ಚಡ್ಡಿ ಹಾಕ್ಕೊಂಡಿದ್ಯಾ, ಅಕ್ಕ ಪ್ಯಾಂಟ್ ಎಲ್ಲಿ, ಸಿನಿಮಾ ಮಾಡ್ತಿಲ್ವಾ? ರಮ್ಯಾ ಬೋಲ್ಡ್ ಫೋಟೋ ಸಖತ್ ಟ್ರೋಲ್

By Shruthi Krishna  |  First Published Jul 8, 2023, 10:55 AM IST

ಚಡ್ಡಿ ಹಾಕ್ಕೊಂಡಿದ್ಯಾ, ಅಕ್ಕ ಪ್ಯಾಂಟ್ ಎಲ್ಲಿ, ಸಿನಿಮಾ ಮಾಡ್ತಿಲ್ವಾ? ಬೋಲ್ಡ್ ಫೋಟೋ ಶೇರ್ ಮಾಡಿದ ನಟಿ ರಮ್ಯಾ ಸಖತ್ ಟ್ರೋಲ್ ಆಗುತ್ತಿದ್ದಾರೆ.   


ಸ್ಯಾಂಡಲ್‌ವುಡ್ ಕ್ವೀನ್, ಮೋಹಕತಾರೆ ಹೀಗೆ ಅನೇಕ ಹೆಸರುಗಳಿಂದನೇ ಖ್ಯಾತಿಗಳಿಸಿರುವ ನಟಿ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ವಾಪಾಸ್ ಆಗಿದ್ದಾರೆ. ನಟಿಯಾಗಿದ್ದ ರಮ್ಯಾ ಇದೀಗ ನಿರ್ಮಾಪಕಿಯಾಗಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಆಪಲ್ ಬಾಕ್ಸ್ ಎನ್ನುವ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ತನ್ನ ಬ್ಯಾನರ್‌ನಲ್ಲಿ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಅನೌನ್ಸ್ ಮಾಡಿ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ರಾಜ್ ಬಿ ಶೆಟ್ಟಿ ನಟಿಸಿರುವ ಈ ಸಿನಿಮಾ ರಿಲೀಸ್‌ಗೆ ಸಿದ್ಧವಾಗುತ್ತಿದೆ. ನಿರ್ಮಾಣ ಜೊತೆಗೆ ರಮ್ಯಾ ಉತ್ತರಕಾಂಡ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. 

ಸಿನಿಮಾಗಳನ್ನು ಅನೌನ್ಸ್ ಮಾಡಿ ಬ್ಯುಸಿಯಾಗಿದ್ದರೂ ರಮ್ಯಾ ಸದ್ಯ ವಿದೇಶದಲ್ಲಿದ್ದಾರೆ. ವಿದೇಶ ಸುತ್ತಾಡುವುದು ರಮ್ಯಾಗೆ ಹೊಸದೇನಲ್ಲ. ಆದರೆ ಈ ಬಾರಿ ಫಾರಿನ್ ಪ್ಲೈಟ್ ಹತ್ತಿದ್ದು ಚಿಕಿತ್ಸೆಗಾಗಿ. ರಮ್ಯಾ ತೂಕ ಇಳಿಸುವ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ ಎನ್ನುವ ಮಾಹಿತಿ ಇದೆ. ನೈಸರ್ಗಿಕ ಚಿಕಿತ್ಸೆಗಾಗಿ ರಮ್ಯಾ ಡೆನ್ಮಾರ್ಕ್‌‌ಗೆ ಹಾರಿದ್ದಾರೆ. ಅಲ್ಲಿಂದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ರಮ್ಯಾ ಶೇರ್ ಮಾಡಿರುವ ಫೋಟೋಗಳು ಟ್ರೋಲಿಗರ ಬಾಯಿಗೆ ಆಹಾರವಾಗಿದೆ. 

Tap to resize

Latest Videos

Ramya: ಕೇಸರಿ ಸೀರೆಯಲ್ಲಿ ಮನಮೋಹಕ ಲುಕ್‌ ಕೊಟ್ಟ ಮೋಹಕ ತಾರೆ ರಮ್ಯಾ!

ಮೋಹಕತಾರೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟಮೇಲೆ ರಮ್ಯಾ ಹೆಚ್ಚಾಗಿ ಸೀರೆ ಮತ್ತು ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಮತ್ತೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಬರಿ ಶರ್ಟ್‌ನಲ್ಲಿ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ರಮ್ಯಾ ಶೇರ್ ಮಾಡಿರುವ ಫೋಟೋಗಳಿಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಅಕ್ಕಾ ಪ್ಯಾಂಟ್ ಹಾಕೊಳಿ, ಮರ್ತಿದಿದ್ದಾರಾ ಅನ್ಸುತ್ತೆ' ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಚಡ್ಡಿ ಹಾಕಿದಿಯನಮ್ಮ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿದೇಶದಲ್ಲಿ ಇದ್ದರೆ ಎಷ್ಟು ಫ್ರಿ ಆಗಿ ಇರ್ತಾರೆ ಎಂದು ಎಂದು ಹೇಳುತ್ತಿದ್ದಾರೆ. ಮತ್ತಷ್ಟು ಮಂದಿ ಸಿನಿಮಾ ಯಾವಾಗ ಮಾಡ್ತಿರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ರಮ್ಯಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ರಮ್ಯಾ ಹೆಚ್ಚಾಗಿ ವಿದೇಶದಲ್ಲೇ ಇರುವುದು ನೋಡಿ ಮತ್ತೆ ಸಿನಿಮಾ ಮಾಡ್ತಾರೊ ಇಲ್ವೋ ಎನ್ನುವ ಮೂಡಿದೆ.

ಗುಲಾಬಿ ಹೂವನ್ನು ಮುತ್ತಿಕ್ಕುತಾ ದೇವರಲ್ಲಿ ನಟಿ ರಮ್ಯಾ ಇದನ್ನ ಕೇಳಿಕೊಂಡ್ರು!

ಉತ್ತರಕಾಂಡ ಸಿನಿಮಾ ಔಟ್?

ರಮ್ಯಾ ಉತ್ತರಕಾಂಡ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿದೆ. ತನ್ನದೇ ನಿರ್ಮಾಣ ಸಂಸ್ಥೆಯಿಂದ ಬರ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗೆ ರಮ್ಯಾ ನಾಯಕಿಯಾಗಿದ್ದರು. ಆದರೆ ಕೊನೆಕ್ಷಣದಲ್ಲಿ ನಟನೆಯಿಂದ ಹೊರಬಂದಿದ್ದರು. ಇದೀಗ ಉತ್ತರಕಾಂಡ ಸಿನಿಮಾದಲ್ಲೂ ರಮ್ಯಾ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸಿನಿಮಾ ಅನೌನ್ಸ್ ಆಗಿ ಅನೇಕ ತಿಂಗಳುಗಳೇ ಆಗಿದೆ. ಇನ್ನೂ ಈ ಸಿನಿಮಾದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ರಮ್ಯಾ ಎಕ್ಸಿಟ್ ಆಗಿರುವುದು ಪಕ್ಕ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ತೆಳ್ಳಗಾಗಿ ಬಂದು ಮತ್ತೆ ಸಿನಿಮಾದಲ್ಲಿ ನಟಿಸುತ್ತಾರಾ ಅಥವಾ ನಿರ್ಮಾಣದ ಕಡೆ ಹೆಚ್ಚು ಗಮನ ಕೊಡುತ್ತಾರಾ ಕಾದುನೋಡಬೇಕಿದೆ.  

click me!