
ರಾಕಿಂಗ್ ಸ್ಟಾರ್ ಯಶ್‌ಗೆ ಆರೋಗ್ಯ ಇಲಾಖೆ ಆರೋಗ್ಯದ ಪಾಠ ಮಾಡಿದೆ. ಕೆಜಿಎಫ್ ನಟ ಯಶ್‌ಗೆ ಆರೋಗ್ಯ ಇಲಾಖೆ ನೋಟಿಸ್ ಕಳುಹಿಸಿದೆ. ಕೆಜಿಎಫ್ 2 ಟೀಸರ್‌ನಲ್ಲಿ ಸಿಗರೇಟ್ ಸೇದುವ ದೃಶ್ಯಕ್ಕೆ ಕತ್ತರಿ ಹಾಕಲು ಸೂಚನೆ ನೀಡಲಾಗಿದೆ.
ಇದು ಯುವ ಸಮುದಾವನ್ನ ಸಿಗರೇಟ್ ಸೇದುವಂತೆ ಪ್ರಚೋದಿಸುತ್ತದೆ. ಅಲ್ಲದೇ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003, ಸೆಕ್ಷನ್ 5 ರ ಪ್ರಕಾರ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ವಿರುಷ್ಕಾ ಕಂದನ ಜೊತೆ ಜೊತೆಗೇ ತೈಮೂರ್ ಟ್ರೆಂಡ್ ಆಗಿದ್ದೇಕೆ..?
ಲಕ್ಷಾಂತರ ಜನ ಯುವ ಅಭಿಮಾನಿಗಳನ್ನ ನೀವು ಹೊಂದಿದ್ದೀರಿ. ಹಾಗೂ ಆ ಯುವ ಸಮುದಾಯ ನಿಮ್ಮನ್ನ ಅನುಸರಿಸುತ್ತದೆ. ಯುವ ಸಮುದಾಯ ಸಿಗರೇಟ್ ಸೇದುವ ಪ್ರಚೋದನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಇರುವ ಟೀಸರ್ ನಲ್ಲಿ ಸಿಗರೇಟ್ ಸೇದುವ ದೃಶ್ಯ ತೆಗೆಯಿರಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಟೀಸರ್ ಭಾರೀ ಸೌಂಡ್ ಮಾಡಿದ್ದು, ಈಗಾಗಲೇ 100ಮಿಲಿಯನ್ ವೀಕ್ಷಣೆ ದಾಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.