ಸಮಂತಾ ಹೇಳಿದ್ರು 'ಐ ಲವ್ ಹಿಮ್, ಲವ್ ಹಿಮ್...', ನಟ ರಾಜ್‌ಕುಮಾರ್ ರಾವ್ ಬಗ್ಗೆ ಹೀಗ್ಯಾಕೆ ಹೇಳ್ಬಿಟ್ರು?

By Shriram Bhat  |  First Published Apr 26, 2024, 2:57 PM IST

ನಟಿ ಸಮಂತಾ ಅವರು ಸದ್ಯ ತಮ್ಮ ಖಾಯಿಲೆ ಕಾರಣಕ್ಕೆ ಸಿನಿಮಾ ನಟನೆಯಿಂದ ದೂರ ಉಳಿದಿದ್ದರೂ ಹಲವಾರು ಸಂದರ್ಶನಗಳಲ್ಲಿ ಭಾಗವಹಿಸುತ್ತ ಇರುತ್ತಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ನಟಿ ಸಮಂತಾ 'ನನಗೆ ಸದ್ಯ ಸೌತ್ ಮೂಲದ...


ನಟಿ ಸಮಂತಾ ರುತ್ ಪ್ರಭು ( Samantha Ruth Prabhu) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ರಾಜ್‌ಕುಮಾರ್ ರಾವ್ (Rajkummar Rao) ಹೆಸರನ್ನು ಹೇಳಿದ್ದಾರೆ. ಸಂದರ್ಶಕರು 'ಸದ್ಯ ಸೌತ್ ಕಡೆಯಿಂದ ಬಂದು ಬಾಲಿವುಡ್‌ನಲ್ಲಿ ಮಿಂಚು ಹರಿಸುತ್ತಿರುವ ಕಲಾವಿದರಲ್ಲಿ ನಿಮಗೆ ಇಷ್ಟವಾಗಿರುವವರು ಯಾರು?' ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಟಿ ಸಮಂತಾ 'ಐ ಲವ್ ರಾಜ್‌ಕುಮಾರ್ ರಾವ್, ಲವ್ ಹಿಮ್..' ಎಂದಿದ್ದಾರೆ.  ನಟ ರಾಜ್‌ಕುಮಾರ್ ಅವರು ಸದ್ಯ ಬಾಲಿವುಡ್ ಸಿನಿರಂಗದಲ್ಲಿ 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಮುಂಚೂಣಿಯಲ್ಲಿದ್ದಾರೆ. 

ರೂಹಿ, ನ್ಯೂಟನ್, ಸ್ತ್ರೀ, ಸ್ತ್ರೀ 2, ಶಾದಿ ಮೇ ಜರೂರ್ ಆನಾ, ಬಧಾಯ್‌ ದೋ, ಶ್ರೀ, ಭೀದ್, ಟ್ರಾಪ್ಡ್‌, ಛಲ್ಲಾಂಗ್ ಹೀಗೆ ಸಾಲುಸಾಲು ಸಿನಿಮಾಗಳಲ್ಲಿ ನಟಿಸಿರುವ ನಟ ರಾಜ್‌ಕುಮಾರ್ ರಾವ್‌ ತಮ್ಮ ಅಮೋಘ ನಟನೆಯಂದ ಇಡೀ ಭಾರತೀಯರ ಮನಸ್ಸನ್ನು ಗೆದ್ದಿದ್ದಾರೆ. ಭಾರತದ ಆಚೆಗೂ ಕೂಡ ನಟ ರಾಜ್‌ಕುಮಾರ್ ಕೀರ್ತಿ ಪತಾಕೆ ಹಾರಾಡುತ್ತಿದೆ ಎಂದರೆ ಅಚ್ಚರಿಯೇನಿಲ್ಲ. ಏಕೆಂದರೆ, ಇಂದು ಬಾಲಿವುಡ್‌ ಹಾಗೂ ಸೌತ್ ಸಿನಿಮಾಗಳನ್ನು ಜಗತ್ತಿನ ಹಲವು ಕಡೆಗಳಲ್ಲಿ ಜನರು ನೋಡುತ್ತಾರೆ. ಹೀಗಾಗಿ ಸಹಜವಾಗಿಯೇ ನಟ ರಾಜ್‌ಕುಮಾರ್ ಅವರನ್ನು ಪ್ಯಾನ್ ಇಂಡಿಯಾ ನಟ ಎನ್ನಲಾಗಿದೆ.

