ಮಂಗಳೂರು ಕನ್ನಡ ಕಲಿಯುತ್ತಿದ್ದೇನೆ; 'ಕಾಂತಾರ' ಚಿತ್ರದ ನಾಯಕಿ ಸಪ್ತಮಿ ಗೌಡ ಸಂದರ್ಶನ

By Kannadaprabha NewsFirst Published Sep 3, 2021, 9:50 AM IST
Highlights

ಸಿಕ್ಕಾಪಟ್ಟೆಮಾತು, ಹೊಸ ಸಾಹಸ ಅಂದ್ರೆ ಸದಾ ತಯಾರು, ಸದ್ಯ ರಿಷಬ್‌ ಶೆಟ್ಟಿಅವರ ‘ಕಾಂತಾರ’ ಚಿತ್ರದ ಹೀರೋಯಿನ್‌. ಈಕೆ ಸಪ್ತಮಿ ಗೌಡ. ಈ ಹಿಂದೆ ನಟಿಸಿದ್ದ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ನ ಗಿರಿಜಾ ಪಾತ್ರದಲ್ಲಿ ಗಮನಸೆಳೆದವರು. ಮಾತಿನ ನಡುವೆ ಅರಿವಿಲ್ಲದೇ ಇಣುಕೋ ಮಂಗ್ಳೂರು ಪದಗಳು ಇವ್ರು ಮಂಗಳೂರು ಕನ್ನಡ ಕಲೀತಿರೋದಕ್ಕೆ ಸಾಕ್ಷಿ.

ಪ್ರಿಯಾ ಕೆರ್ವಾಶೆ

ನಿಮ್ಮ ಇನ್‌ಸ್ಟಾಫೋಟೋ ನೋಡಿ ರಿಷಬ್‌ ಶೆಟ್ಟಿಅವರೇ ಫೋನ್‌ ಮಾಡಿದ್ರಂತೆ?

ಹೌದು. ಆಗ ನಾನು ಹೊರಗೆಲ್ಲೋ ಇದ್ದೆ. ಕೂಲಾಗಿ ನಾನು ರಿಷಬ್‌ ಶೆಟ್ಟಿಅಂದರು. ಅವರ ನಿರ್ದೇಶನದ ಸಿನಿಮಾಗಳನ್ನು ಇಷ್ಟಪಟ್ಟು ನೋಡಿದವ್ಳು ನಾನು. ಅವರೇ ಕಾಲ್‌ ಮಾಡಿ ಆಫೀಸಿಗೆ ಕರೆದಾಗ ಬಹಳ ಕುತೂಹಲದಿಂದಿದ್ದೆ. ಶುರುವಿಗೆ ಕತೆ, ನನ್ನ ಪಾತ್ರದ ಬಗ್ಗೆ ಹೇಳಿದಾಗ, ಅರೆ, ಇದೇ ಪಾತ್ರಕ್ಕಲ್ವಾ ನಾನು ಹುಡುಕ್ತಾ ಇದ್ದಿದ್ದು ಅಂತನಿಸಿತು. ಜೊತೆಗೆ ಹೊಂಬಾಳೆ ಫಿಲಂಸ್‌ನಂಥಾ ಬ್ಯಾನರ್‌ನ ಸಿನಿಮಾ ... ಎಕ್ಸೈಟ್‌ಮೆಂಟ್‌ ಹೆಚ್ಚಾಗ್ತಾನೇ ಹೋಯ್ತು.

ಆನೆಗುಡ್ಡೆಯಲ್ಲಿ 'ಕಾಂತಾರ' ಮುಹೂರ್ತ; ರಿಷಬ್‌ ಶೆಟ್ಟಿಗೆ ಸಪ್ತಮಿ ಗೌಡ ಜೋಡಿ!

ಮೊದಲ ಸಿನಿಮಾದ ಪಾತ್ರಕ್ಕೂ ಈ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸ ಇದ್ದಂತಿದೆ?

ಹೌದು. ಇಂಥದ್ದೊಂದು ವರ್ಸಟೈಲ್‌ ಪಾತ್ರಕ್ಕಾಗಿ ಕಲಾವಿದರು ಕಾಯ್ತಾ ಇರ್ತಾರೆ. ಈಗ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಬಬ್ಲಿ ಬಬ್ಲಿ ಹೀರೋಯಿನ್‌ ಆಗೋದು ಕಾಮನ್‌. ಇಂಥಾ ಚಿತ್ರಗಳಲ್ಲಿ ಪರ್ಫಾರ್ಮರ್‌ ಆಗಿ ಪ್ರತಿಭೆ ತೋರಿಸೋದೇ ರಿಯಲ್‌ ಚಾಲೆಂಜ್‌. ಏನೇ ಹೊಸತು ಕಂಡರೂ ಕುತೂಹಲ ತೋರಿಸಿ ಕಲಿಯೋ ಸಾಹಸಿ ನಾನು. ಈ ಪಾತ್ರ ಬಹಳ ಇಷ್ಟಆಗಿದೆ.

