
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ 'ಹೆಬ್ಬುಲಿ' ಚಿತ್ರದಲ್ಲಿ ಜೋಡಿಯಾಗಿ ಮಿಂಚಿದ ನಟಿ ಅಮಲಾ ಪೌಲ್ ಸದಾ ಪ್ರೀತಿ - ಮದುವೆ ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಗಾಸಿಪ್ ಇವರ ಬೆಸ್ಟ್ ಫ್ರೆಂಡೋ ಅಥವಾ ಇವರೇ ಗಾಸಿಪ್ ಬರ ಮಾಡಿಕೊಳ್ಳುತ್ತಾರೋ ಯಾರಿಗೆ ತಿಳಿದಿದೆ?
ಕೊರೋನಾ ವೈರಸ್ ಅಟ್ಟಹಾಸದಿಂದ ಮನೆಯಲ್ಲಿಯೇ ಲಾಕ್‌ಡೌನ್ ಆಗಿರುವ ಅಮಲಾ ಸ್ನೇಹಿತನ ಬರ್ತಡೇ ಸೆಲೆಬ್ರೇಷನ್ ಹಾಗೂ ಪಾರ್ಟಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮನೆಯಲ್ಲಿಯೇ ಪಾರ್ಟಿ ಮಾಡುತ್ತಾ ಕುಣಿದು ಕುಪ್ಪಳಿಸಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಗಂಭೀರ ಪರಿಸ್ಥಿತಿಯಲ್ಲಿ ಪಾರ್ಟಿ ಮಾಡೋದು ಸರಿನಾ?
ಫೇಸ್ ಮಾಸ್ಕ್ ಧರಿಸಿಕೊಂಡು ದೊಡ್ಡ ಮ್ಯೂಸಿಕ್ ಹಾಕಿಕೊಂಡು ಪಾರ್ಟಿ ಮಾಡುತ್ತಿರುವ ವಿಡಿಯೋವನ್ನು ಅಮಲಾ ಪೌಲ್ ಶೇರ್ ಮಾಡಿಕೊಂಡಿದ್ದಾರೆ. 'ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಂಡು ಪಾರ್ಟಿ ಮಾಡುತ್ತಿರವೆ. ನನ್ನ ಬೆಸ್ಟ್ ಫ್ರೆಂಡ್, ನನ್ನ ಕ್ರೇಜಿ ಬ್ರದರ್, ಫನ್ನಿ ಓನ್ ಅಭಿಜಿತ್ ಬರ್ತಡೇ' ಎಂದು ಬರೆದುಕೊಂಡಿದ್ದಾರೆ.
ಇದು ಹೌಸ್ ಪಾರ್ಟಿ ಏನೋ ಸರಿ, ಮಾಸ್ಕ್ ಧರಿಸಿದ್ದೀರಾ ಅದೂ ಸರಿನೇ ಆದರೆ ನೀವು ಇಂಥ ಗಂಭೀರ ಪರಿಸ್ಥಿತಿಯಲ್ಲಿ ಇಷ್ಟೊಂದು ಕುಣಿದಾಡುವುದು ಸರಿಯಲ್ಲ ಎಂದು ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಪ್ರೀತಿನಾ, ಮದುವೇನಾ?
ಅಮಲಾ ಪೌಲ್ ಇತ್ತೀಚಿಗೆ ಪ್ರಿಯಕರ ಗಾಯಕ ಭವಿಂದರ್ ಸಿಂಗ್ ಜೊತೆ ಸೈಲೆಂಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು ಆದರೆ ಎಲ್ಲಿಯೋ ಕ್ಲಾರಿಫಿಕೇಷನ್ ಕೊಟ್ಟಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಮಾತನಾಡಿದ್ದಾರೆ. ' ಪ್ರೀತಿ ವಿಚಾರವನ್ನು ನಿಮ್ಮೊಟ್ಟಿಗೆ ಹಂಚಿಕೊಂಡಿರುವೆ ಅಂದ್ಮೇಲೆ ಮದುವೆ ವಿಚಾರವನ್ನು ಬಹಿರಂಗ ಮಾಡುವೆ ಆದರೆ ಇದೆಲ್ಲಾ ಗಾಳಿ ಮಾತು ನಾನು ಸಿನಿಮಾದಲ್ಲಿ ತುಂಬಾ ಬ್ಯುಸಿಯಾಗಿರುವೆ. ಒಂದೊಳ್ಳೆ ಟೈಮ್ ನೋಡಿಕೊಂಡು ಮದುವೆಯಾಗುವೆ ಆಗ ಎಲ್ಲರನ್ನೂ ಆಹ್ವಾನಿಸುವೆ' ಎಂದು ಹೇಳಿದ್ದಾರೆ.
ಕದ್ದುಮುಚ್ಚಿ ಮದುವೆಯಾದ ಕನ್ನಡದ ನಟಿ; ವೈರಲ್ ಆಯ್ತು ಅಂತ ಫೋಟೋ ಡಿಲಿಟ್! .
ತಂದೆಯನ್ನು ಕಳೆದುಕೊಂಡ ಅಮಲಾ:
ವೈಯಕ್ತಿಕ ಜೀವನದ ಅನೇಕ ವಿಚಾರಗಳಿಂದ ಗಾಸಿಪ್‌ನಲ್ಲಿ ಸಿಲುಕಿಕೊಂಡಿರುವ ಅಮಲಾ ಇತ್ತೀಚಿಗೆ ತಂದೆಯನ್ನು ಕೆಳೆದುಕೊಂಡಿದ್ದಾರೆ. ಜನವರಿ 22ರಂದು ತಂದೆ ಪೌಲ್ ವರ್ಗಿಸ್ ಅವರನ್ನು ಕ್ಯಾನ್ಸರ್‌ನಿಂದಾಗಿ ಕಳೆದುಕೊಂಡಿದ್ದಾರೆ. ದುಃಖದ ಕ್ಷಣವನ್ನು ತಾಯಿಯೊಟ್ಟಿಗೆ ಹೇಗೆ ಎದರಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಅಪ್ಪನ ಸಾವು, ಅಮ್ಮನ ನೋವು ನೋಡಿ ಕಣ್ಣೀರಿಟ್ಟ ಖ್ಯಾತ ನಟಿ!
ಅಮಲಾ ಸಿನಿ ಹಿಸ್ಟರ್:
ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಅಮಲಾ ಪೌಲ್ ಮಾಡಿದ್ದು ಒಂದೇ ಕನ್ನಡ ಸಿನಿಮಾವಾದರೂ ಅಭಿಮಾನಿಗಳು 'ಹೆಬ್ಬುಲಿ' ನಟಿ ಎಂದು ಗುರುತಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.