ಭರ್ಜರಿ ವೀಕ್ಷಣೆಕಂಡ 'ಸಲಾರ್' ಟೀಸರ್: ಇದೇ ಖುಷಿಗೆ ಮತ್ತೊಂದು ಅಪ್‌ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್

Published : Jul 08, 2023, 04:37 PM IST
ಭರ್ಜರಿ ವೀಕ್ಷಣೆಕಂಡ 'ಸಲಾರ್' ಟೀಸರ್: ಇದೇ ಖುಷಿಗೆ ಮತ್ತೊಂದು ಅಪ್‌ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್

ಸಾರಾಂಶ

'ಸಲಾರ್' ಟೀಸರ್ ಭರ್ಜರಿ ವೀಕ್ಷಣೆಕಂಡ ಖುಷಿಗೆ ಹೊಂಬಾಳೆ ಫಿಲ್ಮ್ಸ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. 100 ಮಿಲಿಯನ್ ವೀಕ್ಷಣೆ ಕಂಡ ಖುಷಿಗೆ ಧನ್ಯವಾದ ತಿಳಿಸಿದ್ದಾರೆ. 

ಪ್ರಭಾಸ್ ಸಲಾರ್ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜುಲೈ 6 ಬೆಳ್ಳಂಬೆಳಗ್ಗೆ 5.12ಕ್ಕೆ ಸಲಾರ್ ಟೀಸರ್ ರಿಲೀಸ್ ಆಗಿದೆ. ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರ್ ಆಗಿದೆ. ಕೋಟಿಗಟ್ಟೇ ವೀಕ್ಷಣೆ ಪಡೆದು ಟ್ರೆಡಿಂಗ್‌ನಲ್ಲಿದೆ. ಸಲಾರ್ ಟೀಸರ್ ಅನೇಕ ದಾಖಲೆಗಳನ್ನು ಬ್ರೇಕ್ ಮಾಡಿದೆ. ಕೋಟಿಗಟ್ಟಲೇ ವೀಕ್ಷಣೆ ಪಡೆದ ಖುಷಿಯಲ್ಲಿದೆ ಹೊಂಬಾಳೆ ಫಿಲ್ಮ್ಸ್. ಇದೇ ಸಂತಸದಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಪತ್ರ ಹಂಚಿಕೊಂಡಿದ್ದಾರೆ. ಜೊತೆಗೆ ಟೈರಲ್ ರಿಲೀಸ್ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.  

'ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೃದಯ ತುಂಬಿದ ಧನ್ಯವಾದಗಳು. ತಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹಕ್ಕೆ ನಾವು ಆಭಾರಿ' ಎನ್ನುತಾ ಪತ್ರ ಪ್ರಾರಂಭಿಸಿದ್ದಾರೆ. 

'ಭಾರತೀಯ ಸಿನಿಮಾ ಸಾಮರ್ಥ್ಯದ ಸಂಕೇತವಾಗಿ ಹೊರಹೊಮ್ಮಿರುವ ಸಲಾ‌ರ್ ಕ್ರಾಂತಿಗೆ ಮುನ್ನುಡಿಯಾಗಿ ಚಿತ್ರಪ್ರೇಮಿಗಳಿಂದ ದೊರಕಿದ ಪ್ರೀತಿಪೂರ್ವಕ ಬೆಂಬಲದಿಂದ ನಮ್ಮ ಮನತುಂಬಿದೆ. ಭಾರತೀಯ ಚಿತ್ರ ಸಲಾ‌ರ್ ಸಿನಿಮಾ ಟೀಸರ್ 10 ಕೋಟಿ ಚಿತ್ರರಸಿಕರನ್ನು ತಲುಪಿ ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ. ನಿಮ್ಮ ಅಭಿಮಾನದ ಬೆಂಬಲಕ್ಕೆ ನಾವು ಸದಾ ಋಣಿಗಳು. ನಿಮ್ಮ ಅಚಲ ಬೆಂಬಲವು ನಮ್ಮ ಆಸಕ್ತಿಗೆ ಚೈತನ್ಯ ತುಂಬಿ ಅಸಾಧಾರಣವಾದುದನ್ನು ಪ್ರೇಕ್ಷಕರ ಮುಂದಿಡಲು ಪ್ರೇರೇಪಿಸುತ್ತಿದೆ' ಬರೆದುಕೊಂಡಿದ್ದಾರೆ. 

