ನನ್ನನ್ನು ನಾಯಕನನ್ನಾಗಿ ಮಾಡಿದ ಕೋರ ತಂಡಕ್ಕೆ ಧನ್ಯವಾದ: ಸುನಾಮಿ ಕಿಟ್ಟಿ

Published : Apr 17, 2025, 05:04 PM ISTUpdated : Apr 17, 2025, 05:17 PM IST
ನನ್ನನ್ನು ನಾಯಕನನ್ನಾಗಿ ಮಾಡಿದ ಕೋರ ತಂಡಕ್ಕೆ ಧನ್ಯವಾದ: ಸುನಾಮಿ ಕಿಟ್ಟಿ

ಸಾರಾಂಶ

ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಟಿಸಿರುವ ‘ಕೋರ’ ಸಿನಿಮಾ ಏ.18ರಂದು ಬಿಡುಗಡೆಯಾಗುತ್ತಿದೆ. ಪಿ. ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಈ ಸಿನಿಮಾ ಕಾಡಿನಲ್ಲಿ ನಡೆಯುವ ವಿಭಿನ್ನ ಕತೆಯನ್ನು ಹೊಂದಿದೆ. 

ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಟಿಸಿರುವ ‘ಕೋರ’ ಸಿನಿಮಾ ಏ.18ರಂದು ಬಿಡುಗಡೆಯಾಗುತ್ತಿದೆ. ಪಿ. ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಈ ಸಿನಿಮಾ ಕಾಡಿನಲ್ಲಿ ನಡೆಯುವ ವಿಭಿನ್ನ ಕತೆಯನ್ನು ಹೊಂದಿದೆ. ಈ ಚಿತ್ರದ ಪ್ರೀರಿಲೀಸ್ ಈವೆಂಟ್ ಇತ್ತೀಚೆಗೆ ನಡೆಯಿತು. ನಿರ್ದೇಶಕ ಒರಟ ಶ್ರೀ, ‘ನಲವತ್ತು ವರ್ಷಗಳ ಹಿಂದಿನ ಕಥೆ ಇದು. ಕಾಡಿನಲ್ಲೇ ಹೆಚ್ಚು ನಡೆಯುವ ಕಥೆ’ ಎಂದರು. ನಿರ್ಮಾಪಕ ಪಿ.ಮೂರ್ತಿ, ‘ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರವಿದು. ನಾನು ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು.

ಸುನಾಮಿ ಕಿಟ್ಟಿ ತನ್ನನ್ನು ನಾಯಕನನ್ನಾಗಿ ಮಾಡಿದ ನಿರ್ಮಾಪಕರಿಗೆ ಮತ್ತು ನಟಿಸಲು ಸಿದ್ಧತೆ ಮಾಡಿಸಿದ ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದರು. ನಾಯಕ ನಟಿ ಚರಿಷ್ಮಾ, ಸಹ ನಿರ್ಮಾಪಕ ಚೆಲುವರಾಜು, ಕಲಾವಿದರಾದ ಮುನಿ, ಸೌಜನ್ಯ, ರಾಜು ನಾಯಕ್, ಗಿರೀಶ್ ಕಚ್ಚೆ, ಆರ್ಯ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಂಕಲನಕಾರ ಗಿರೀಶ್ ಇದ್ದರು. ತನಿಶಾ ಕುಪ್ಪಂಡ, ರಜತ್, ಸಲಗ ಸೂರಿ, ಸಂಜಯ್ ಗೌಡ, ಎ.ಕೆ.ಮೂರ್ತಿ, ರಮೇಶ್ ಶುಭ ಕೋರಿದರು.

ಆ ಅವಕಾಶ ಸಿಕ್ಕರೆ ಖಂಡಿತ ಮಿಸ್‌ ಮಾಡಿಕೊಳ್ಳಲಾರೆ: ಪೂಜಾ ಹೆಗ್ಡೆ ಹೀಗಾ ಹೇಳೋದು!

