
ರೆಬಲ್ ಸ್ಟಾರ್ ಅಂಬರೀಷ್ ಪುತ್ರ, ನಟ ಅಭಿಷೇಕ್ ಅಂಬರೀಷ್ ದಾಂಪತ್ಯಕ್ಕೆ ಕಾಲಿಟ್ಟರು. ಬಹುಕಾಲದ ಗೆಳತಿ, ಫ್ಯಾಷನ್ ಡಿಸೈನರ್ ಅವಿವಾ ಬಿಡಪ ಜೊತೆ ಅಭಿಷೇಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ಮದುವೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಅಭಿ-ಅವಿವಾ ಮದುವೆಗೆ ಸಿನಿಮಾರಂಗದ ಗಣ್ಯರು, ರಾಜಕೀಯ ಗಣ್ಯರು ಸೇರಿದಂತೆ ವಿವಧ ಕ್ಷೇತ್ರ ಗಣ್ಯರು ಆಗಮಿಸಿ ಶುಭಹಾರಿಸಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ಮಾತ್ರವಲ್ಲದೇ ಪರಭಾಷೆಯ ತಾರೆಯರು ಅಭಿಷೇಕ್ ಮದುವೆಗೆ ಆಗಮಿಸಿ ವಿಶ್ ಮಾಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇನ್ನೂ ಕನ್ನಡದ ಸ್ಟಾರ್‌ಗಳಾದ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿ ಅಭಿಷೇಕ್ ಮತ್ತು ಅವಿವಾ ಜೋಡಿಗೆ ವಿಶ್ ಮಾಡಿದರು. ಆದರೆ ಅಭಿಷೇಕ್ ಮದುವೆಯಲ್ಲಿ ಸ್ನೇಹಿತ ನಿಖಿಲ್ ಕುಮಾರಸ್ವಾಮಿ ಗೈರು ಎದ್ದು ಕಾಣುತ್ತಿತ್ತು. ನಿಖಿಲ್ ಮತ್ತು ಅಭಿಷೇಕ್ ಇಬ್ಬರೂ ಉತ್ತಮ ಸ್ನೇಹಿತರು. ಇಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಆದರೆ ಮಂಡ್ಯ ಲೋಕಸಭೆ ಚುನಾವಣಾ ಬಳಿಕ ಇಬ್ಬರ ಸ್ನೇಹ ಹಳಸಿತ್ತು. ಅಲ್ಲಿಂದ ಮತ್ತೆ ಇಬ್ಬರೂ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರ ನಡುವೆ ಯಾವುದು ಚೆನ್ನಾಗಿಲ್ಲ ಎನ್ನುವುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.
ಸಿನಿಮಾಗೆ ವಿಶ್ ಮಾಡಿದ್ದೇ ಕೊನೆ
ಇಬ್ಬರ ಸ್ನೇಹ ಹಳಸಿದ ಬಳಿಕ ನಿಖಿಲ್, ಅಭಿಷೇಕ್ ಮೊದಲ ಸಿನಿಮಾ ಅಮರ್ ರಿಲೀಸ್ ಸಮಯದಲ್ಲಿ ವಿಶ್ ಮಾಡಿದ್ದರು. ಬಳಿಕ ಅಭಿಷೇಕ್ ಕೂಡ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದರು. 'ನಾನು ಮಾನವಿಕ ಸಂಬಂಧಗಳಿಗೆ ಬೆಲೆ ಕೊಡುತ್ತೇನೆ. ಇದನ್ನೇ ನಾನು ಚುನಾವಣಾ ಪ್ರಚಾರದ ಸಮಯದಲ್ಲಿಯೂ ಒತ್ತಿ ಹೇಳುತ್ತಿದ್ದೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದಕ್ಕೆ ಶುಭ ಕೋರುತ್ತೇನೆ. ಅಮರ್ ಸಿನಿಮಾ ಚೆನ್ನಾಗಿ ಯಶಸ್ಸು ಕಾಣಲಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಅಭಿಷೇಕ್ ಪ್ರತಿಕ್ರಿಯೆ
ನಿಖಿಲ್ ಮಾತುಗಳನ್ನ ಮೆಚ್ಚಿಕೊಂಡಿದ್ದ ಅಭಿಷೇಕ್ 'ನಿನ್ನ ಮಾತುಗಳು ಎಲ್ಲರಿಗೂ ಸ್ಫೂರ್ತಿ. ನೀನು ಯಾವಾಗಲೂ ನನ್ನ ಸ್ನೇಹಿತ. ಮಂಡ್ಯದ ಅಭಿವೃದ್ದಿ ವಿಚಾರದಲ್ಲಿ ಒಟ್ಟಿಗೆ ಕೆಲಸ ಮಾಡೋಣ' ಎಂದು ಪ್ರತಿಕ್ರಿಯೆ ನೀಡಿದ್ದರು.
