
ಇಂದು ವಸಿಷ್ಠ ಸಿಂಹ ಹುಟ್ಟುಹಬ್ಬ. ವಿಲನ್ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ಹೀರೋ ಆಗಿ ಮಿಂಚಿದ ಈ ವಿಶಿಷ್ಟನಟ ತನ್ನ ಸೌಜನ್ಯಕ್ಕೂ ಫೇಮಸ್. ಕೋವಿಡ್ ಕಾರಣ ಇವರು ಈ ಬಾರಿಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
ಈ ಕುರಿತು ಒಂದು ವೀಡಿಯೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ‘ಕೊರೋನ ಕಾರಣದಿಂದ ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ತಾವುಗಳು ಎಲ್ಲೇ ಇದ್ದರೂ ಅಲ್ಲಿಂದಲೇ ಆಶೀರ್ವಾದ ಮಾಡಿ. ಜನಜೀವನ ಮೊದಲಿನ ಸ್ಥಿತಿಗೆ ಬರಲಿ. ನಾವೆಲ್ಲರೂ ಸೇರಿಕೊಂಡು ಕೊರೋನವನ್ನು ಒಗ್ಗಟ್ಟಾಗಿ ಹೊಡೆದೋಡಿಸೋಣ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಚಿರು ಸರ್ಜಾ ಹುಟ್ಟಿದ ಹಬ್ಬ ಹೀಗಿತ್ತು: ಇಲ್ನೋಡಿ ವಿಡಿಯೋ
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದ ನಟನೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದವರು ವಸಿಷ್ಠ ಸಿಂಹ. ಅಲ್ಲಿ ಅವರ ಅಭಿನಯ ನೋಡಿ ಫಿದಾ ಆದ ಹುಡುಗೀರೂ ಬಹಳ ಮಂದಿ. ನಂತರ ಹೀರೋ ಆಗಿ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ನಂಥಾ ಸಿನಿಮಾ ಕೊಟ್ಟರು. ಟಾಲಿವುಡ್‌ಗೂ ಹೋಗಿ ಪ್ರತಿಭಾವಂತ ಅಂತ ಗುರುತಿಸಿಕೊಂಡರು.
ತೆಲುಗಿನ ‘ಒಡೆಲಾ ರೈಲ್ವೇ ಸ್ಟೇಶನ್’ ಇದೀಗ ಚಿತ್ರೀಕರಣದ ಹಂತದಲ್ಲಿದೆ. ಜೊತೆಗೆ ಮಲೆಯಾಳಂನಲ್ಲೂ ಮಿಂಚಲಿದ್ದಾರೆ. ‘ತಲ್ವಾರ್‌ಪೇಟೆ’, ‘ಮರ್ಯಾದಸ್ಥ’ ಪ್ರೊಡಕ್ಷನ್ ನಂ.1 ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.
Happy Birthday ಕೀರ್ತಿ: ಈ ಸೌತ್ ನಟಿಗೆ ಶ್ವಾನಗಳಂದ್ರೆ ಸಿಕ್ಕಾಪಟ್ಟೆ ಲವ್
ಸದ್ಯಕ್ಕೀಗ ‘ಕಾಲಚಕ್ರ’ದ ಮೂಲಕ ಸುದ್ದಿಯಲ್ಲಿದ್ದಾರೆ. ನಾಲ್ಕು ಶೇಡ್‌ಗಳಲ್ಲಿ ಇವರ ಪ್ರತಿಭೆಗೆ ಕನ್ನಡಿ ಹಿಡಿದಿರೋ ಈ ಸಿನಿಮಾ ವಸಿಷ್ಠ ಅವರಿಗೆ ದೊಡ್ಡ ಬ್ರೇಕ್ ನೀಡುತ್ತೆ ಅನ್ನೋ ನಿರೀಕ್ಷೆ ಅವರ ಫ್ಯಾನ್‌ಗಳದ್ದು.
ಕಾಲಚಕ್ರ ಮಲೆಯಾಳಂಗೆ ರಿಮೇಕ್
ಬತ್‌ರ್‍ಡೇ ಖುಷಿ ಹೆಚ್ಚಿಸುವ ಮತ್ತೊಂದು ಸುದ್ದಿ ಬಂದಿದೆ. ವಸಿಷ್ಠ ಸಿಂಹ ಅಭಿನಯದ ಸುಮಂತ್ ಕ್ರಾಂತಿ ನಿರ್ದೇಶನದ ‘ಕಾಲಚಕ್ರ’ ಮಲೆಯಾಳಂಗೆ ರಿಮೇಕ್ ಆಗುತ್ತಿದೆ. ಬಿಡುಗಡೆಗೂ ಮುನ್ನವೇ ಪರಭಾಷೆಗೆ ರಿಮೇಕ್ ಆಗುವ ಮೂಲಕ ‘ಕಾಲಚಕ್ರ’ ನಿರೀಕ್ಷೆ ಹೆಚ್ಚಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.