ನಾನು ನಂದಿನಿ ಖ್ಯಾತಿಯ ವಿಕ್ರಮ್ ಅವರು ಶಿವರಾಜ್ ಕುಮಾರ್ ಅವರ ಮುಂಬರುವ ಘೋಸ್ಟ್ ಚಿತ್ರದ ಪ್ರೋಮೋಗೆ ಸಕತ್ ಎಂಟ್ರಿ ಕೊಟ್ಟಿದ್ದು, ಫ್ಯಾನ್ ಫಿದಾ ಆಗಿದ್ದಾರೆ.
‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ..’ ಹಾಡಂತೂ ಸೃಷ್ಟಿಸ್ತಿರೋ ಹವಾ ಅಷ್ಟಿಷ್ಟಲ್ಲ. ವಿಕಿಪೀಡಿಯಾ ಖ್ಯಾತಿಯ ವಿಕ್ರಮ್ ಅಲಿಯಾಸ್ ವಿಕ್ಕಿ ಅವರು ಮಾಡಿರುವ ಈ ಹಾಡಿನ ಮೋಡಿಯಂತೂ ಇನ್ನೂ ನಿಲ್ಲುತ್ತಲೇ ಇಲ್ಲ. ಇದೀಗ ವಿಕ್ಕಿ ಹಾಗೂ ಅವರ ರೀಲ್ಸ್ ಪಾರ್ಟನಲ್ ಅಮಿತ್ ಸುಪಾರಿ ಕೊಟ್ಟು ಇಬ್ಬರನ್ನು ಎತ್ತಾಕಿ ನಟ ಶಿವರಾಜ್ ಕುಮಾರ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಆರಂಭದಲ್ಲಿ ವಿಕ್ಕಿ ಮತ್ತು ಅವರ ರೀಲ್ಸ್ ಪಾರ್ಟನಲ್ ಅಮಿತ್, ನಿರ್ದೇಶಕ ಶ್ರೀನಿ ಅವರಿಗೆ ಆವಾಜ್ ಹಾಕುವ ಮೂಲಕ ವಿಡಿಯೋ ಶುರುವಾಗುತ್ತದೆ. ಪಾನೀಪುರಿಯಲ್ಲಿ ವಿಸ್ಕಿ ಹಾಕಿಕೊಟ್ಟು ನಮ್ಮನ್ನೇ ಯಾವಾರ್ಸ್ತಿಯಾ ಎಂದು ವಿಕ್ಕಿ ಶ್ರೀನಿಯವರನ್ನು ಕೇಳುತ್ತಾರೆ. ಶ್ರೀನಿ ಗುರಾಯಿಸಿ ನೋಡಿದಾಗ, ಏನು ನಮ್ಮನ್ನೇ ಗುರಾಯಿಸ್ತಿರಾ, ನಾವು ಡಬಲ್ ಮೀಟರ್ನವ್ರು, ಇವತ್ತು ಬೆಳಿಗ್ಗೆ ಅಷ್ಟೇ ಸುಪಾರಿ ತಗೊಂಡು ಇಬ್ಬರನ್ನು ಎತ್ತಾಕಿದೀವಿ ಎನ್ನುತ್ತಾರೆ. ಮುಂದಿನ ದೃಶ್ಯದಲ್ಲಿ ಶಿವರಾಜ್ಕುಮಾರ್ ಪ್ರತ್ಯಕ್ಷ!
ಶಿವರಾಜ್ ಕುಮಾರ್ ಅವರು ಟೀ ಕಪ್ ಹಿಡಿದು ಕುಳಿತಿದ್ದನ್ನು ನೋಡಬಹುದು. ಇವರ ಎದುರು ವಿಕ್ಕಿ ಹಾಗೂ ಅಮಿತ್ ನಿಂತಿದ್ದಾರೆ. ಈ ವೇಳೆ ಶ್ರೀನಿ ಬಂದು ‘ಬೆಳಗ್ಗೆ ನನಗೆ ಆವಾಜ್ ಹಾಕಿದ್ದು ಇವರೇ’ ಎಂದು ಕಂಪ್ಲೇಂಟ್ ಮಾಡುತ್ತಾರೆ. ಶಿವರಾಜ್ ಕುಮಾರ್ ಅವರ ಗೆಟಪ್ ನೋಡಿ ವಿಕ್ಕಿ ಹಾಗೂ ಅಮಿತ್ ಸುಸ್ತಾಗುತ್ತಾರೆ. ಆಗ ಶಿವಣ್ಣ ಏನೋ ಸುಪಾರಿ ಕೊಟ್ರಂತೆ ಎಂದಾಗ ವಿಕ್ಕಿ ಇಲ್ಲ, ಅದು ತಿನ್ನೋ ಸುಪಾರಿ ಅಷ್ಟೇ ಎನ್ನುತ್ತಾರೆ, ಯಾರನ್ನೋ ಎತ್ತಾಕಿದ್ರಂತೆ ಎಂದಾಗ ಇಲ್ಲ, ನಮ್ಮ ಅಪಾರ್ಟ್ಮೆಂಟ್ನಲ್ಲಿ ಇಬ್ಬರು ಚಿಕ್ಕ ಮಕ್ಕಳು ಇದ್ದಾರೆ, ಅವರನ್ನು ಎತ್ತಿಕೊಂಡಿದ್ದೆವು ಅಷ್ಟೇ ಅಂತಾರೆ ಅಮಿತ್. ಡಬಲ್ ಮೀಟರ್ ಅಂತೇನೋ ಹೇಳ್ತಿದ್ರಂತೆ ಎಂದಾಗ ವಿಕ್ಕಿ ಇಲ್ಲ, ನೈಟ್ ಆಟೋ ಓಡಿಸಿದ್ವಿ. ಡಬಲ್ ಮೀಟರ್ ಹಾಕಿದ್ವಿ ಎನ್ನುತ್ತಾರೆ. ಯಾರಿಗೋ ಸ್ಕೆಚ್ ಹಾಕಿದ್ರಂತೆ ಎಂದಾಗ ಚಿತ್ರ ಬಿಡಿಸಿದ್ದನ್ನು ತೋರಿಸಿ ಇದೇ ಅನ್ನುತ್ತಾರೆ.
