ನಟಿ ಮಾನ್ವಿತಾ ಕಾಮತ್ ತಾಯಿ ನಿಧನ

Published : Apr 15, 2023, 01:52 PM ISTUpdated : Apr 15, 2023, 01:53 PM IST
ನಟಿ ಮಾನ್ವಿತಾ ಕಾಮತ್ ತಾಯಿ ನಿಧನ

ಸಾರಾಂಶ

ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ತಾಯಿ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳುತ್ತಿದ್ದ ಮಾನ್ವಿತಾ ತಾಯಿ ಸುಜಾತಾ ಅವರು ಕಳೆದ ಕೆಲವು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  

ಸ್ಯಾಂಡಲ್ ವುಡ್ ನಟಿ ಟಗರು ಪುಟ್ಟಿ ಎಂದೇ ಖ್ಯಾತಿ ಗಳಿಸಿರುವ ಮಾನ್ವಿತಾ ಕಾಮತ್ ತಾಯಿ ಸುಜಾತಾ ಕಾಮತ್ ನಿಧನ ಹೊಂದಿದ್ದಾರೆ. ಅಮ್ಮನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ ಮಾನ್ವಿತಾ. ಈ ಬಗ್ಗೆ ನಟಿ  ಸಾಮಾಜಿಕ ಜಾಲತಾಣದಲ್ಲಿ 'ಅವರು ಬಿಟ್ಟುಹೋದರು' ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ಸುಜಾತಾ ಕಾಮತ್ ಅನೇಕ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಜಾತಾ ಚಿಕಿತ್ಸೆ ಫಲಕಾರಿಯಾಗದೆ ಇಂದು (ಏಪ್ರಿಲ್ 15) ಕೊನೆಯುಸಿರೆಳೆದಿದ್ದಾರೆ. 

ಮಾನ್ವಿತಾ ತಾಯಿ ನಿಧನಕ್ಕೆ ಅಭಿಮಾನಿಗಳು, ಸ್ನೇಹಿತರು ಮತ್ತು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಮಾನ್ವಿತಾ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಮಾನ್ವಿತಾ ಅವರ ತಾಯಿ ಸುಜಾತಾ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಿಡ್ನಿ ಕಸಿ ಮಾಡಿಸಲಾಗಿತ್ತು ಎನ್ನಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸುಜಾತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ತಾಯಿಯನ್ನು ಉಳಿಸಿಕೊಳ್ಳಲು ಮಾನ್ವಿತಾ ತುಂಬಾ ಕಷ್ಟಪಟ್ಟಿದ್ದಾರೆ.  ಆದರೆ ಕೊನೆಗೂ ಅವರ ಕಷ್ಟಕ್ಕೆ ಫಲ ಸಿಗದಂತೆ ಆಗಿದೆ. 

ಮಾನ್ವಿತಾ ತಾಯಿಗೆ ಸೋನು ಸೂದ್ ಸಹಾಯ

ಸಾಮಾಜಿಕ ಕೆಲಸಗಳ ಮೂಲಕವೇ ರಿಯಲ್ ಹೀರೋ ಆಗಿರುವ ನಟ ಸೋನು ಸೂದ್ ನಟಿ ಮಾನ್ವಿತಾ ಅವರ ತಾಯಿಯ ಚಿಕಿತ್ಸೆಗೆ ಸಹಾಯ ಮಾಡಿದ್ದರು. ಈ ಬಗ್ಗೆ ಸ್ವತಃ ಮಾನ್ವಿತಾ ಅವರೇ ಬಹಿರಂಗ ಪಡಿಸಿದ್ದರು. ಸೋನು ಸೂದ್ ಅವರಿಗೆ ಧನ್ಯವಾದ ತಿಳಿಸಿದ್ದರು. ‘ಈಗತಾನೇ ಸೋನು ಸೂದ್ ಅವರ ಜತೆ ಮಾತನಾಡಿದೆ. ನನ್ನ ತಾಯಿಗೆ ಅವರು ಮಾಡಿದ ಸಹಾಯಕ್ಕೆ ಧನ್ಯವಾದ ಹೇಳಿದೆ. ನೀವು ನಿಜವಾದ ಹೀರೋ ಸರ್. ಎಲ್ಲದಕ್ಕೂ ಧನ್ಯವಾದ. ನಮ್ಮ ಸಂಕಷ್ಟದಲ್ಲಿ ಏಂಜಲ್ ರೀತಿ ಬಂದಿರಿ. ನಿಮ್ಮಿಂದಾಗಿ ನನ್ನ ತಾಯಿ ಇಂದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮಾನ್ವಿತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. 

ಮಾನ್ವಿತಾ ಸಿನಿಮಾ ಜರ್ನಿ 

2015ರಲ್ಲಿ ಕೆಂಡಸಂಪಿಗೆ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಾನ್ವಿತಾ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಗರು ಸಿನಿಮಾ ಮಾನ್ವಿತಾ ಅವರಿಗೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿತ್ತು. ಕೊನೆಯದಾಗಿ ಮಾನ್ವಿತಾ ಶಿವ 143 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಕನ್ನಡ ಜೊತೆಗೆ ಮಾನ್ವಿತಾ ಮರಾಠಿ ಮತ್ತು ತೆಲುಗು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ನಡುವೆ ತಾಯಿಯನ್ನು ಕಳೆದುಕೊಂಡಿರುವುದು ತುಂಬಾ ದುಃಖದ ವಿಚಾರವಾಗಿದೆ.    


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್