Rakshit Shetty Birthday: ಜನ್ಮದಿನಕ್ಕೆ 'ಸಪ್ತ ಸಾಗರದಾಚೆ ಎಲ್ಲೋ ' ಚಿತ್ರದಿಂದ ಸಿಕ್ತು ಬಿಗ್‌ ಸರ್ಪ್ರೈಸ್

Published : Jun 06, 2023, 11:55 AM ISTUpdated : Jun 06, 2023, 12:06 PM IST
Rakshit Shetty Birthday: ಜನ್ಮದಿನಕ್ಕೆ 'ಸಪ್ತ ಸಾಗರದಾಚೆ ಎಲ್ಲೋ ' ಚಿತ್ರದಿಂದ ಸಿಕ್ತು ಬಿಗ್‌ ಸರ್ಪ್ರೈಸ್

ಸಾರಾಂಶ

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ 'ಸಪ್ತ ಸಾಗರದಾಚೆ ಎಲ್ಲೋ ' ಚಿತ್ರದಿಂದ ಅಭಿಮಾನಿಗಳಿಗೆ ಬಿಗ್‌ ಅಪ್‌ಡೇಟ್ ಸಿಕ್ಕಿದೆ. 

ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ರಕ್ಷಿತ್ ಶೆಟ್ಟಿ ಅವರಿಗೆ ಅಭಿಮಾನಿಗಳು, ಸಿನಿಮಾರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೆ ಬರುತ್ತಿದೆ. ರಕ್ಷಿತ್ ಶೆಟ್ಟಿ ಸಿನಿಮಾ ಅಂದರೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕುತೂಹಲ  ಹಾಗೂ ನಿರೀಕ್ಷೆ. ಪ್ರತಿ ಸಿನಿಮಾ ಮೂಲಕ ಏನಾದರೊಂದು ವಿಶೇಷತೆಯೊಂದಿಗೆ ತೆರೆಮೇಲೆ ಬರುತ್ತಾರೆ. ಚಾರ್ಲಿ ಸ್ಟಾರ್ ಮುಂದಿನ ಸಿನಿಮಾಗಳ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಅನೇಕ ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ಮತ್ತೆ ನಿರ್ದೇಶನಕ್ಕೂ ಇಳಿದಿದ್ದಾರೆ.  

ಸದ್ಯ ರಕ್ಷಿತ್ ಶೆಟ್ಟಿ ಬಹು ನಿರೀಕ್ಷೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಶೂಟಿಂಗ್ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇಂದು ಹುಟ್ಟುಹಬ್ಬದ ಪ್ರಯುಕ್ತ  ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಿಂದ ಬಿಗ್ ಸರ್ಪ್ರೈಸ್ ಸಿಕ್ಕಿದೆ. ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಎರಡು ಪಾರ್ಟ್‌ನಲ್ಲಿ ರಿಲೀಸ್ ಆಗುತ್ತಿದೆ ಎನ್ನುವ ಸುದ್ದಿಯನ್ನು ರಕ್ಷಿತ್ ಶೆಟ್ಟಿ ಬಹಿರಂಗ ಪಡಿಸಿದ್ದಾರೆ. 

ಸಪ್ತ ಸಾಗರದಾಚೆ ಎಲ್ಲೋ ಎರಡು ಪಾರ್ಟ್‌ನಲ್ಲಿ ಬರ್ತಿದೆ ಎನ್ನುವ ಸುದ್ದಿ ಜೊತೆಗೆ ರಿಲೀಸ್ ಡೇಟ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ರಿಲೀಸ್ ಡೇಟ್ ಅನ್ನು ಇದೇ ತಿಂಗಳು ಜೂನ್ 15ರಂದು ಬಹಿರಂಗ ಪಡಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ರಿವೀಲ್ ಮಾಡಿದ್ದಾರೆ. 

