Rishab Shetty Birthday: ಕಾಂತಾರ ಸ್ಟಾರ್‌ಗೆ ಹೊಂಬಾಳೆ ಫಿಲ್ಮ್ಸ್ ವಿಶ್: ಅಭಿಮಾನಿಗಳಿಗೆ ಬೇಸರ

Published : Jul 07, 2023, 03:35 PM IST
Rishab Shetty Birthday: ಕಾಂತಾರ ಸ್ಟಾರ್‌ಗೆ ಹೊಂಬಾಳೆ ಫಿಲ್ಮ್ಸ್ ವಿಶ್: ಅಭಿಮಾನಿಗಳಿಗೆ ಬೇಸರ

ಸಾರಾಂಶ

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ ಹೊಂಬಾಳೆ ಫಿಲ್ಮ್ಸ್ ಶುಭಾಶಯ ತಿಳಿಸಿದ್ದಾರೆ. 

ಕನ್ನಡದ ಸ್ಟಾರ್ ರಿಷಬ್ ಶೆಟ್ಟಿ ಅವರಿಗೆ ಇಂದು (ಜುಲೈ 6) ಹುಟ್ಟುಹಬ್ಬದ ಸಂಭ್ರಮ. ಕಾಂತಾರ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಿಷಬ್ ಶೆಟ್ಟಿ ಅವರಿಗೆ ಈ ವರ್ಷದ ಹುಟ್ಟುಹಬ್ಬ ತುಂಬಾ ವಿಶೇಷವಾಗಿದೆ. ಕಾಂತಾರ ಬ್ಲಾಕ್‌ಬಸ್ಟರ್ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಮೊದಲ ಬಾರಿಗೆ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ. ಹೌದು ಇಂದು ರಿಷಬ್ ಶೆಟ್ಟಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತಿದ್ದಾರೆ. 

ಕಾಂತಾರ ಸ್ಟಾರ್ ಹುಟ್ಟುಹಬ್ಬಕ್ಕೆ ಅನೇಕ ಗಣ್ಯರು ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಸಹ ಶುಭಾಶಯ ತಿಳಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೂಡ ರಿಷಬ್ ಶೆಟ್ಟಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಆದರೆ ಹೊಂಬಾಳೆ ಫಿಲ್ಮ್ಸ್ ವಿಶ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹೌದು ರಿಷಬ್ ಹುಟ್ಟುಹಬ್ಬದ ದಿನ ಕಾಂತಾರ-2 ಬಗ್ಗೆ ಅಪ್‌ಡೇಟ್ ಸಿಗಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಕೇವಲ ವಿಶ್ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್ ನಿರಾಸೆ ಮೂಡಿಸಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 

‘ಪ್ರತಿಭಾವಂತ ಮತ್ತು ವಿನಮ್ರ ವ್ಯಕ್ತಿಯ ರಿಷಬ್​ ಶೆಟ್ಟಿ ಅವರಿಗೆ ಜನ್ಮದಿನದ ಶುಭಾಶಯ. ನಟನಾಗಿ ಮತ್ತು ನಿರ್ದೇಶಕರಾಗಿ ನಿಮ್ಮಲ್ಲಿರುವ ಕೌಶಲ್ಯ ನಿಜವಾಗಿಯೂ ಸ್ಫೂರ್ತಿದಾಯಕ. ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಕಲಾತ್ಮಕ ಯಾತ್ರೆಯು ಸದಾ ಎಲ್ಲರನ್ನೂ ಬೆರಗುಗೊಳಿಸಲಿ. ಅದ್ಭತ ಸಮಯ ನಿಮ್ಮದಾಗಲಿ. ನಿರಂತರ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ’ ಎಂದು ಹೊಂಬಾಳೆ ಟ್ವೀಟ್ ಮಾಡಿದೆ. ಕಾಂತಾರ ಸಿನಿಮಾದ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.

ನಿಮ್ಗಿಂತ ಮಮ್ಮಿನೇ ಸೂಪರ್; ಕಾಂತಾರ ಲೀಲಾ ರಿಯಲ್ ತಾಯಿ ಇವ್ರೆ!

ಆಗಸ್ಟ್‌ನಲ್ಲಿ ಮುಹೂರ್ತ?

ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದ ರಿಷಬ್ ಶೆಟ್ಟಿ ಇದೀಗ ಪಾರ್ಟ್-2 ಮುಹೂರ್ತಕ್ಕೆ ದಿನಾಂಕ ಫಿಕ್ಸ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಕಾಂತಾರ ಪ್ರಿಕ್ವೆಲ್ ಮುಹೂರ್ತ ಆಗಸ್ಟ್ ತಿಂಗಳಲ್ಲಿ ನಡೆಯುತ್ತಿದೆಯಂತೆ. ಆಗಸ್ಟ್ 27ಕ್ಕೆ ಮುಹೂರ್ತಕ್ಕೆ ದಿನಾಂಕ ನಿಗಧಿಯಾಗಿದೆ ಎನ್ನಲಾಗಿದೆ. ಆ ಮೂಲಕ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 

ಕಾಂತಾರ 2 ಮುಹೂರ್ತ ಪಾರ್ಟ್-1 ಮುಹೂರ್ತ ನಡೆದ ಜಾಗದಲ್ಲೇ ನೆರವೇರಲಿದೆ ಎನ್ನಲಾಗಿದೆ. ಅಂದಹಾಗೆ ಪಾರ್ಟ್-1 ಮುಹೂರ್ತ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನೆರವೇರಿತ್ತು. ಪಾರ್ಟ್-2 ಮುಹೂರ್ತ ಕೂಡ ಅದೇ ಜಾಗದಲ್ಲಿ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ವಿಸೇಷ ಎಂದರೆ ಮೊದಲ ಭಾಗದ ಮುಹೂರ್ತ ಕೂಡ ಆಗಸ್ಟ್ ತಿಂಗಳಲ್ಲೇ ನೆರವೇರಿತ್ತು. ಇದೀಗ ಪ್ರಿಕ್ವೆಲ್ ಮುಹೂರ್ತವನ್ನು ಸಹ ಅದೇ ಜಾಗದಲ್ಲಿ, ಅದೇ ತಿಂಗಳಲ್ಲಿ ಮಾಡುತ್ತಿರುವುದು ವಿಶೇಷವಾಗಿದೆ. 

ಕಲರಿಪಯಟ್ಟು, ಕುದುರೆ ಸವಾರಿ ಕಲಿಕೆಯಲ್ಲಿ ರಿಷಬ್‌ ಶೆಟ್ರು: ಯಾಕೆ ಗೊತ್ತಾ ?

ಮೊದಲ ಭಾಗಕ್ಕಿಂತ 2ನೇ ಭಾಗವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಸಿನಿಮಾತಂಡ ಸಿದ್ಧತೆ ನಡೆಸಿದೆ. ಪಾರ್ಟ್-2 ಸೆಟ್ಟೇರುವ ಮೊದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾಗಿ ಸಿನಿಮಾದ ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ಕಾಂತಾರ-2 ನಲ್ಲಿ ರಿಷಬ್ ಯಾವ ವಿಚಾರವನ್ನು ಹೇಳಲಿದ್ದಾರೆ, ಯಾರೆಲ್ಲ ಕಲಾವಿದರು ನಟಿಸುತ್ತಾರೆ ಎನ್ನುವುದು ಸದ್ಯದಲ್ಲೇ ಬಹಿರಂಗವಾಗಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!
ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ: ನಟ ಕಿಶೋರ್‌ ಆಕ್ರೋಶ!