Tap to resize

Latest Videos

ಡಾ ರಾಜ್‌ ನನಗೆ ಜಡೆ ಹಾಕಿಕೊಟ್ಟಿದ್ದರು, ಹುಬ್ಬಿನ ಗೆರೆ ತೀಡಿದ್ದರು;ಹಿಂಗಂದ್ರು ನಟಿ ಜಯಮಾಲಾ!

ನಟಿ ಸಮಂತಾ ಅವರು ಸದ್ಯ ತಮ್ಮ ಖಾಯಿಲೆ ಕಾರಣಕ್ಕೆ ಸಿನಿಮಾ ನಟನೆಯಿಂದ ದೂರ ಉಳಿದಿದ್ದರೂ ಹಲವಾರು ಸಂದರ್ಶನಗಳಲ್ಲಿ ಭಾಗವಹಿಸುತ್ತ ಇರುತ್ತಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ನಟಿ ಸಮಂತಾ 'ನನಗೆ ಸದ್ಯ ಸೌತ್ ಮೂಲದ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿರುವ ನಟ ರಾಜ್‌ಕುಮಾರ್ ಅವರು ತಮ್ಮ ನಟನೆಯ ಮೂಲಕ ತುಂಬಾ ಇಷ್ಟವಾಗಿದ್ದಾರೆ. ಐ ಲವ್ ಹಿಮ್, ಲವ್ ಹಿಮ್..' ಎಂದಿದ್ದಾರೆ. ನಟಿ ಸಮಂತಾ ಯಾರಿಗೆ ಗೊತ್ತಿಲ್ಲ? ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಸಖತ್ ಮಿಂಚಿರುವ ನಟಿ ಸಮಂತಾ ಇಂಟರ್‌ನ್ಯಾಷನಲ್ ಪಪ್ಯುಲಾರಿಟಿ ಹೊಂದಿದ್ದಾರೆ. 

ರಾಮಾಯಣ ಮಾಡ್ಬೇಕು, ರಾಮನಾಗಿ ನಾನು, ಸೀತೆಯಾಗಿ ನೀನು ನಟಿಸ್ಬೇಕು ಎಂದಿದ್ರಂತೆ ಡಾ ರಾಜ್‌ಕುಮಾರ್!

ನಟ ರಾಜ್‌ಕುಮಾರ್ ಅವರು ಹಿಂದಿ ಸಿನಿಮಾಗಳಲ್ಲಿ ಬಹುಮುಖ್ಯ ಪಾತ್ರಗಳಲ್ಲಿ ನಟಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ತಮ್ಮ ಅಮೋಘ ಅಭಿನಯದಿಂದ ಸಾಕಷ್ಟು ಮೆಚ್ಚುಗೆ ಗಳಿಸಿರುವ ರಾಜ್‌ಕುಮಾರ್ ರಾವ್, ಬಹಳಷ್ಟು ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ನಟಿ ಸಮಂತಾ ಆಡಿರುವ ಮಾತುಗಳಿಂದ ಸಹಜವಾಗಿಯೇ ರಾಜ್‌ಕುಮಾರ್‌ ರಾವ್ ಅವರಿಗೆ ಇನ್ನಷ್ಟು ಪ್ಯಾನ್ಸ್‌ ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ ಎನ್ನಬಹುದು. ಒಟ್ಟಿನಲ್ಲಿ, ನಟಿ ಸಮಂತಾ 
ಅವರು ನಟ ರಾಜ್‌ಕುಮಾರ್ ರಾವ್‌ ಬಗ್ಗೆ ಆಡಿರುವ ಮೆಚ್ಚುಗೆಯ ಮಾತುಗಳು ಸಖತ್ ವೈರಲ್ ಆಗುತ್ತಿವೆ. 

ಸಮರ್ಜಿತ್ ಲಂಕೇಶ್ 'ಗೌರಿ' ಪ್ರೀ ಟೀಸರ್ ಬಿಡುಗಡೆ ಮಾಡಿದ ಅನಿಲ್ ಕುಂಬ್ಳೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್

click me!