ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿಲೀಸ್; ರಿಷಬ್ ಶೆಟ್ಟಿ ಅವತಾರಕ್ಕೆ ಉಘೇ ಎಂದ ಸಿನಿ ರಸಿಕರು!

Published : Nov 27, 2023, 12:44 PM ISTUpdated : Nov 30, 2023, 09:03 AM IST
ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿಲೀಸ್; ರಿಷಬ್ ಶೆಟ್ಟಿ ಅವತಾರಕ್ಕೆ ಉಘೇ ಎಂದ ಸಿನಿ ರಸಿಕರು!

ಸಾರಾಂಶ

ಬಹು ನಿರೀಕ್ಷಿತ ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿಲೀಸ್ ಆಗಿದೆ. ನೆಟ್ಟಿಗರ ಗಮನ ಸೆಳೆದ ಆರಂಭದ ಸಾಲುಗಳು.... 

ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ನಟನೆಯ, ಹೊಂಬಾಳೆ ಫಿಲಂಸ್‌ ನಿರ್ಮಾಣದ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ಫಸ್ಟ್ ಲುಕ್‌ ಇಂದು ಮಧ್ಯಾಹ್ನ 12.25ಕ್ಕೆ ಬಿಡುಗಡೆಯಾಗಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಹೊಂಬಾಳೆ ಫಿಲಂಸ್‌, ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸುವ ಪ್ರಯತ್ನವಿದು. ಹಿಂದೆಂದೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನಿರೀಕ್ಷಿಸಿ. ಇದು ಬರಿ ಬೆಳಕಲ್ಲ, ದರ್ಶನ’ ಎಂದು ಬರೆದುಕೊಂಡಿದ್ದರು.

ಫಸ್ಟ್‌ ಲುಕ್ ರಿವೀಲ್ ಆಗಿರುವ ವಿಡಿಯೋದ ಆರಂಭದಲ್ಲಿ ರಿಷಬ್ ಶೆಟ್ಟಿ ಬೆಳಕು ಹಿಡಿದು ಕಾಡಿನೊಳಗೆ ಓಡಿ ಹೋಗುತ್ತಾರೆ. ಆಗ ಇಂಗ್ಲಿಷ್‌ನಲ್ಲಿ "light.....Eveything is visibal in light. But this is just not light. Its a vision. Vision that choses what was, what is and what will be tomorrow..and you see' ಎಂದು ರಿಷಬ್ ಹೇಳುವುದನ್ನು ಕೇಳಬಹುದು. ಒಂದ ದಟ್ಟ ಗುಹೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಉಗ್ರ ಅವತಾರದಲ್ಲಿ ನಿಂತಿರುವ ರಿಷಬ್‌ನ ಈ ಫಸ್ಟ್‌ ಲುಕ್‌ನಲ್ಲಿ ನೋಡಬಹುದು. ಮೈ ತುಂಬಾ ರಕ್ತದ ಕಲೆಯನ್ನು ನೋಡಬಹುದು. ಮತ್ತೊಂದು ಅಶ್ಚರ್ಯ ಏನೆಂದರೆ ರಿಷಬ್ ಮುಖ ರಿವೀಲ್ ಆಗುವ ಸಮಯದಲ್ಲಿ ಅವರ ಹಿಂದೆ ಶಿವನ ತ್ರಿಶೂಲ ಕಾಣಿಸುತ್ತದೆ

'ಇದು ಬರಿ ಬೆಳಕಲ್ಲ, ದರ್ಶನ': Kantara 2 ಫಸ್ಟ್ ಲುಕ್​ ರಿಲೀಸ್​​ ಡೇಟ್ ಅನೌನ್ಸ್ ಮಾಡಿದ ರಿಷಬ್!

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಈ ಹಿಂದೆ ಸೂಪರ್ ಹಿಟ್ ಆದ ಕಾಂತಾ ಸಿನಿಮಾ ಮುಹೂರ್ತವನ್ನು ಕೂಡ ಇದೇ ಕೆರಾಡಿಯ ಆನೆಗುಡ್ಡ ದೇವಸ್ಥಾನದಲ್ಲಿ ನೆರವೇರಿತ್ತು.

Kantara ಪ್ರೀಕ್ವೆಲ್ ಶೂಟಿಂಗ್ ಬಗ್ಗೆ ರಿಷಬ್‌ಗೆ ಟೆನ್ಷನ್: ಮಂಗಳೂರಿನಲ್ಲಿ ಮಾಡೋಕಾಗ್ತಿಲ್ಲಂತೆ 'ಕಾಂತಾರ 2' ಚಿತ್ರೀಕರಣ!

ಕಾಂತಾರ ಸೀಕ್ವೆಲ್‌ಗಾಗಿ ಅದ್ಭುತವಾಗಿ ಕಥೆಯನ್ನು ಎಣೆದಿರುವ ನಟ ರಿಷಬ್ ಶೆಟ್ಟಿ ಜನವೆಂವರ್ 27 ಸಖತ್ ಸ್ಪೆಷಲ್ ದಿನ. ಫಟ್ ಲುಕ್ ರಿಲೀಸ್ ಮಾಡಿ ಡಿಸೆಂಬರ್ 2ನೇ ವಾರ ಶೂಟಿಂಗ್ ಆರಂಭಸಲಿದ್ದಾರೆ. ಇದು ಕಾಂತಾರ ಸೀಕ್ವೆಲ್ ಆಗಿರುವ ಕಾರಣ ಇದನ್ನು ಕಾಂತಾರ 1 ಎಂದು ಕರೆದಿದ್ದಾರೆ ರಿಷಬ್ ಶೆಟ್ಟಿ. ಈ ವರ್ಷ ಕುಟುಂಬದ ಜೊತೆ ರಿಷಬ್ ಶೆಟ್ಟಿ ದೀಪಾವಳಿ ಆಚರಿಸಿರುವ ಫೋಟೋ ಅಪ್ಲೋಡ್ ಮಾಡಿದ್ದರು ಆಗ ರಿಷಬ್ ಕಾಣಿಸಿಕೊಂಡ ಲುಕ್ ವೈರಲ್ ಅಗಿತ್ತು. ಲಾಂಗ್ ಹೇರ್‌ ನೋಡಿ ಲುಕ್ ರಿವೀಲ್ ಆಯ್ತು ಅಂದುಬಿಟ್ಟರು ಫ್ಯಾನ್ಸ್. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?