ಕೊರಗಜ್ಜನ ಕತೆ ಇರುವ ‘ಕೋರ’ ಸಿನಿಮಾ 18ರಂದು ತೆರೆಗೆ: ರತ್ನಮ್ಮ ಮೂವೀಸ್‌ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ ಕೋರ ಸಿನಿಮಾ ಏ.18ರಂದು ಕರ್ನಾಟಕ ರಾಜ್ಯಾದ್ಯಂತ ಎಲ್ಲ ಚಿತ್ರ ಮಂದಿರಗಳಲ್ಲಿ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ, ನಟ ಕೆ.ವಿ.ಮೂರ್ತಿ ಹೇಳಿದ್ದಾರೆ. ಮಲೆನಾಡಿನ ಆದಿವಾಸಿಗಳ ಜೀವನವನ್ನು ಆಧರಿಸಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಬಹುತೇಕ ಮಲೆನಾಡಿನ ಕಾಡುಗಳಲ್ಲಿ, ಸಕಲೇಶಪುರ, ಚೆನ್ನೈನಲ್ಲಿ ಶೂಟಿಂಗ್ ನಡೆಸಲಾಗಿದೆ ಎಂದರು.

ನಾನು ಕೊರಗಜ್ಜನ ಭಕ್ತನಾಗಿದ್ದು, ಸಿನಿಮಾದಲ್ಲಿ ಆದಿವಾಸಿಗಳು ಆರಾಧಿಸುವ ಕೊರಗಜ್ಜ ದೈವದ ಕತೆಯನ್ನು ಬ‍ಳಸಿಲಾಗಿದೆ. ಇದು ಶುದ್ಧ ಕಮರ್ಶಿಯಲ್ ಸಿನಿಮಾವಾಗಿದೆ. ಸಿನಿಮಾದ ಪ್ರಿವ್ಯೂ ನೋಡಿಯೇ ತೆಲುಗು ಮತ್ತು ತಮಿಳು ಭಾಷೆಗೆ ಮಾರಾಟವಾಗಿದ್ದು, ಈ ಭಾಷೆಗಳಿಗೆ ಡಬ್‌ ಮಾಡಲಾಗಿದೆ. ಯಾವುದೇ ಬಹುಕೋಟಿ ಸಿನಿಮಾಗಳಿಗೆ ಕಡಿಮೆಯಾಗದಂತೆ ಬಹಳ ಕಷ್ಟಪಟ್ಟು ಸಿನಿಮಾ ಚಿತ್ರೀಕರಿಸಲಾಗಿದ್ದು, ಪ್ರೇಕ್ಷಕರಿಗೆ ಖಂಡಿತಾ ನಿರಾಸೆ ಮಾಡುವುದಿಲ್ಲ ಎಂದು ಹೇಳಿದರು.

ಇದೊಂದು ಬಹಳ ದೊಡ್ಡ ಕನಸಾಗಿದೆ: ಕಿಚ್ಚ ಸುದೀಪ್ ಮಾತಿನ ಮರ್ಮವೇನು?

ಈ ಸಂದರ್ಭ ಉಪಸ್ಥಿತರಿದ್ದ ನಾಯಕನಟ ಸುನಾಮಿ ಕಿಟ್ಟಿ, ತರಕಾರಿ ಮಾರುತ್ತಿದ್ದ ತಾನು ಈ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದೇನೆ. ಕನ್ನಡದ ಜನತೆ ಸಿನಿಮಾವನ್ನು ನೋಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ನಿರ್ದೇಶಕ ಒರಟಶ್ರೀ, ಸಿನಿಮಾದಲ್ಲಿ ಕೊರಗಜ್ಜನ ಕತೆಯನ್ನು ಬಳಸಿಕೊಳ್ಳಲಾಗಿದ್ದರೂ, ದೈವಗಳಿಗೆ ಅವಮಾನವಾಗದಂತೆ, ಜನರ ನಂಬಿಕೆಗಳಿಗೆ ಯಾವುದೇ ಚ್ಯುತಿ ಬರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