ನಾವೇನು ತುಂಬಾ ಕ್ಲೋಸ್ ಅಲ್ಲ ಎಂದಿದ್ದ ನಿಖಿಲ್
ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಿಖಿಲ್, 'ತುಂಬಾ ಚಿಕ್ಕ ವಯಸ್ಸಿನಿಂದ ನಾವೇನು ಕ್ಲೋಸ್ ಸ್ನೇಹಿತರಲ್ಲ. ಈ ಬಗ್ಗೆ ಈಗ ಮತ್ತೆ ಬಹಿರಂಗವಾಗಿ ಮಾತನಾಡುವುದು ಸರಿ ಇರಲ್ಲ, ನಮ್ಮ ತಂದೆ ಒಬ್ಬ ಸ್ನೇಹಿತನಾಗಿ ಏನು ಮಾಡಬಹುದು ಅದನ್ನು ಮಾಡಿದ್ದಾರೆ' ಎಂದು ಹೇಳಿದ್ದರು.
Abhishek Ambareesh Wedding: ಅಭಿಷೇಕ್ ಮದ್ವೆಲಿ ಕಿಚ್ಚ ದಂಪತಿ, ದುಬಾರಿ ಉಡುಗೊರೆ ನೀಡಿದ ಸುದೀಪ್
ನಿಖಿಲ್ ಯಾವಾಗಲೂ ನನ್ನ ಸ್ನೇಹಿತನೇ
ಚುನಾವಣೆ ಬಳಿಕ ಮಾತನಾಡಿದ್ದ ಅಭಿಷೇಕ್ ನಾವು ಈಗಲೂ ಸ್ನೇಹಿತರು ಎಂದು ಹೇಳಿದ್ದರು. ಅವರ ಬ್ಯುಸಿಯಲ್ಲಿ ಅವರು ಇದ್ದಾರೆ, ನಮ್ಮ ಬ್ಯುಸಿಯಲ್ಲಿ ನಾವಿದ್ದೇವೆ, ಸಂಪರ್ಕ ಅಷ್ಟಿಲ್ಲ. ಆದದರೆ ಈಗಲೂ ಅವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದರು. ಆದಾದ ಬಳಿಕ ಮತ್ತೆ ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ, ಒಟ್ಟಿಗೆ ಸೇರುವುದಿರಲಿ ಒಬ್ಬರ ಬಗ್ಗೆ ಮತ್ತೊಬ್ಬರು ಎಲ್ಲಿಯೂ ಮಾತನಾಡಿಲ್ಲ ಇದು ಇಬ್ಬರ ನಡುವೆ ಯಾವುದೇ ಸ್ನೇಹ ಬಾಂಧವ್ಯ ಉಳಿಲ್ಲ ಎನ್ನುವುದು ಗೊತ್ತಾಗುತ್ತಿದೆ.
Abhishek Ambareesh Wedding: ಅಂಬಿ ಫೋಟೊಗೆ ನಮನ ಸಲ್ಲಿಸಿ ಅಭಿಷೇಕ್-ಅವಿವಾಗೆ ಶುಭಹಾರೈಸಿದ ಯಶ್-ರಾಧಿಕಾ
ಮದುವೆಗೆ ಗೈರು
ಇದೀಗ ಅಭಿಷೇಕ್ ಮದುವೆಗಾದರೂ ನಿಖಿಲ್ ಬರುತ್ತಾರಾ ಎನ್ನುವ ಕುತೂಹಲ, ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೀಗ ಅದು ಹುಸಿಯಾಗಿದೆ. ಇಂದು (ಜೂನ್ 5) ನಡೆದ ಅಭಿಷೇಕ್ ಅದ್ದೂರಿ ಮದುವೆಗೆ ನಿಖಿಲ್ ಗೈರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಲುಕಂಡಿದ್ದ ನಿಖಿಲ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಸೋತಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಕಾಣದ ನಿಖಿಲ್ ಸದ್ಯ ಸೈಲೆಂಟ್ ಆಗಿದ್ದಾರೆ. ಎಲ್ಲಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಇಂದು ಗೆಳೆಯನ ಮದುಗೂ ಗೈರಾಗುವ ಮೂಲಕ ಅಭಿಷೇಕ್ ಜೊತೆಗಿನ ಸ್ನೇಹವನ್ನು ಕಡಿದುಕೊಂಡ್ರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ನಿಖಿಲ್‌ಗೆ ಆಮಂತ್ರಣನೇ ಇಲ್ಲ?
ಮೂಲಗಳ ಪ್ರಕಾರ ನಿಖಿಲ್ ಕುಟುಂಬಕ್ಕೆ ಅಭಿಷೇಕ್ ಕಡೆಯಿಂದ ಮದುವೆ ಆಮಂತ್ರಣವೇ ಇಲ್ಲ ಎನ್ನಲಾಗಿದೆ. ಮದುವೆಗೆ ಸ್ನೇಹಿತನನ್ನೇ ಕರೆದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಇದು ನಿಜನಾ ಎನ್ನುವುದು ಅವರೇ ಬಹಿರಂಗ ಪಡಿಸಬೇಕಿದೆ.ಮೂಲಗಳ ಪ್ರಕಾರ ನಿಖಿಲ್ ಕುಟುಂಬಕ್ಕೆ ಅಭಿಷೇಕ್ ಕಡೆಯಿಂದ ಮದುವೆ ಆಮಂತ್ರಣವೇ ಇಲ್ಲ ಎನ್ನಲಾಗಿದೆ. ಮದುವೆಗೆ ಸ್ನೇಹಿತನನ್ನೇ ಕರೆದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಇದು ನಿಜನಾ ಎನ್ನುವುದು ಅವರೇ ಬಹಿರಂಗ ಪಡಿಸಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.