸು ಮುಖ್ಯ. ಹಾಗಾಗಿ ನಿಮ್ಮ ಚಿತ್ರತಂಡ ನೋಡಿದರೆ, ನಿಮ್ಮಲ್ಲಿ ಶ್ರದ್ಧೆ ಕಾಣುತ್ತಿದೆ. ನಿಮ್ಮ ತಂಡದಲ್ಲಿ ಒಂದು ತೃಪ್ತಿ ಮತ್ತು ಆತ್ಮವಿಶ್ವಾಸವಿದೆ. ನಾನು ಪ್ರೇಕ್ಷಕನಾಗಿ ಸಿನಿಮಾ ನೋಡುತ್ತೇನೆ. ಸಿನಿಮಾ ನೋಡಿ ಫೋನ್ ಮಾಡುತ್ತೇನೆ’ ಎಂದು ಹೇಳಿದ್ದಾರೆ. ಈ ಸಿನಿಮಾವನ್ನು ಪವನ್ ಭಟ್ ನಿರ್ದೇಶಿಸಿದ್ದಾರೆ. ಅರ್ಚನಾ ಜೋಯಿಸ್ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಟಿ.ಎಸ್.ನಾಗಾಭರಣ ತಾರಾಬಳಗದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.