ನನ್ನನ್ನು ನಂಬಿ ಇಂಡಸ್ಟ್ರಿಗೆ ಕರ್ಕೊಂಡು ಬಂದಿದ್ದೇ ಚಿಕ್ಕಣ್ಣ, ಅಪ್ಪು ಸರ್ ಮಾತು ಮರೆತಿಲ್ಲ: ದರ್ಶಿನಿ

Published : Mar 11, 2025, 06:23 PM ISTUpdated : Mar 11, 2025, 06:40 PM IST
ನನ್ನನ್ನು ನಂಬಿ ಇಂಡಸ್ಟ್ರಿಗೆ ಕರ್ಕೊಂಡು ಬಂದಿದ್ದೇ ಚಿಕ್ಕಣ್ಣ, ಅಪ್ಪು ಸರ್ ಮಾತು ಮರೆತಿಲ್ಲ: ದರ್ಶಿನಿ

ಸಾರಾಂಶ

ನಟಿ ದರ್ಶಿನಿ 'ಅಮೃತಾಧಾರೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಚಿಕ್ಕಣ್ಣನವರೇ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದರು ಎಂದು ಹೇಳಿದ್ದಾರೆ. ಜಾನಿ ಮಾಸ್ಟರ್ ಗುರುಗಳಾಗಿದ್ದು, ಪ್ರಭುದೇವ ಜೊತೆ ಕೆಲಸ ಮಾಡಿದ್ದಾರೆ. ಮಹಿಳಾ ಕೊರಿಯೋಗ್ರಾಫರ್‌ಗಳಿಗೆ ಅವಕಾಶ ಕಡಿಮೆ ಸಿಗುತ್ತದೆ ಎಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಪ್ರೋತ್ಸಾಹ ನೀಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

'ಅಮೃತಾಧಾರೆ' ಸೀರಿಯಲ್‌ನಲ್ಲಿ ಮಿಂಚುತ್ತಿರುವ ನಟಿ ದರ್ಶಿನಿ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಂಡಸ್ಟ್ರಿಗೆ ಬರಲು ಕಾರಣನೇ ಚಿಕ್ಕಣ್ಣ ಎಂದಿರುವ ನಟಿ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೇಳಿರುವ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. 

'ಚಿತ್ರರಂಗಕ್ಕೆ ನನ್ನನ್ನು ಕೋರಿಯೋಗ್ರಾಫರ್ ಆಗಿ ಪರಿಚಯ ಮಾಡಿಕೊಟ್ಟಿದ್ದು ಜಾನಿ ಮಾಸ್ಟರ್ ಅವರೇ ನನ್ನ ಗುರು. ಪ್ರಭುದೇವ ಅವರೊಟ್ಟಿಗೆ ಎರಡು ಮೂರು ಡ್ಯಾನ್ಸ್ ಮಾಡಿದ್ದೀನಿ. ಡ್ಯಾನ್ಸ್‌ ಜೊತೆಗೆ ಎರಡು ತಮಿಳು ಸಿನಿಮಾಗಳಲ್ಲಿ ನಟಿಸಿದ್ದೀನಿ. ಕನ್ನಡದವಳು ಆಗಿರುವ ಕಾರಣ ಇಲ್ಲಿ ಹೆಸರು ಮಾಡಬೇಕು ಎಂದು ಒಂಟಿಯಾಗಿ ಸ್ವಂತ ಕೋರಿಯೋಗ್ರಾಫಿ ಶುರು ಮಾಡಿದ್ದು ಉಪಾಧ್ಯಕ್ಷ ಮತ್ತು ಛೂಮಂತರ್ ಸಿನಿಮಾ. ಸೀರಿಯಲ್ ಜರ್ನಿ ಶುರು ಮಾಡಿದ್ದು ನಾಗಿಣಿ 2 ಮೂಲಕ. ಸದ್ಯಕ್ಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಹಾಗೂ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದೀನಿ. 2023ರಲ್ಲಿ ಕೊರಿಯೋಗ್ರಾಫರ್‌ ಆಗಿ ಜರ್ನಿ ಶುರು ಮಾಡಿದೆ. ಉಪಾಧ್ಯಕ್ಷದಲ್ಲಿ 2 ಹಾಡು, ಛೂಮಂತರ್ ಸಿನಿಮಾದಲ್ಲಿ 2 ಸಾಂಗ್ ಮಾಡಿದ್ದೀನಿ. ಮುಂದೆ ರಿಲೀಸ್ ಆಗಲಿರುವ ಸಿನಿಮಾಗಳ ಹಾಡುಗಳನ್ನು ಕೊರಿಯೋಗ್ರಾಫ್ ಮಾಡಿದ್ದೀನಿ ರಿಲೀಸ್ ಆಗಬೇಕಿದೆ. ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಸುಮಾರು 60 ರಿಂದ 80 ಹಾಡುಗಳನ್ನು ಮಾಡಿಸಿದ್ದೀನಿ' ಎಂದು ಕನ್ನಡ ಖಾಸಗಿ ವೆಬ್‌ ಸಂದರ್ಶನದಲ್ಲಿ ದರ್ಶಿನಿ ಮಾತನಾಡಿದ್ದಾರೆ. 