ಮಂಗಳೂರು ಕನ್ನಡ ಕಲೀತಿದ್ದೀರಂತೆ?

ಹೌದು. ನನ್ನ ಅಪ್ಪ ಕನಕಪುರದವ್ರು. ಅಮ್ಮ ಮಂಡ್ಯ ಸಮೀಪದ ಮಳವಳ್ಳಿಯವ್ರು. ನಾನು ಹುಟ್ಟಿಬೆಳೆದಿದ್ದೆಲ್ಲ ಬೆಂಗಳೂರಲ್ಲೇ. ಅಪ್ಪ ರಿಟೈರ್‌್ಡ ಪೊಲೀಸ್‌ ಆಫೀಸರ್‌ ಎಸ್‌.ಕೆ. ಉಮೇಶ್‌ ಅಂತ. ಈಗ ಮಂಗಳೂರು ಭಾಷೆಯ ವೀಡಿಯೋಗಳನ್ನು ನೋಡೋದು, ಆ ಥರ ಮಾತಾಡೋಕೆ ಟ್ರೈ ಮಾಡೋದು ಎಲ್ಲಾ ಮಾಡ್ತಿದ್ದೀನಿ. ಎಷ್ಟೇ ಸರ್ಕಸ್‌ ಮಾಡಿದ್ರೂ ರಿಷಬ್‌ ಥರ ಪಕ್ಕಾ ಮಂಗ್ಳೂರು ಉಚ್ಛಾರಣೆ ಮಾಡೋಕೆ ಕಷ್ಟ.

'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದಲ್ಲಿ ಲವರ್‌ ಬಗ್ಗೆ ಮಾಸ್‌ ಡೈಲಾಗ್‌ ಒಡೆದ ನಟಿ ಈಕೆ!

ನರ್ವಸ್‌ ಆಗುತ್ತಾ?

ಹೂಂ ಕೆಲವೊಮ್ಮೆ. ಅದು ನನ್ನ ಎಕ್ಸ್‌ಪ್ರೆಶನ್‌ನಲ್ಲಿ ಗೊತ್ತಾಗುತ್ತೆ. ಆಗೆಲ್ಲ ರಿಷಬ್‌ ಅವ್ರು, ‘ಜಾಸ್ತಿ ತಲೆ ಕೆಡಿಸ್ಕೊಳ್ಬೇಡ. ಆರಾಮವಾಗಿ ಕಲಿ, ಏನಾಗಲ್ಲ’ ಅಂತಾರೆ. ಆಮೇಲೆ ಕೂಲ್‌ ಆಗ್ತೀನಿ. ಉಳಿದಂತೆ ನಾನು ಯಾವ್ದಕ್ಕೂ ತಲೆ ಕೆಡಿಸ್ಕೊಳ್ಳೋ ಸ್ವಭಾವದವಳಲ್ಲ. ಖುಷಿ ಖುಷಿಯಾಗಿರೋದು, ಜೊತೆಗಿರೋರನ್ನೂ ಖುಷಿಯಾಗಿಡೋದು ನನ್ನ ಖಯಾಲಿ. ಸೆಟ್‌ನಲ್ಲಿರುವ ಪ್ರತಿಯೊಬ್ಬರನ್ನೂ ಮಾತಾಡಿಸ್ತೀನಿ.

ಅಮ್ಮನ ಹತ್ರ ಬೈಸಿಕೊಳ್ತೀರಾ?

ಅಮ್ಮ ಸಖತ್‌ ಫ್ರೆಂಡ್ಲಿ. ಆದ್ರೆ ನಾನು ಸುಳ್ಳು ಹೇಳಿದ್ರೆ ತಕ್ಷಣ ಕಂಡುಹಿಡಿದುಬಿಡ್ತಾರೆ. ಇಲ್ಲಾಂದ್ರೆ, ‘ಚಿಕ್ಕ ಮಕ್ಕಳ ಥರ ಆಡ್ತಿರ್ತೀಯಾ, ನಿನಗಿಂತ ನಿನ್ನ ತಂಗಿನೇ ಮೆಚ್ಯೂರ್‌್ಡ ಆಗಿರ್ತಾಳೆ, ಇಪ್ಪತ್ತೈದು ವರ್ಷ ಅಂದ್ರೆ ಯಾರೂ ನಂಬಲ್ಲ’ ಅಂತಿರುತ್ತಾರೆ. ನಂಗೆ ಟ್ರೆಕ್ಕಿಂಗ್‌, ಸಾಹಸ ಬಹಳ ಇಷ್ಟ. ನಾನೂ ಅಪ್ಪ ಸಾಕಷ್ಟುಟ್ರೆಕ್ಕಿಂಗ್‌ ಹೋಗ್ತಿರ್ತೀವಿ. ಇಬ್ಬರೇ ಹುಡುಗೀರು ಗ್ರೀಸ್‌ ದೇಶ ಸುತ್ತಿ ಬಂದಿದ್ದೀವಿ.

click me!