'ನಿಮ್ಮ ಮನು ಇಂದು ವಿಶೇಷ ಪ್ರಕಟಣೆಯೊಂದಿಗೆ ಬಂದಿದ್ದಾನೆ' ಎನ್ನುವ ಸಾಲುಗಳ ಮೂಲಕ ಪ್ರಾರಂಭಿಸುವ ರಕ್ಷಿತ್ ಶೆಟ್ಟಿ, 'ಸಮಯ, ಪ್ರೀತಿ ಮತ್ತು ಕನಸುಗಳನ್ನು ನಿಖರವಾಗಿ ಕೆತ್ತಿದ ಸಪ್ತ ಸಾಗರದಾಚೆ ಎಲ್ಲೋ ಈಗ ಎರಡು ಭಾಗಗಳಲ್ಲಿ ನಿಮ್ಮ ಮುಂದೆ ತರುತ್ತಿದ್ದೀವಿ. ಸೈಡ್ ಎ ಮತ್ತು ಸೈಡ್ ಬಿ ಎಂದು. ಈಗಾಗಲೇ ಚಿತ್ರೀಕರಣ ಮುಗಿದಿದೆ. ಎರಡು ಭಾಗಗಳ ದಿನಾಂಕವನ್ನು ಜೂನ್ 15ರಂದು ಬಹಿರಂಗ ಪಡಿಸುತ್ತೇವೆ.  ನೀವು ಪ್ರೀತಿಯಿಂದ ಸ್ವೀಕರಿಸುತ್ತೀರಿ ಎಂದು ನಾವು ಭಾವಿಸುತ್ತೇವೆ' ಎಂದು ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಪೋಸ್ಟ್ ಅಭಿಮಾನಿಗಳ ಸಂತಸ ಹೆಚ್ಚಿಸಿದೆ. ಎರಡು ಪಾರ್ಟ್‌ಗಳಲ್ಲಿ ಬರ್ತಿರುವುದು ನಿರೀಕ್ಷೆ ಮತ್ತು ಕುತೂಹಲ ದುಪ್ಪಟ್ಟಾಗಿದೆ.

ನಟಿ ಶ್ರೀನಿಧಿ ಫೋಟೋ ನೋಡಿ ರಕ್ಷಿತ್ ಹೇಳಿದ್ದೇನು? 'ಏನ್ ನಡೀತಿದೆ ಶೆಟ್ರೇ..' ಎಂದು ಕಾಲೆಳೆದ ಫ್ಯಾನ್ಸ್

ಈ ಸಿನಿಮಾ ಮುಗಿಸಿರುವ ರಕ್ಷಿತ್ ಶೆಟ್ಟಿ ಸದ್ಯ ರಿಚರ್ಡ್ ಆಂಟನಿ ಸ್ಟ್ರಿಪ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಿಚರ್ಡ್ ಆಂಟನಿ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ನಲ್ಲಿ ಮೂಡಿ ಬರುತ್ತಿದ್ದು ರಕ್ಷಿತ್ ಶೆಟ್ಟಿ ನಟನೆ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ ಕೆಲಸಕ್ಕೆ ಅಮೆರಿಕಾಗೆ ಹೋಗುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದರು. ಇತ್ತೀಚೆಗಷ್ಟೆ ಉಡುಪಿಯಲ್ಲಿ ಮಾತನಾಡಿದ್ದ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಸ್ಟ್ರಿಪ್ಟ್‌ ಕೆಲಸ ನಡೆಸುತ್ತಿದೆ. ಹಾಗಾಗಿ ಅಮೆರಿಕಾಗೆ ಹೋಗಬೇಕು ಎಂದು ಹೇಳಿದ್ದರು. ಸ್ಟ್ರಿಪ್ಟ್‌ ಕೆಲಸ ಮುಗಿಯುತ್ತಿದ್ದಂತೆ ರಿಚರ್ಡ್ ಆಂಟನಿ ಪ್ರರಾಂಭಿಸಲಿದ್ದಾರೆ. 

ದೇವನಗರಿಯ ಬಗ್ಗೆ ಮೂರ್ಖರ ಹಾಗೆ ಮಾತನಾಡಬೇಡಿ..' ಕಾಂಗ್ರೆಸ್‌ ನಾಯಕ ಮಿಥುನ್‌ ರೈ ವಿರುದ್ಧ ರಕ್ಷಿತ್‌ ಶೆಟ್ಟಿ ಕಿಡಿ!

ರಿಚರ್ಡ್ ಆಂಟನಿ ಜೊತೆಗೆ ರಕ್ಷಿತ್, ಪುಣ್ಯಕೋಟಿ ಪಾರ್ಟ್ 1 ಮತ್ತು ಪಾರ್ಟ್ 2, ಮಿಡ್ ವೇ ಟು ಮೋಕ್ಷ  ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ರಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.    ಈ ಸಿನಿಮಾಗಳು ನಿದ್ದೆ ಇಲ್ಲದಂತೆ ಮಾಡಿವೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು. ಸದ್ಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿಗೆ ಅಭಿಮಾನಿಗಳು ವಿಶ್ ಮಾಡುವ ಜೊತೆಗೆ ಬೇಗ ತೆರೆಮೇಲೆ ಬನ್ನಿ ಎಂದು ಹೇಳುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ
'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!