ಪೋಲಿಗಳಿಂದ ಸೇಫ್‌ ಆಗಲು ಈ ಪಿನ್ ಬಳಸಬೇಕು ಎಂದು ನಟಿ ಜಯಮಾಲಾಗೆ ಟಿಪ್ಸ್‌ ಕೊಟ್ಟರಂತೆ ಲೀಲಾವತಿ!

ಕೊರಿಯೋಗ್ರಾಫರ್ ಆಗಿ ನನ್ನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟವರು ಚಿಕ್ಕಣ್ಣನವರು. ಅವರದ್ದೇ ಎರಡು ಸಿನಿಮಾಗಳ ಹಾಡುಗಳನ್ನು ಶೂಟ್ ಮಾಡಿದ್ದೀನಿ. ಆ ಸಮಯದಲ್ಲಿ ನನಗೆ ಮಾಸ್ಟರ್ ಕಾರ್ಡ್ ಇರಲಿಲ್ಲ. ಆ ಸಮಯದಲ್ಲಿ ನಾನೇ ಕೆಲಸ ಮಾಡಬೇಕು ಎಂದು ಹೈದರಾಬಾದ್‌ಗಳಿಂದ ಡ್ಯಾನ್ಸರ್‌ಗಳು ಸಿಕ್ಕರು. ಛೂಮಂತರ್ ಸಿನಿಮಾ ಸಮಯದಲ್ಲಿ ಸಿಕ್ಕಾಪಟ್ಟೆ ಸಮಯ ಆಯ್ತು. ಅಸಿಸ್ಟೆಂಟ್ ಕೊಡುತ್ತಿರಲಿಲ್ಲ, ಡ್ಯಾನ್ಸರ್‌ಗಳು ಕೊಡುತ್ತಿರಲಿಲ್ಲ ಹಾಗೂ ಸೆಟ್‌ಗೆ ಹಲವರು ಬಂದು ಜಗಳ ಮಾಡುತ್ತಿದ್ದರು. ಕಾರ್ಡ್ ಪಡೆಯುತ್ತೀನಿ ಎಂದು ಮಾತು ಕೊಟ್ಟು ಕೆಲಸ ಮಾಡಿದೆ. ಮಹಿಳಾ ಕೊರಿಯೋಗ್ರಾಫರ್‌ಗಳಿಗೆ ಬಿಗ್ ಬಜೆಟ್‌ ಸಿನಿಮಾಗಳಲ್ಲಿ ಅವಕಾಶ ಕೊಡುವುದಿಲ್ಲ. ಎಲ್ಲಾ ಚಾಲೆಂಜ್‌ಗಳನ್ನು ಎದುರಿಸಿ 70mm ಸ್ಕ್ರೀನ್‌ ಮೇಲೆ ಹಾಡು ನೋಡಿದ ತಕ್ಷಣ ಖುಷಿ ಅಯ್ತು ಎಂದು ದರ್ಶಿನಿ ಹೇಳಿದ್ದಾರೆ.

