
ನಟಿ ರಾಗಿಣಿ ಮತ್ತು ಸಂಜನಾಗೆ ಜೈಲಿನಲ್ಲಿ ಸರಿಹೊಂದುತ್ತಿಲ್ಲ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಇದೀಗ ರಾಗಿಣಿ ಬೆನ್ನುನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಬ್ಬರ ನಡುವೆ ಭಾರೀ ವಾಗ್ವಾದ ನಡೆದಿದ್ದರೂ ಬೆನ್ನು ನೋವಿನ ಸಂದರ್ಭ ಸಂಜನಾ ಅವರೇ ರಾಗಿಣಿಗೆ ನೆರವಾಗಿದ್ದಾರೆನ್ನುವುದು ವಿಶೇಷ.
ರಾಗಿಣಿಗೆ ಜೈಲಿನಲ್ಲಿ ವಿಪರೀತ ಬೆನ್ನುನೋವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು ಎಂದಿದ್ದಾರೆ ನಟಿ. ಆದರೆ ರಾಗಿಣಿಯ ಈ ಬೇಡಿಕೆಯನ್ನು ನಿರಾಕರಿಸಲಾಗಿದೆ. ಹಾಗೆಯೇ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಲಾಗಿದೆ.
ಜೈಲಿಗೆ ಹೋದ್ರೂ ಬುದ್ದಿ ಬಂದಿಲ್ಲ; ಕಿತ್ತಾಡೋದು ನಿಲ್ಸೋದು ಇಲ್ಲ..!
ಇದೀಗ ಚಿಕಿತ್ಸೆಯ ನಂತರ ರಾಗಿಣಿಯ ಆರೋಗ್ಯ ಮೊದಲಿಗಿಂತಲೂ ಚೇತರಿಸಿಕೊಂಡಿದೆ ಎನ್ನಲಾಗಿದೆ. ಜೈಲಿಗೆ ಹೋಗುವ ಮುನ್ನ ರಾಗಿಣಿ ಸುಮಾರು 11 ದಿನಗಳ ಕಾಲ ಸಿಸಿಬಿ ವಶದಲ್ಲಿದ್ದರು.
ಡೋಪ್ ಟೆಸ್ಟ್ ಸಂದರ್ಭ ಮೂತ್ರ ಪರೀಕ್ಷೆಗೆ ನಕಲಿ ಮಾದರಿ ಕೊಟ್ಟು ಸುದ್ದಿಯಾಗಿದ್ದರು. ಕಳೆದ ತಿಂಗಳು ಎನ್‌ಡಿಪಿಎಸ್ ವಿಶೇಷ ಕೋರ್ಟ್ ರಾಗಿಣಿಯ ಜಾಮೀನು ನಿರಾಕರಿಸಿತ್ತು. ನಾಲ್ಕು ವಾರದ ಹಿಂದೆ ನಟಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.