
ಸಾಯಿ ಪಲ್ಲವಿ ಸಖತ್ ಚ್ಯೂಸಿ ಅಂತಲೇ ಫೇಮಸ್. ಈಕೆಗೆ ಮನಸೋತ ಹುಡುಗರು ಸಾವಿರಾರಲ್ಲ, ಲಕ್ಷ, ಕೋಟಿಯ ಹತ್ತಿರತ್ತಿರ ಇದ್ದಾರೆ. ಇಂಥಾ ಮೊಡವೆ ಕೆನ್ನೆಯ ಹುಡುಗಿ ಈಗ ಕನ್ನಡಕ್ಕೂ ಬರ್ತಿದ್ದಾಳೆ ಅಂದ್ರೆ ಕನ್ನಡ ಹುಡುಗ್ರು ಥ್ರಿಲ್ಲಾಗದೇ ಇರ್ತಾರಾ.. ಅಷ್ಟಕ್ಕೂ ಈ ರೌಡಿ ಬೇಬಿಯನ್ನು ಕನ್ನಡಕ್ಕೆ ಕರೆತರೋದು ಯಾರು, ಯಾವ ಸಿನಿಮಾದಲ್ಲಿ ಈ ಪ್ರೆಟಿ ಗರ್ಲ್ ಮಿಂಚಲಿದ್ದಾರೆ ಅನ್ನೋದರ ಬಗೆ ಹಲವರಲ್ಲಿ ಕುತೂಹಲವಿದೆ. ಆ ಕುತೂಹಲ ತಣಿಸೋ ಪ್ರಯತ್ನವಿದು.
ಸಾಯಿ ಪಲ್ಲವಿ ಅಂದ್ರೆ ಹೆಚ್ಚಿನ ಹುಡುಗ ಹುಡುಗಿಯರಿಗೆ ನೆನಪಾಗೋದು ಪ್ರೇಮಂ, ಅದರಲ್ಲಿ ಬರುವ ಮಲರ್ ಎಂಬ ಮಳೆಯಂತೆ ನಗೋ ಹುಡುಗಿ ಪಾತ್ರ. ಈ ಸಿನಿಮಾ ಮಾಡೋ ಹೊತ್ತಿಗೆ ಸಾಯಿ ಪಲ್ಲವಿ ಎಂಬಿಬಿಎಸ್ ಓದ್ತಾ ಇದ್ರು. ನಡುವೆ ಸಿಕ್ಕ ರಜೆಯಲ್ಲಿ, ಪ್ರೇಮದ ಮಳೆ ಸುರಿಸಿ ಹೋದ್ರು. ಈಕೆಯ ಡ್ಯಾನ್ಸ್, ಅಭಿನಯದ ಜೊತೆಗೆ ಕ್ಯೂಟ್ ಲುಕ್‌ಗೆ ಮನಸೋತ ಹುಡುಗರೆಷ್ಟೋ. ಅಷ್ಟೇ ಅಲ್ಲ, ಈಕೆಯ ಈ ಸಿನಿಮಾದ ಅಭಿನಯಕ್ಕೆ ಪ್ರಶಸ್ತಿಗಳ ಸುರಿಮಳೆಯಾಯ್ತು. ಫಿಲಂಫೇರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡೂ ಓದನ್ನೇ ಮುಂದುವರಿಸಿದರು. ಇನ್ನು ಮೇಲೆ ಓದಿಗೆ ಗುಡ್‌ಬಾಯ್ ಹೇಳ್ತಾರೆ ಅಂತ ಎಲ್ಲರೂ ಭಾವಿಸ್ತಿರುವಾಗ, ಈಕೆ ಎಂಬಿಬಿಎಸ್ ಓದನ್ನು ಖಂಡಿತಾ ಅರ್ಧಕ್ಕೇ ನಿಲ್ಲಿಸೋದಿಲ್ಲ ಅಂದು ಸ್ಟಡೀ ಕಂಟಿನ್ಯೂ ಮಾಡ್ತಾರೆ. ಮತ್ತೊಂದು ಬ್ರೇಕ್ ಸಿಕ್ಕಾಗ ಕಾಲೇಜು ಹುಡುಗೀರ ಕ್ರಶ್ ದುಲ್ಖರ್ ಸಲ್ಮಾನ್ ಜೊತೆಗೆ ಕಲಿ ಸಿನಿಮಾದಲ್ಲಿ ಅಭಿನಯಿಸ್ತಾರೆ. ಇದಕ್ಕೂ ಫಿಲಂಫೇರ್ ಅವಾರ್ಡ್ ಬರುತ್ತೆ.
ತೆಲುಗು ಭಾಷೆಗೆ 'ದಿಯಾ' ಸಿನಿಮಾ ಡಬ್; ಅದ್ಧೂರಿ ರಿಲೀಸ್‌ಗೆ ತಯಾರಿ ಶುರು!