'ಭಾರತೀಯ ಸಿನಿಮಾದ ಭವ್ಯತೆಯನ್ನು ಸಾರಲಿರುವ ಅತ್ಯಂತ ನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ಬಿಡುಗಡೆಗೊಳಿಸಲು ನಾವು ಸಿದ್ಧರಾಗುತ್ತಿದ್ದೇವೆ, ಆಗಸ್ಟ್‌ ಕೊನೆಯಲ್ಲಿ ಬಿಡುವು ಮಾಡಿಕೊಳ್ಳಲು ಮರೆಯದಿರಿ. ಅವಿಸ್ಮರಣೀಯ ಅನುಭವ ನೀಡಿ ಪುಪಂಚದಾದ್ಯಂತ ಸದ್ದು ಮಾಡಲಿರುವ ಟ್ರೈಲರ್ ಗಾಗಿ ನಿರೀಕ್ಷಿಸಿ..! ಕ್ಷಣ ಕ್ಷಣದ ಅಪ್​ಡೇಟ್​ಗಾಗಿ ಸದಾ ನಮ್ಮೊಂದಿಗೆ ಜೊತೆಯಾಗಿ ಸಂಪರ್ಕದಲ್ಲಿರಿ. ಮರೆಯಲಾಗದ ಅನುಭವ ನಿಮ್ಮದಾಗಿಸಿಕೊಳ್ಳಲು ತಯಾರಾಗಿ. ಕುತೂಹಲಭರಿತ ರೋಮಾಂಚನಕಾರಿ ಪಯಣವನ್ನು ನಾವು ಮುಂದುವರಿಸೋಣ, ಚರಿತ್ರ ನಿರ್ಮಿಸೋಣ ಹಾಗೂ ಭಾರತೀಯ ಸಿನಿಮಾದ ಸಾಮರ್ಥ್ಯವನ್ನು ಸಂಭ್ರಮಿಸೋಣ' ಎಂದು ಹೊಂಬಾಳೆ ಫಿಲ್ಮ್ಸ್​ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

Salaar Teaser: ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಟೀಸರ್ ರಿಲೀಸ್: ರಗಡ್ ಲುಕ್‌ನಲ್ಲಿ ಡಾರ್ಲಿಂಗ್ ಪ್ರಭಾಸ್

ಆಗಸ್ಟ್ ತಿಂಗಳಲ್ಲಿ ಸಲಾರ್ ಟ್ರೈಲರ್ ರಿಲೀಸ್ ಆಗಲಿದೆ. ಸೆಪ್ಟಂಬರ್ ನಲ್ಲಿ ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಸೆಪ್ಟಂಬರ್ 28ಕ್ಕೆ ಸಲಾರ್ ಸಿನಿಮಾ ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಅಂದಹಾಗೆ ಸಲಾರ್ ಈಗಾಗಲೇ ರಿವೀಲ್ ಮಾಡಿದ ಹಾಗೆ ಎರಡು ಪಾರ್ಟ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಸದ್ಯ ಮೊದಲ ಭಾಗದ ಬಡುಗಡೆಯ ಬಗ್ಗೆ ಮಾತ್ರ ಹೊಂಬಾಳೆ ಫಿಲ್ಮ್ಸ್ ಬಹಿರಂಗ ಪಡಿಸಿದೆ. 2ನೇ ಭಾಗದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

ಹಿಂಸೆ, ನಾನ್ಸೆನ್ಸ್ ಸಿನಿಮಾ; ಪ್ರಭಾಸ್-ಪ್ರಶಾಂತ್ ನೀಲ್ 'ಸಲಾರ್' ವಿರುದ್ಧ ನಿರ್ದೇಶಕ ಆಗ್ನಿಹೋತ್ರಿ ಕಿಡಿ

ಸಲಾರ್ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ಸುಕುಮಾರನ್, ಕನ್ನಡದ ನಟರಾದ ದೇವರಾಜ್, ಪ್ರಮೋದ್, ಜಗಪತಿ ಬಾಬು ಸೇರಿದಂತೆ ಅನೇಕ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದಾರೆ. ಶ್ರುತಿ, ಆದ್ಯಾ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರವಿ ಬಸ್ರೂರ್ ಸಂಗೀತ ಸಿನಿಮಾಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಲಾರ್ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!
Sandalwood Films: ರಿಲೀಸ್'ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿ, ಬಳಿಕ ಸೋತ ಕನ್ನಡ ಸಿನಿಮಾಗಳು