GHOST: ಸಾಮಾನ್ಯವಾಗಿ ಯಾರ್ ತಂಟೆಗೂ ಹೋಗಲ್ಲ, ಹೋದ್ರೆ ರುದ್ರಭೂಮಿಯಾಗತ್ತೆ: ಶಿವಣ್ಣ ಸಕತ್ ಪಂಚ್
ಇನ್ನುಮುಂದೆ ತಾವು ಆ ರೀತಿ ಮಾಡಿಲ್ಲ ಎಂದು ವಿವರಣೆ ನೀಡುತ್ತಾರೆ. ಆ ಸಮಯದಲ್ಲಿ ಶಿವರಾಜ್ ಕುಮಾರ್ ಎಚ್ಚರಿಕೆ ಕೊಟ್ಟು ಕಳುಹಿಸುತ್ತಾರೆ. ನಂತರ ನೀವು ಗ್ಯಾಂಗ್ಸ್ಟರಾ ಎಂದು ಕೇಳಿದಾಗ ಅಲ್ಲ, ಅವ್ರು ನನ್ನನ್ನು ಓಜಿ ಎಂದು ಕರೆಯುತ್ತಾರೆ. ಅಂದ್ರೆ ಒರಿಜಿಯನಲ್ ಗ್ಯಾಂಗ್ಸ್ಟರ್ ಎನ್ನುತ್ತಾರೆ. ಕೂಡಲೇ ಘೋಸ್ಟ್ ಚಿತ್ರದ ಪೋಸ್ಟರ್ ಬರುತ್ತದೆ. ಅಂದಹಾಗೆ ‘ಘೋಸ್ಟ್’ ಸಿನಿಮಾ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಶಿವರಾಜ್ಕುಮಾರ್ ಅವರು ‘ಘೋಸ್ಟ್’ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರ ಮಾಡಿದ್ದಾರೆ. ಟ್ರೇಲರ್ ಮೂಲಕ ಅವರು ಗಮನ ಸೆಳೆದಿದ್ದಾರೆ. ಅನುಪಮ್ ಖೇರ್ ಸೇರಿ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಶ್ರೀನಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಪ್ರಚಾರದಲ್ಲಿ ಶಿವಣ್ಣ ಭಾಗಿ ಆಗಿದ್ದಾರೆ.
ಇತ್ತೀಚೆಗೆ ಇದರ ಟ್ರೇಲರ್ ಬಿಡುಗಡೆಯಾಗಿತ್ತು. ಎರಡು ಡಿಫರೆಂಟ್ ಗೆಟಪ್ನಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಈ ಟ್ರೇಲರ್ ನೋಡಿ ಅಭಿಮಾನಿಗಳ ನಿರೀಕ್ಷೆ ಡಬಲ್ ಆಗಿದೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುವಂತಿದೆ. ಅಕ್ಟೊಬರ್ 19 ರಂದು ಎಲ್ಲಡೆ ರಿಲೀಸ್ ಆಗ್ತಿರೋ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಸಿನಿಮಾ ಪ್ರಚಾರ ಕೂಡ ಜೋರಾಗಿಯೇ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳು, ಖಡಕ್ ಡೈಲಾಗ್ಗಳಿಂದಲೇ ತುಂಬಿರುವ ‘ಘೋಸ್ಟ್’ ಟ್ರೇಲರ್ (Ghost Movie Trailer) ಈಗ ವೈರಲ್ ಆಗುತ್ತಿದೆ.
ವಿವೇಕ್ ಅಗ್ನಿಹೋತ್ರಿಯ ‘ದಿ ವ್ಯಾಕ್ಸಿನ್ ವಾರ್’ಗೆ ಆಸ್ಕರ್ನಿಂದ ವಿಶೇಷ ಮನ್ನಣೆ