ಮುಂದೆ ಓದನ್ನೆಲ್ಲ ಮುಗಿಸಿ ಸಿನಿಮಾಗಳಲ್ಲಿ ನಟಿಸಲಾರಂಭಿಸಿದಾಗ ಇವರನ್ನು ಸೌತ್ ಇಂಡಿಯಾದ ನಂಬರ್ ವನ್ ಹೀರೋಯಿನ್ ಪಟ್ಟಕ್ಕೇರಿಸುವುದು ರೌಡಿ ಬೇಬಿ ಹಾಡು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗಿರೋ ತನಕ ಎಲ್ಲರ ಫೇವರಿಟ್ ಹಾಡಾಗೋದರ ಜೊತೆಗೆ ಯೂಟ್ಯೂಬ್‌ನಲ್ಲೂ ಅತೀ ಹೆಚ್ಚು ವ್ಯೂ ಕಂಡ ಹಾಡು ಅಂತ ಫೇಮಸ್ ಆಗುತ್ತೆ. ಫಿದಾ ಸಿನಿಮಾದ ಮೂಲಕವೂ ಗಮನ ಸೆಳೆಯುತ್ತಾರೆ.
ಹೀಗೆ ಅಭಿನಯ, ಮುದ್ದು ಮುಖ, ತುಂಟ ನಗೆ, ಡ್ಯಾನ್ಸಿಂಗ್ ಸ್ಟೈಲಿನ ಮೂಲಕ ಎಲ್ಲರ ಮನ ಗೆದ್ದಿರುವ ಸಾಯಿ ಪಲ್ಲವಿ ಕನ್ನಡ ಸಿನಿಮಾಕ್ಕೂ ಕಾಲಿಡುತ್ತಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ. ಅವರನ್ನು ಕನ್ನಡಕ್ಕೆ ಕರೆತರೋದಕ್ಕೆ ಮುಂದಾಗಿರೋದು ಆಕ್ಟ್ ೧೯೭೮ ಸಿನಿಮಾದ ನಿರ್ದೇಶಕ ಮಂಸೋರೆ. ಅವರು ಈಗ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಮಾಡೋದಕ್ಕೆ ಹೊರಟಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್‌ನ್ನೆಲ್ಲ ರೆಡಿ ಮಾಡ್ಕೊಂಡು ಸಾಯಿ ಪಲ್ಲವಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಕತೆ ಹೇಳಿದ್ದಾರೆ. ಈ ಕತೆ ಸಾಯಿ ಪಲ್ಲವಿಗೂ ಸಖತ್ ಇಷ್ಟ ಆಗಿದೆ. ಅವರು ಪೈನಲ್‌ಸ್ಕ್ರಿಪ್ಟ್ ಕಳಿಸೋಕೆ ಹೇಳಿದ್ದಾರೆ. ಆದರೆ ಆ ಕೆಲಸ ಇನ್ನಷ್ಟೇ ಆಗಬೇಕಿದೆ. ಕಾರಣ ಮಂಸೋರೆ ಅವರ ಮದುವೆ. ಈಗ ತಾನೇ ಅಖಿಲಾ ಅವರ ಜೊತೆಗೆ ಸಪ್ತಪದಿ ತುಳಿದಿರುವ ಮಂಸೋರೆ ಈಗಾಗಲೇ ಹರಿವು, ನಾತಿಚರಾಮಿ, ಆಕ್ಟ್ ನಂಥಾ ಸಿನಿಮಾ ಮಾಡಿ ರಾಷ್ಟ್ರದ ಗಮನ ಸೆಳೆದವರು. ನಮ್ಮ ರಾಜ್ಯದಲ್ಲೇ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಮಂಸೋರೆ ಅವರು ಕಥೆ ಬರೆಯುತ್ತಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಇದು ನಮ್ಮ ರಾಜ್ಯದ ಕಥೆಯಾದರೂ ಎಲ್ಲರಿಗೂ ತಟ್ಟುವಂತಿದೆ ಎನ್ನುತ್ತಾರೆ ಮಂಸೋರೆ.
ಪ್ರವೀಣನ ಕ್ರಶ್ ಪಲ್ಲವಿಯ ಹೊಸ ಫೋಟೋಶೂಟ್: ಶಾರದೆ ಲುಕ್‌ನಲ್ಲಿ ಸಪ್ತ
ಈಗಾಗಲೇ ಸೂಕ್ಷ್ಮ ವಿಚಾರಗಳನ್ನಿಟ್ಟು ಸಿನಿಮಾ ಮಾಡಿರುವ ಮಂಸೋರೆ ಈ ಸಿನಿಮಾದ ಮೂಲಕ ದಕ್ಷಿಣ ಭಾರತದ ಗಮನ ಸೆಳೆಯಬಹುದು. ಅವರ ಚಿತ್ರಕ್ಕೆ ಸಾಯಿ ಪಲ್ಲವಿಯಂಥಾ ನಟಿ ಜೊತೆಗೂಡಿದರೆ ಸಿನಿಮಾದ ರೇಂಜೇ ಬದಲಾಗಬಹುದು. ಇದರ ನಡುವೆ ಆಕ್ಟ್ 1978 ರ ತೆಲುಗು ಮತ್ತು ಹಿಂದಿ ರೀಮೇಕ್ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಇಂಥಾ ಸಕ್ಸಸ್ ನಡುವೆ ಇರುವ ಮಂಸೋರೆ ಆದಷ್ಟು ಬೇಗ ಸಾಯಿ ಪಲ್ಲವಿ ಅವರ ಜೊತೆಗೆ ಹೊಸ ಸಿನಿಮಾದೊಂದಿಗೆ ಬರಲಿ ಎಂಬುದು ಕನ್ನಡಿಗರ ಆಶಯ.
ಮೋದಿ ಮಾತನ್ನು ಯಾರೂ ಕೇಳುತ್ತಿಲ್ಲ! ಅನಂತ್ ನಾಗ್ ಬೇಸರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.