ಸಪ್ತಮಿ ಗೌಡ ಪ್ರೀತಿಯ ಸಿಂಬಾ ಗುಂಡು ಇನ್ನಿಲ್ಲ; ಫೋಟೋ ಹಂಚಿಕೊಂಡು ಕಣ್ಣೀರಿಟ್ಟ ನಟಿ

ಬೆಳಗ್ಗೆ ಸೀರಿಯಲ್ ಮುಗಿಸಿಕೊಂಡು ರಾತ್ರಿ ನಾನು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡುತ್ತಿದ್ದೆ. ಹೇಳಿ ಕೊಡುವ ಮುನ್ನ ನಾನು ಪ್ರಾಕ್ಟೀಸ್ ಮಾಡಿಕೊಂಡು ಹೋಗುತ್ತಿದ್ದೆ. ಆದರೆ ಸೀರಿಯಲ್ ಶೂಟಿಂಗ್‌ಗೆ ಸರಿಯಾಗಿ ಶೆಡ್ಯೂಲ್ ಇರುವುದಿಲ್ಲ ಈ ಸಮಯದಲ್ಲಿ ಕೆಲಸ ಶುರುವಾಗಿ ಈ ಸಮಯದಲ್ಲಿ ಮುಗಿಯುತ್ತದೆ ಎನ್ನಲು ಆಗುವುದಿಲ್ಲ. ಹೀಗಾಗಿ ಸೀರಿಯಲ್ ಮತ್ತು ಕೊರಿಯೋಗ್ರಾಫಿಯನ್ನು ಮ್ಯಾನೇಜ್ ಮಾಡುತ್ತಿದ್ದೆ. ನನ್ನ ಪುಣ್ಯಕ್ಕೆ ಒಳ್ಳೆ ನಿರ್ಮಾಣ ಸಂಸ್ಥೆಯಲ್ಲಿ ಮೊದಲು ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಚಿಕ್ಕಣ್ಣವರು. ನನ್ನನ್ನು ಮೊದಲು ನಂಬಿದ್ದೇ ಅವರು ಅವಳಿಗೆ ಸಾಮರ್ಥ್ಯ ಇದೆ ಎಂದು ಪರಿಚಯ ಮಾಡಿಕೊಟ್ಟವರೇ ಇರುವ. ಪುನೀತ್ ರಾಜ್‌ಕುಮಾರ್ ಅವರ ನಟಸಾರ್ವಭೌಮ ಸಿನಿಮಾದಲ್ಲಿ ಚಿಕ್ಕಣ್ಣ ಇದ್ದರು ಅಲ್ಲಿ ಪರಿಚಯ ಆಗಿದ್ದು. ನಾನು ಒಳ್ಳೆ ಡ್ಯಾನ್ಸರ್ ಆಗಿ  ಬೆಳೆಯಬೇಕು ಎಂದು ಪುನೀತ್ ಸರ್ ಹೇಳುತ್ತಿದ್ದರು ಈ ಮಾತು ಚಿಕ್ಕಣ್ಣ ಅವರಿಗೂ ಗೊತ್ತಿತ್ತು. ಹೀಗಾಗಿ ಅವರು ನನಗೆ ಒಳ್ಳೆ ಅವಕಾಶ ಕೊಟ್ಟರು ಎಂದಿದ್ದಾರೆ ದರ್ಶಿನಿ. 

ಅಯ್ಯಯ್ಯೋ...ಸಲ್ಮಾನ್ ಖಾನ್‌ ಜೊತೆ ಸಿನಿಮಾ ಮಾಡೋಕೆ ರಶ್ಮಿಕಾ ಮಂದಣ್ಣ ಇಷ್ಟೋಂದ ಹಣ ಕೇಳಿದ್ರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